ಬೆಚ್ಚಿಬೀಳಿಸುವ ಸುದ್ದಿ: ನಾಯಿಕೊಡೆಗಳಂತೆ ಹುಟ್ಕೊಂಡಿದ್ದ ಕಾಂಡೋಮ್ ಕತೆಗೆ ಬಿಗ್ ಟ್ವಿಸ್ಟ್! ಸುರಂಗಮಾರ್ಗದಲ್ಲಿ ನಡೆಯುತ್ತಿದೆ ವೇಶ್ಯಾವಾಟಿಕೆ

ತುಮಕೂರು ನಗರದ ಕ್ಯಾತ್ಸಂದ್ರ ವಸತಿ ಗೃಹವೊಂದರ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಯುವತಿಯರನ್ನ ಹಾಗೂ ಐವರು ಪುರುಷರನ್ನು ಬಂಧಿಸಿದ್ದಾರೆ. ಈ ಸಮಯದಲ್ಲಿ ಒಬ್ಬ ಯುವತಿ ತಪ್ಪಿಸಿಕೊಂಡು ಪರಾರಿಯಾಗಿದ್ದಾಳೆ.

ಬೆಚ್ಚಿಬೀಳಿಸುವ ಸುದ್ದಿ: ನಾಯಿಕೊಡೆಗಳಂತೆ ಹುಟ್ಕೊಂಡಿದ್ದ ಕಾಂಡೋಮ್ ಕತೆಗೆ ಬಿಗ್ ಟ್ವಿಸ್ಟ್! ಸುರಂಗಮಾರ್ಗದಲ್ಲಿ ನಡೆಯುತ್ತಿದೆ ವೇಶ್ಯಾವಾಟಿಕೆ
ಮಳೆಗೆ ನಾಯಿಕೊಡೆಗಳು ಹುಟ್ಟುಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಕಾಂಡೋಮ್ ಪತ್ತೆ!
TV9kannada Web Team

| Edited By: Ayesha Banu

Sep 21, 2021 | 12:27 PM

ತುಮಕೂರು: ಕೆಲ ದಿನಗಳ ಹಿಂದೆ ತುಮಕೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಪತ್ತೆಯಾಗಿದ್ದ ಕಾಂಡೋಮ್ಗಳಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ರಸ್ತೆಯಲ್ಲಿ ಸಿಕ್ಕ ಕಾಂಡೋಮ್ಗಳ ರಹಸ್ಯ ಪತ್ತೆ ಹಚ್ಚಿದ್ದಾರೆ.

ತುಮಕೂರು ನಗರದ ಕ್ಯಾತ್ಸಂದ್ರ ವಸತಿ ಗೃಹವೊಂದರ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಯುವತಿಯರನ್ನ ಹಾಗೂ ಐವರು ಪುರುಷರನ್ನು ಬಂಧಿಸಿದ್ದಾರೆ. ಈ ಸಮಯದಲ್ಲಿ ಒಬ್ಬ ಯುವತಿ ತಪ್ಪಿಸಿಕೊಂಡು ಪರಾರಿಯಾಗಿದ್ದಾಳೆ. ವಸತಿ ಗೃಹದಲ್ಲಿ ಸುರಂಗ ಕೊರೆದು ಯುವತಿಯರನ್ನ ಬಚ್ಚಿಟ್ಟು ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದೆ. ಪೊಲೀಸರು ದಾಳಿ ಮಾಡಲು ತೆರಳಿದ ಸಮಯದಲ್ಲಿ ಸೂಚನೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಈ ಸೂಚನೆ ಬರುತ್ತಿದ್ದಂತೆ ಯುವತಿಯರು ಹಾಗೂ ಪುರುಷರನ್ನು ಗುಹೆಯಲ್ಲಿ ಬಚ್ಚಿಡಲಾಗುತಿತ್ತು. ಸುರಂಗ ಮಾರ್ಗ ಇರುವುದು ಗೊತ್ತಾಗದಂತೆ ನೋಡಿಕೊಳ್ಳಲಾಗಿತ್ತು ಎನ್ನಲಾಗಿದೆ.

tmk raid

ಸುರಂಗಮಾರ್ಗದಲ್ಲಿ ನಡೆಯುತ್ತಿದೆ ವೇಶ್ಯಾವಾಟಿಕೆ

ಇನ್ನೂ ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟಾನ್ಲಿ, ಪರಶುರಾಮ್ ಅವರು ಈ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದಿದ್ದರು. ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ವೇಶ್ಯಾವಾಟಿಕೆ ನಡೆಯುತ್ತಿದ್ದು, ಖಚಿತಪಟ್ಟಿದೆ.

ರಾಷ್ಟ್ರೀಯ ಹೆದ್ದಾರಿ 48 ರ ಕ್ಯಾತ್ಸಂದ್ರ ಸೇತುವೆ ಸಮೀಪ ಕಳೆದ ಕೆಲ ದಿನಗಳ ಹಿಂದೆ ಕಾಂಡೋಮ್‌ಗಳ ರಾಶಿ ಚೆಲ್ಲಾಡಿದ್ದು ಪತ್ತೆಯಾಗಿತ್ತು. ಈ ಮಾಹಿತಿಯ ಜಾಡು ಹಿಡಿದು ವಿವರ ಸಂಗ್ರಹಿಸಿದಾಗ ವಸತಿ ಗೃಹದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಗೊತ್ತಾಯಿತು. ಈ ವಿಚಾರವನ್ನು ಎಸ್‌ಪಿ ಗಮನಕ್ಕೆ ತಂದ ನಂತರ ದಾಳಿ ನಡೆದಿದೆ ಎನ್ನಲಾಗಿದೆ. ಇನ್ನೂ ಹೆದ್ದಾರಿಯಲ್ಲಿ ಕೆಲ ದಿನಗಳ ಹಿಂದೆ ಸಿಕ್ಕಿದ್ದ ಕಾಂಡೋಮ್ ಗಳು ಇಲ್ಲಿವೆ ಎನ್ನಲಾಗಿದೆ.

ಇದನ್ನೂ ಓದಿ: ಮಳೆಗೆ ನಾಯಿಕೊಡೆಗಳು ಹುಟ್ಟಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್ ಗಟ್ಟಲೆ ಕಾಂಡೋಮ್ ಪತ್ತೆ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada