ಆಸ್ಪತ್ರೆಯ ಬಾತ್ ರೂಮ್ನಲ್ಲಿ ನವಜಾತ ಹೆಣ್ಣು ಶಿಶು ಶವ ಪತ್ತೆ; ಕೊರಟಗೆರೆ ಆಸ್ಪತ್ರೆಯಲ್ಲಿ ಹೃದಯವಿದ್ರಾವಕ ಘಟನೆ
ಹೆಣ್ಣು ನವಜಾತ ಶಿಶು ಸಾವನ್ನಪ್ಪಿದೆ. ಕೊರಟಗೆರೆ ಆಸ್ಪತ್ರೆಯಲ್ಲಿ ಹೃದಯವಿದ್ರಾವಕ ಘಟನೆ ನಡೆಸಿದ್ದು, ಸುಮಾರು 8 ತಿಂಗಳ ನವಜಾತ ಶಿಶು ಸಾವನ್ನಪ್ಪಿದೆ ಎಂದು ಮೂಲಗಳು ತಿಳಿಸಿವೆ.
ತುಮಕೂರು: ಆಸ್ಪತ್ರೆಯ ಶೌಚಾಲಯದಲ್ಲಿ (Toilet) ನವಜಾತ ಹೆಣ್ಣು ಮಗುವನ್ನು ಬಿಸಾಡಿ ಹೋಗಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ(Hospital) ನಡೆದಿದೆ. ಆಸ್ಪತ್ರೆಯ ಶೌಚಾಲಯವನ್ನು ಸ್ವಚ್ಛಗೊಳಿಸಲು ಸಿಬ್ಬಂದಿ ಹೋದಾಗ ನವಜಾತ ಶಿಶು(Baby) ಪತ್ತೆಯಾಗಿದೆ. ಸದ್ಯ ಹೆಣ್ಣು ನವಜಾತ ಶಿಶು ಸಾವನ್ನಪ್ಪಿದೆ. ಕೊರಟಗೆರೆ ಆಸ್ಪತ್ರೆಯಲ್ಲಿ ಹೃದಯವಿದ್ರಾವಕ ಘಟನೆ ನಡೆಸಿದ್ದು, ಸುಮಾರು 8 ತಿಂಗಳ ನವಜಾತ ಶಿಶು ಸಾವನ್ನಪ್ಪಿದೆ ಎಂದು ಮೂಲಗಳು ತಿಳಿಸಿವೆ.
10 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದ ಕಾರಣ ವಿದ್ಯುತ್ ಕಡಿತ
ತುಮಕೂರು: ಕಳೆದ 10 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದೆ 14,440 ರೂಪಾಯಿ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ನಾಡಕಚೇರಿಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ನಾಡಕಚೇರಿಯಲ್ಲಿ ವಿದ್ಯುತ್ ಇಲ್ಲದೆ ದಾಖಲೆಗಳು, ಅರ್ಜಿಗಳನ್ನು ಸ್ವೀಕರಿಸದ ಹಿನ್ನೆಲೆ ಸಾರ್ವಜನಿಕರ ಪರದಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಲ್ ಕಟ್ಟದೇ ನಾಡಕಚೇರಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರಿಂದ ಇಂದು ನಮಗೆ ಸಂಕಷ್ಟ ಎದುರಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಸರ್ಕಾರಿ ವೈದ್ಯರ ನಿರ್ಲಕ್ಷ್ಯ ಆರೋಪ; ತಾಯಿ, ನವಜಾತ ಶಿಶು ಸಾವು
ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಹೊಸಕೆರೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದುರಾಗಿದ್ದು ಸರ್ಕಾರಿ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ತಾಯಿ-ಮಗು ಬಲಿಯಾದ ಘಟನೆ ನಡೆದಿದೆ. ಮಧುಗಿರಿ ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಮದ ನಿವಾಸಿ ಕಮಲಮ್ಮ ಮತ್ತು ನವಜಾತ ಶಿಶು ಮೃತಪಟ್ಟಿದೆ.
ಮೃತ ಕಮಲಮ್ಮ ಹೆರಿಗೆಗೆಂದು ಹೊಸಕೆರೆ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಯಾವ ವೈದ್ಯರೂ ಇಲ್ಲದ ಕಾರಣ ಕುಟುಂಬಸ್ಥರು ಪರದಾಡಿದ್ದಾರೆ. ಬಳಿಕ ನರ್ಸ್ಗಳೇ ಚಿಕಿತ್ಸೆ ಕೊಟ್ಟಿದ್ದಾರೆ. ನರ್ಸ್ಗಳ ಚಿಕಿತ್ಸೆ ಬಳಿಕ ನವಜಾತ ಶಿಶು ಮೃತಪಟ್ಟಿದ್ದು ತಾಯಿ ಸ್ಥಿತಿ ಚಿಂತಾಜನಕವಾಗಿದೆ. ಈ ವೇಳೆ ತಾಯಿಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಇಲ್ಲದೇ ಕಮಲಮ್ಮ ಕುಟುಂಬಸ್ಥರು ಒದ್ದಾಡಿದ್ದಾರೆ. ಕೊನೆಗೆ ಕಾರಿನಲ್ಲಿ ತಾಲೂಕು ಆಸ್ಪತ್ರೆಗೆ ಕರಿದೊಯ್ಯುವ ಮಾರ್ಗ ಮಧ್ಯೆ ಕಮಲಮ್ಮ ಪ್ರಾಣ ಬಿಟ್ಟಿದ್ದಾರೆ. ಹೊಸಕೆರೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಆರೋಪ ಕೇಳಿ ಬಂದಿದ್ದು ವೈದ್ಯರ ನಿರ್ಲಕ್ಷ್ಯಕ್ಕೆ ಹಸುಗೂಸು ಹಾಗೂ ತಾಯಿ ಬಲಿಯಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವೈದ್ಯರ ಹಾಗೂ ಸಿಬ್ಬಂದಿ ವಿರುದ್ಧ ಮೃತ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಸ್ಪತ್ರೆಯಲ್ಲಿ ಡಾಕ್ಟರೇ ಇರಲಿಲ್ಲ. ನರ್ಸ್ಗಳೇ ನಾರ್ಮಲ್ ಡಿಲೇವರಿ ಮಾಡ್ತೀನಿ ಅಂದ್ರು. ಆ ಮೇಲೆ ಮಗುನ ಹೊರಕ್ಕೆ ತೆಗೆದ್ರು. ಮಗು ಅಳ್ತಾ ಇರಲಿಲ್ಲ. ತಲೆಯಲ್ಲಿ ನೀರು ತುಂಬ್ಕೊಂಡಿದೆ ದೊಡ್ಡ ಆಸ್ಪತ್ರೆಗೆ ಕರ್ಕೊಂಡು ಹೋಗಿ ಅಂದ್ರು. ಆಂಬುಲೆನ್ಸ್ಗೆ ಫೋನ್ ಮಾಡುದ್ರೆ ಸರಿಯಾದ ಪ್ರತಿಕ್ರಿಯೆ ಇಲ್ಲ. ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ-ಮಗು ಪ್ರಾಣ ಬಿಟ್ಟಿದ್ದಾರೆ ಎಂದು ಮೃತ ಮಹಿಳೆಯ ಗಂಡ ಕಣೀರು ಹಾಕಿದ್ದಾರೆ.
ಇದನ್ನೂ ಓದಿ:
ಚರಂಡಿಯಲ್ಲಿ ಬಿದ್ದಿದ್ದ ನವಜಾತು ಶಿಶುವನ್ನು ಪತ್ತೆ ಹಚ್ಚಿದ್ದು ಬೀದಿ ಬೆಕ್ಕುಗಳು; ಪೊಲೀಸರಿಂದ ರಕ್ಷಣೆ
ಬಳ್ಳಾರಿ: ಕಾಲುವೆ ದಡದಲ್ಲಿ 3 ವರ್ಷದ ಮಗು ಪತ್ತೆ; ಮಗುವನ್ನು ಬಿಟ್ಟು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
Published On - 11:15 am, Thu, 24 February 22