AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tumakuru: ಸಿದ್ಧಗಂಗಾ ಮಠದ ಉತ್ತರಾಧಿಕಾರಿ ನೇಮಕ: ಮೇ 23ರಂದು ಪಟ್ಟಾಧಿಕಾರ

ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಸಿದ್ಧಗಂಗಾ ಪಾಲಿಟೆಕ್ನಿಕ್​ನಲ್ಲಿ ಉಪನ್ಯಾಸಕನಾಗಿರುವ ಮನೋಜ್ ಕುಮಾರ್​ ಅವರನ್ನು ನೇಮಕ ಮಾಡಿ ಸಿದ್ದಲಿಂಗ ಸ್ವಾಮೀಜಿ ಆದೇಶ ಹೊರಡಿಸಿದ್ದಾರೆ.

Tumakuru: ಸಿದ್ಧಗಂಗಾ ಮಠದ ಉತ್ತರಾಧಿಕಾರಿ ನೇಮಕ: ಮೇ 23ರಂದು ಪಟ್ಟಾಧಿಕಾರ
ಸಿದ್ಧಗಂಗಾ ಮಠದ ಉತ್ತರಾಧಿಕಾರಿ ನೇಮಕ
ಗಂಗಾಧರ​ ಬ. ಸಾಬೋಜಿ
|

Updated on:Apr 19, 2023 | 8:16 PM

Share

ತುಮಕೂರು: ಸಿದ್ಧಗಂಗಾ ಮಠದ (Siddaganga Mutt) ಉತ್ತರಾಧಿಕಾರಿಯಾಗಿ ಸಿದ್ಧಗಂಗಾ ಪಾಲಿಟೆಕ್ನಿಕ್​ನಲ್ಲಿ ಉಪನ್ಯಾಸಕನಾಗಿರುವ ಮನೋಜ್ ಕುಮಾರ್​ ಅವರನ್ನು ನೇಮಕ ಮಾಡಿ ಸಿದ್ದಲಿಂಗ ಸ್ವಾಮೀಜಿ ಆದೇಶ ಹೊರಡಿಸಿದ್ದಾರೆ. ಮೈಲನಹಳ್ಳಿಯ ಷಡಕ್ಷರಿ, ವಿರೂಪಾಕ್ಷಮ್ಮ ದಂಪತಿಯ ಪುತ್ರ ಮನೋಜ್​ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲನಹಳ್ಳಿ ನಿವಾಸಿ. ಮೇ 23ರ ಬಸವ ಜಯಂತಿಯಂದು ನಿರಂಜನ ಪಟ್ಟಾಧಿಕಾರ ನೆರವೇರಲಿದೆ. ಸಿದ್ದಗಂಗಾ ಮಠದ ಜೊತೆಗೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕಂಚುಗಲ್​ ಬಂಡೇಮಠಕ್ಕೆ K.M.ಹರ್ಷ ಎನ್ನುವವರು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. K.M.ಹರ್ಷ ಅವರು ತುಮಕೂರು ತಾಲೂಕಿನ ಕಾಳೇನಹಳ್ಳಿ ನಿವಾಸಿಯಾಗಿದ್ದಾರೆ. ದೇವನಹಳ್ಳಿಯ ಬಸವಕಲ್ಯಾಣ ಮಠಕ್ಕೆ ಮಂಡ್ಯ ಜಿಲ್ಲೆಯ ಬಿಳುಗಲಿ ನಿವಾಸಿ ಗೌರೀಶ್​ ಕುಮಾರ್​ ನೇಮಕ ಮಾಡಲಾಗಿದೆ.

ತ್ರಿವಿಧ ದಾಸೋಹಿ ಮಠ ಎಂದು ವಿಶ್ವಖ್ಯಾತಿ ಪಡೆದಿರುವ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಉತ್ತರಾಧಿಕಾರಿಯಾಗಿ ಸಿದ್ಧಲಿಂಗ ಸ್ವಾಮೀಜಿ ಆಡಳಿತ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಈಗ ನಡೆದಿದೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತೋತ್ಸವ: ವಾಹನ ಸಂಚಾರ, ಪಾರ್ಕಿಂಗ್, ಊಟೋಪಚಾರ ವ್ಯವಸ್ಥೆಯ ಬಗ್ಗೆ ಇಲ್ಲಿದೆ ಮಾಹಿತಿ

ಸಿದ್ಧಗಂಗಾ ಮಠದಲ್ಲಿ ಮುಂಜಾನೆ ಸುಪ್ರಭಾತ ಬಂದ್

ರಾಜ್ಯದಲ್ಲಿ ಮಾತ್ರವಲ್ಲದೆ ದೇಶ, ವಿದೇಶಗಳಲ್ಲೂ ಪ್ರಸಿದ್ಧಿ ಪಡೆದ ಜಿಲ್ಲೆಯ ಕ್ಯಾತ್ಸಂದ್ರ ಬಳಿಯಿರುವ ಸಿದ್ಧಗಂಗಾ ಮಠದಲ್ಲಿ ಕಳೆದ ಹಲವು ವರ್ಷಗಳಿಂದ ಹಾಕಿಕೊಂಡು ಬರುತ್ತಿದ್ದ ಸುಪ್ರಭಾತವನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿದೆ. ಬೆಳಗ್ಗಿನ ಸುಪ್ರಭಾತ ನಿದ್ದೆಗೆ ಭಂಗ ಉಂಟುಮಾಡುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನಲೆ ಮಠದ ಸ್ವಾಮೀಜಿ ಸುಪ್ರಭಾತ ಹಾಕದಂತೆ ಸೂಚಿಸಿದ್ದಾರೆ ಎನ್ನಲಾಗಿತ್ತು.

ಸುಪ್ರಭಾತದ ವಿರುದ್ಧ ಠಾಣೆ ಮೆಟ್ಟಿಲೇರಿದ ವ್ಯಕ್ತಿ ಗಿರಿನಗರ ನಿವಾಸಿಯಾಗಿದ್ದು, ಬೆಂಗಳೂರಿನ ವಿಧಾನಸೌಧದಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿತ್ತು. ಈತನ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ: ಕುತೂಹಲ ಕೆರಳಿಸಿದ ಸುದೀಪ್-ಇಂದ್ರಜಿತ್ ಸಿದ್ಧಗಂಗಾ ಮಠ ದಿಢೀರ್​ ಭೇಟಿ

ಸಿದ್ಧಗಂಗಾ ಮಠ ಯಾರಿಗೂ ಗೊತ್ತಿಲ್ಲ ಹೇಳಿ? ಹಳ್ಳಿಯಿಂದ ದಿಲ್ಲಿವರೆಗೂ ದೇಶದಿಂದ ವಿದೇಶದವರೆಗೂ ಪ್ರಸಿದ್ಧವಾಗಿರುವ ಕ್ಷೇತ್ರ ಸಿದ್ದಗಂಗಾ ಮಠ. ಇದುವರೆಗೆ ಯಾರೇ ಆಡಳಿತ‌ ನಡೆಸಿದರೂ ಆ ಸರ್ಕಾರದ ಮುಖ್ಯಸ್ಥರಿಂದಲೂ ಹಿಡಿದು ಪ್ರತಿಯೊಬ್ಬರೂ ಕೂಡ ಮಠಕ್ಕೆ ಬಂದು ಹೋಗಿದ್ದಾರೆ. ಪ್ರಧಾನಿಗಳಿಂದ ಹಿಡಿದು ಎಲ್ಲಾ ಪಕ್ಷದ ನಾಯಕರು ಕೂಡ ಮಠಕ್ಕೆ ಭೇಟಿ ನೀಡಿದ್ದಾರೆ. ಹೀಗಿರುವಾಗ ಮಠದಲ್ಲಿ ಬೆಳಗಿನ ಜಾವ ಪ್ರತಿ ದಿನ ಬೆಳಗಿನ ಜಾವ ಹಾಕುತ್ತಿದ್ದ ಸುಪ್ರಭಾತವೂ ನಿದ್ರೆ ಮಾಡಲು ತೊಂದೆಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಠಾಣೆ ಮೆಟ್ಟಿಲೇರಿದ್ದರು.

ಬೆಳಗಿನ ಜಾವ 4.45 ರಿಂದ 5 ಗಂಟೆವೆಗೆ ಹಾಕಲಾಗುತ್ತಿದ್ದ ಸುಪ್ರಭಾತ ಧ್ವನಿವರ್ದಕ ನಿದ್ರೆಗೆ ತೊಂದರೆಯಾಗಿ ಕಿರಿಕಿರಿ ಉಂಟು ಮಾಡುತ್ತಿದೆ. ಇದನ್ನ ನಿಲ್ಲಿಸುವಂತೆ ವ್ಯಕ್ತಿವೋರ್ವ ಕ್ಯಾತ್ಸಂದ್ರ ಪೊಲೀಸ್ ಠಾಣೆ ಹಾಗೂ ತುಮಕೂರು ಎಸ್​ಪಿ ಕಚೇರಿಗೆ ಮೇಲ್ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿತ್ತು. ಇದನ್ನ ಗಮನಿಸಿದ ಕ್ಯಾತ್ಸಂದ್ರ ಪೊಲೀಸರು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳ ಗಮನಕ್ಕೆ ತಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:23 pm, Wed, 19 April 23

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ