ಬೇಡ ಜಂಗಮ ಸಮಾವೇಶಕ್ಕೆ ಅನುಮತಿ ನಿರಾಕರಣೆ: ಸಮಾವೇಶಕ್ಕೆ ತೆರಳುತ್ತಿರುವವರನ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದ ಪೊಲೀಸ್
ಇಂದು ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬೇಡ ಜಂಗಮ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು ಎನ್ನಲಾಗಿದೆ. ಆದರೆ ಅನುಮತಿ ಇಲ್ಲದ ಕಾರಣ ಸುಮಾರು 30ಕ್ಕೂ ಹೆಚ್ಚು ಬಸ್ಗಳು, 50 ಕ್ರೂಸರ್ಳನ್ನ ಪೊಲೀಸರು ತಡೆದಿದ್ದಾರೆ.
ತುಮಕೂರು: ಬೇಡ ಜಂಗಮ ಸಮಾವೇಶಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆ ಸಮಾವೇಶಕ್ಕೆ ತೆರಳುತ್ತಿರುವವರನ್ನ ಪೊಲೀಸರು (Police) ತಡೆದಿರುವಂತಹ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಕರಜೀವನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರ ಟೋಲ್ ಬಳಿ ನಡೆದಿದೆ. ಉತ್ತರ ಕರ್ನಾಟಕ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದವರು ಆಗಮಿಸುತ್ತಿದ್ದು, ಅನುಮತಿ ಇಲ್ಲ ಎಂದು ಪೊಲೀಸರು ತಡೆದಿದ್ದಾರೆ. ಮೀಸಲಾತಿ ಹೆಚ್ಚಳ ಒತ್ತಾಯಿಸಿ ಇಂದು ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿತ್ತು ಎನ್ನಲಾಗಿದೆ. ಸುಮಾರು 30ಕ್ಕೂ ಹೆಚ್ಚು ಬಸ್ಗಳು, 50 ಕ್ರೂಸರ್ಳನ್ನ ಪೊಲೀಸರು ತಡೆದಿದ್ದಾರೆ. ಸಮಾವೇಶಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಪೊಲೀಸರು ತಡೆದಿದ್ದು, ಸ್ಥಳದಲ್ಲೇ ತುಮಕೂರು ಎಸ್.ಪಿ ರಾಹುಲ್ ಕುಮಾರ್ ಮೊಕ್ಕಾಂ ಹೂಡಿದ್ದಾರೆ.
ಇದನ್ನೂ ಓದಿ: Petrol Price Today: ಪೆಟ್ರೋಲ್ ಡೀಸೆಲ್ ಬೆಲೆ ಯಥಾಸ್ಥಿತಿ; ದೇಶದ ವಿವಿಧ ನಗರಗಳಲ್ಲಿ ಇಷ್ಟಿದೆ ದರ
ಸ್ಥಳದಲ್ಲೇ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಟೋಲ್ ಬಳಿಯೇ ಬೇಡ ಜಂಗಮ ಸಮುದಾಯದವರು ಪ್ರತಿಭಟನೆ ಕುಳಿತಿದ್ದಾರೆ. ಬೆಂಗಳೂರಿಗೆ ಸಮಾವೇಶಕ್ಕೆ ಬಿಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಸಮಾವೇಶಕ್ಕೆ ಹೊರಟಿದ್ದವರನ್ನ ತಡೆದ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕಿಲೋಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ. ಬೆಳ್ಳಂಬೆಳಿಗ್ಗೆ ಬೆಂಗಳೂರು ಕಡೆ ಹೋಗುವವರೆಗೆ ಶಾಕ್ ಆಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಜೊತೆಗೆ ದಾವಣಗೆರೆ, ಹುಬ್ಬಳ್ಳಿ, ಚಿತ್ರದುರ್ಗ ಕಡೆಯಿಂದ ಬರುವ ವಾಹನ ಸವಾರರು ಪರದಾಡುವಂತ್ತಾಗಿದೆ. ಸರ್ಕಾರದ ಆದೇಶ ಬರೋವರೆಗೂ ಈ ಜಾಗ ಬಿಟ್ಟು ಕದಲಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದ್ದು, ರಾಷ್ಟ್ರೀಯ ಹೆದ್ದಾರಿ 48ರಲ್ಲಿ 20ಕ್ಕೂ ಹೆಚ್ಚು ಜಿಲ್ಲೆಗಳ ಸಂಪರ್ಕ ಹೊಂದಿದೆ.
ಕರಜೀವನಹಹಳ್ಳಿ ಟೋಲ್ ಗೇಟ್ ಬಳಿ ಜನಸಾಗರ
ಕರಜೀವನಹಹಳ್ಳಿ ಟೋಲ್ ಗೇಟ್ ಬಳಿ ಎರಡು ಸಾವಿರಕ್ಕೂ ಹೆಚ್ಚು ಬೇಡ ಜಂಗಮ ಸಮುದಾಯದವರು ಜಮಾವಣೆಗೊಂಡಿದ್ದು, ರಸ್ತೆಯಲ್ಲೇ ಜನರು ಪ್ರತಿಭಟನೆ ಕುಳಿತಿದ್ದಾರೆ. ರಸ್ತೆಯ ಎರಡು ಬದಿಯಲ್ಲಿ ಜನಸಾಗರ ನೆರದಿದ್ದು, ಸುಮಾರು 20 ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ. ಹಲವು ವರ್ಷಗಳ ಹಿಂದೆಯೇ ಸಮಾಜಕ್ಕೆ ಮೀಸಲಾತಿ ಇದೆ. ಆದರೆ ಸರ್ಕಾರ ನೀಡಿಲ್ಲ. ಇದನ್ನ ಒತ್ತಾಯಿಸಿ ಇಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿತ್ತು. ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು, ಕೊಪ್ಪಳ, ದಾವಣಗೆರೆ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಿಂದ ಸಮುದಾಯದವರು. ಆಗಮಿಸುತ್ತಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕರಜೀವನಹಳ್ಳಿ ಟೋಲ್ ಬಳಿ ಸಮುದಾಯದವರು ಮೊಕ್ಕಾಂ ಹೂಡಿದ್ದಾರೆ.
Published On - 8:53 am, Thu, 30 June 22