ತುಮಕೂರು: ಸ್ತ್ರೀಯರ ಶೌಚಾಲಯದಲ್ಲಿ ವಿಡಿಯೋ ಮಾಡುತ್ತಿದ್ದವನಿಗೆ ಗೂಸಾ
Tumakur News: ಸ್ಕ್ಯಾನಿಂಗ್ ಸೆಂಟರ್ನಲ್ಲಿ ಕೆಲಸ ಮಾಡ್ತಿದ್ದ ಹರೀಶ್ನಿಂದ ಈ ದುಷ್ಕೃತ್ಯ ಎಸಗಲಾಗುತ್ತಿತ್ತು ಎಂದು ತಿಳಿದುಬಂದಿದೆ. ಚಾಮರಾಜನಗರ ಮೂಲದ ಹರೀಶ್ಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ.

ತುಮಕೂರು: ಸ್ತ್ರೀಯರ ಶೌಚಾಲಯದಲ್ಲಿ ವಿಡಿಯೋ ತೆಗೀತಿದ್ದವನಿಗೆ ಗೂಸಾ ನೀಡಿದ ಘಟನೆ ತುಮಕೂರಿನ ವಿಶ್ವ ಗುರು ಸ್ಕ್ಯಾನಿಂಗ್ ಸೆಂಟರ್ನಲ್ಲಿ ನಡೆದಿದೆ. ಸ್ಕ್ಯಾನಿಂಗ್ ಸೆಂಟರ್ನಲ್ಲಿ ಕೆಲಸ ಮಾಡ್ತಿದ್ದ ಹರೀಶ್ನಿಂದ ಈ ದುಷ್ಕೃತ್ಯ ಎಸಗಲಾಗುತ್ತಿತ್ತು ಎಂದು ತಿಳಿದುಬಂದಿದೆ. ಚಾಮರಾಜನಗರ ಮೂಲದ ಹರೀಶ್ಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಸಾರ್ವಜನಿಕರು, ಮಹಿಳೆಯರಿಂದ ಹರೀಶ್ಗೆ ಧರ್ಮದೇಟು ಕೊಡಲಾಗಿದೆ.
ಆತ ಸ್ಕ್ಯಾನಿಂಗ್ ಸೆಂಟರ್ನ ಟಾಯ್ಲೆಟ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಹರೀಶ್, ಮೊಬೈಲ್ ಇರಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ. ಹರೀಶ್ನ ಮೊಬೈಲ್ನಲ್ಲಿ ಮಹಿಳೆಯರ ಬೆತ್ತಲೆ ವಿಡಿಯೋ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಹೊಸಬಡಾವಣೆ ಠಾಣಾ ಪೊಲೀಸರ ವಶಕ್ಕೆ ಹರೀಶ್ ಸಿಕ್ಕಿಬಿದ್ದಿದ್ದಾನೆ.
ಗದಗ: ಮಹಿಳೆಗೆ ಅನೈತಿಕ ಸಂಬಂಧ ಇದೆ ಎಂದು ಥಳಿತ ಮಹಿಳೆಗೆ ಅನೈತಿಕ ಸಂಬಂಧ ಇದೆ ಎಂದು ಅರೆಬೆತ್ತಲೆ ಮಾಡಿ ಮಹಿಳೆ ಒಬ್ಬಾಕೆಗೆ ಹಿಗ್ಗಾಮುಗ್ಗಾ ಥಳಿಸಿದ ಆರೋಪ ಕೇಳಿಬಂದಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಳ್ಳಿಕೇರಿಯಲ್ಲಿ ಘಟನೆ ನಡೆದಿದೆ. ಮಹಿಳೆಯನ್ನು ಗ್ರಾಮದ ನಡು ರಸ್ತೆಯಲ್ಲಿ ಎಳೆದು ಅರೆಬೆತ್ತಲೆ ಮಾಡಿ ಥಳಿಸಿರುವ ಆರೋಪ ಕೇಳಿಬಂದಿದೆ. ಗಾಯಾಳು ಮಹಿಳೆಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಾಚಪ್ಪ, ಬಸು, ಮಂಜುನಾಥ, ಅಂದಪ್ಪ, ಸಿದ್ದವ್ವ, ವಿಜಯಲಕ್ಷ್ಮೀ, ಬಸಮ್ಮ ವಿರುದ್ಧ ಹಲ್ಲೆ ಆರೋಪ ಇದೆ. ಆದರೆ, ಈ ಬಗ್ಗೆ ದೂರು ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧ ಹಲ್ಲೆಗೊಳಗಾದವರು ಆರೋಪ ಮಾಡಿದ್ದಾರೆ.
ರಾಯಚೂರು: ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ವಶ ಉಪ್ಪರಾಳದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ ವೇಳೆ ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆಯಲಾಗಿದೆ. ರಾಯಚೂರು ತಾಲೂಕಿನ ಉಪ್ಪರಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಉಪ್ಪರಾಳದ ಸಿದ್ದನಗೌಡ ಜಮೀನಿನಲ್ಲಿ ಬೆಳೆದಿದ್ದ ಗಾಂಜಾ ವಶಪಡಿಸಲಾಗಿದೆ.
ಇದನ್ನೂ ಓದಿ: ಹಾಸನ: ಸಮವಸ್ತ್ರದಲ್ಲೇ ಪೊಲೀಸರ ಎಣ್ಣೆ ಪಾರ್ಟಿ; ವಿಡಿಯೋ ವೈರಲ್
ಇದನ್ನೂ ಓದಿ: ಮಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣ; ಮಹಿಳಾ ವೇದಿಕೆ ಸದಸ್ಯೆ ವಿರುದ್ಧವೇ ಎಫ್ಐಆರ್ ದಾಖಲು
Published On - 4:38 pm, Tue, 19 October 21