AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ಧಗಂಗಾ ಮಠದ ಅನುದಾನ, ಟೆಂಡರ್ ಮುಂದುವರಿಸಲು ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್

ಸಿದ್ಧಗಂಗಾ ಮಠಕ್ಕೆ ಅನುದಾನ ತಡೆಹಿಡಿದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ ಅನುದಾನ ಮುಂದುವರಿಸಲು ಸೂಚನೆ ನೀಡಿದ್ದಾರೆ.

ಸಿದ್ಧಗಂಗಾ ಮಠದ ಅನುದಾನ, ಟೆಂಡರ್ ಮುಂದುವರಿಸಲು ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್
ಸಿದ್ದಗಂಗಾ ಮಠ ಅನುದಾನಕ್ಕೆ ಸಿಎಂ ಗ್ರೀನ್​ ಸಿಗ್ನಲ್​
ಕಿರಣ್ ಹನುಮಂತ್​ ಮಾದಾರ್
|

Updated on:Jun 01, 2023 | 9:05 AM

Share

ತುಮಕೂರು: ಸಿದ್ಧಗಂಗಾ ಮಠಕ್ಕೆ ಅನುದಾನ ತಡೆಹಿಡಿದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)ನವರು ಮತ್ತೆ ಅನುದಾನ ಮುಂದುವರಿಸಲು ಸೂಚನೆ ನೀಡಿದ್ದಾರೆ. ಹೌದು ಸಿದ್ಧಗಂಗಾ ಮಠಕ್ಕೆ ತಡೆಹಿಡಿದಿದ್ದ 9.90 ಕೋಟಿ ಅನುದಾನವನ್ನ ಮುಂದುವರಿಸಲು ಲೋಕೋಪಯೋಗಿ ಇಲಾಖೆಗೆ (PWD)ಗೆ ಸೂಚನೆ ನೀಡಲಾಗಿದೆ. ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವ ಹಿನ್ನೆಲೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶೇಷ ಪ್ರಕರಣದಡಿ ಅನುದಾನ ನೀಡಿ, ಕಾಮಗಾರಿ ಮುಂದುವರಿಸಲು ಸಿಎಂ ಸಿದ್ದರಾಮಯ್ಯ ಅನುಮತಿ ನೀಡಿದ್ದಾರೆ.

ಪ್ರಾರಂಭವಾಗದಿರುವ ಕಾಮಗಾರಿಗಳ ಮರುಪರಿಶೀಲನೆಗಾಗಿ ತಾತ್ಕಾಲಿಕವಾಗಿ ತಡೆ ಹಿಡಿದಿದ್ದ ಸರ್ಕಾರ

ಇನ್ನು ಲೋಕೋಪಯೋಗಿ ಇಲಾಖೆಯಲ್ಲಿ ಇನ್ನೂ ಪ್ರಾರಂಭವಾಗದಿರುವ ಕಾಮಗಾರಿಗಳ ಮರುಪರಿಶೀಲನೆಗಾಗಿ ತಾತ್ಕಾಲಿಕವಾಗಿ ಸರ್ಕಾರ ತಡೆ ಹಿಡಿದಿತ್ತು. ಇದರಲ್ಲಿ 9.90 ಕೋಟಿ ವೆಚ್ಚದ ಸಿದ್ದಗಂಗಾ ಮಠದ ವಸತಿ ನಿಲಯದ ಕಾಮಗಾರಿಯೂ ಸೇರಿತ್ತು. ಇದೀಗ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಂದುವರೆಸುವಂತೆ ಸಿದ್ದರಾಮಯ್ಯ ಸೂಚನೆ‌ ನೀಡಿದ್ದಾರೆ.

ಇದನ್ನೂ ಓದಿ:BZ Zameer Ahmed: ಸಿದ್ದಗಂಗಾ ಮಠ ಸಿದ್ದಲಿಂಗ ಶ್ರೀಗಳ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್!

ಸಿದ್ದಗಂಗಾ ಮಠದ ಅನುದಾನಕ್ಕೆ ಬ್ರೇಕ್; ಕಾಂಗ್ರೆಸ್ ವಿರುದ್ಧ ಬೀದಿಗಿಳಿದು ಹೋರಾಟದ ಎಚ್ಚರಿಕೆ

ಹೌದು ಸಿದ್ದಗಂಗಾ ಮಠಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆ ಮಾಡಿದ್ದ 10 ಕೋಟಿ ರೂ., ಅನುದಾನಕ್ಕೆ ಕಾಂಗ್ರೆಸ್ ಸರ್ಕಾರ ತಡೆ ನೀಡಿದ್ದ ವಿಚಾರ, ವಿವಾದದ ಕಿಡಿ ಎಬ್ಬಿಸಿತ್ತು. ಶ್ರೀಮಠಕ್ಕೆ ಅನುದಾನವನ್ನು ಶಾಶ್ವತವಾಗಿ ತಡೆಹಿಡಿಯುವ ಧಮ್ಮು ಈ ಸರ್ಕಾರಕ್ಕಿಲ್ಲ . ತಡೆ ಹಿಡಿದಿರುವ ಅನುದಾನ ಬಿಡುಗಡೆ ಮಾಡದೇ ಇದ್ದರೆ ಬೀದಿಗಿಳಿದು ಹೋರಾಟ ಮಾಡ್ತೀನಿ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಕೂಡ ಮೇ.29 ರಂದು ಎಚ್ಚರಿಸಿದ್ದರು.

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ಸಚಿವ ಜಮೀರ್​ ಅಹ್ಮದ್​

ಇನ್ನು ಮಂಗಳವಾರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದ ವಸತಿ ಸಚಿವ ಜಮೀರ್​ ಅಹ್ಮದ್​ ಖಾನ್​ ಅವರು ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದು, ಬಳಿಕ ಸಿದ್ದಲಿಂಗ ಸ್ವಾಮೀಜಿಯವರು ಮಠದ ಅನುದಾನ ತಡೆಹಿಡಿದ ಬಗ್ಗೆ ವಸತಿ ಸಚಿವರ ಬಳಿ ಪ್ರಸ್ತಾಪ ಮಾಡಿದರು. ಶ್ರೀ ಮಠದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಆಗಿದೆ. ಇನ್ನೂ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿ ಹಿಡಿದು ಬರುತ್ತಿದ್ದಾರೆ. ಆದರೆ ಕಟ್ಟಡ ಕೊರತೆಯಿಂದ ಅಡ್ಮಿಷನ್ ನಿಲ್ಲಿಸಲಾಗಿದೆ. ಹಿಂದಿನ ಸರ್ಕಾರ ಮಂಜೂರು ಮಾಡಿದ ಬಿಲ್ಡಿಂಗ್ ರೆಡಿಯಾದರೆ ಮಕ್ಕಳಿಗೆ ಅನುಕೂಲ ಆಗಲಿದೆ ಎಂದು ಸಚಿವರ ಬಳಿ ಶ್ರೀಗಳು ಹೇಳಿಕೊಂಡಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು ‘ಮಂತ್ರಿ ಆದಾಗೆಲ್ಲ ಸಿದ್ದಗಂಗಾ ಮಠಕ್ಕೆ ಬಂದು ನಾನು ಆಶೀರ್ವಾದ ಪಡೆಯುತ್ತೇನೆ. ಇಂದು ಕೂಡ ಬಂದು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಓದಿಗೆ ಕಟ್ಟಡದ ಕೊರತೆಯಿದೆ. ಕೊರತೆ ಬಗ್ಗೆ ಶ್ರೀಗಳು ನನ್ನ ಗಮನಕ್ಕೆ ತಂದಿದ್ದಾರೆ. ಸರ್ಕಾರ ಸಿದ್ದಗಂಗಾ ಮಠದ ಅನುದಾನ ತಡೆ ಹಿಡಿದಿರುವ ಬಗ್ಗೆ ನಾನು ಸಿಎಂ ಗಮನಕ್ಕೆ ತರುತ್ತೇನೆ ಎಂದಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:03 am, Thu, 1 June 23