ತುಮಕೂರು: ಜಿ ಪರಮೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಕಲ್ಲು ತೂರಾಟ, ಆರೋಪಿಯ ಬಂಧನ
ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ ಪರಮೇಶ್ವರ್ ಅವರು ನಾಮಪತ್ರ ಸಲ್ಲಿಕೆ ವೇಳೆ ಪೇದೆಗೆ ಕಲ್ಲು ಎಸೆದಿದ್ದ ಆರೋಪಿಯನ್ನು ಕೊರಟಗೆರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮುಖ್ಯಾಂಶಗಳು
- ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ ಪರಮೇಶ್ವರ್ ಅವರು ನಾಮಪತ್ರ ಸಲ್ಲಿಕೆ ವೇಳೆ ಪೇದೆಗೆ ಕಲ್ಲು ಎಸೆದಿದ್ದ ಆರೋಪಿಯನ್ನು ಕೊರಟಗೆರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
- ಕೊರಟಗೆರೆ ತಾಲೂಕಿನ ರೆಡ್ಡಿಹಳ್ಳಿ ವೆಂಕಟಾಪುರ ಗ್ರಾಮದ ರಂಗಧಾಮಯ್ಯ ಬಂಧಿತ ಆರೋಪಿ.
- ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತುಮಕೂರು: ಕೊರಟಗೆರೆ ಕಾಂಗ್ರೆಸ್ (Congress) ಅಭ್ಯರ್ಥಿ ಡಾ. ಜಿ ಪರಮೇಶ್ವರ್ (G Parmeshwar) ಅವರು ನಾಮಪತ್ರ ಸಲ್ಲಿಕೆ ವೇಳೆ ಪೇದೆಗೆ ಕಲ್ಲು ಎಸೆದಿದ್ದ ಆರೋಪಿಯನ್ನು ಕೊರಟಗೆರೆ (Koratagere) ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೊರಟಗೆರೆ ತಾಲೂಕಿನ ರೆಡ್ಡಿಹಳ್ಳಿ ವೆಂಕಟಾಪುರ ಗ್ರಾಮದ ರಂಗಧಾಮಯ್ಯ ಬಂಧಿತ ಆರೋಪಿ. ಸದ್ಯ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ರಂಗಧಾಮಯ್ಯ ಘಟನೆ ನಂತರ ಕಳೆದ ಮೂರು-ನಾಲ್ಕು ದಿನದಿಂದ ತಲೆಮರೆಸಿಕೊಂಡಿದ್ದನು.
ಪರಮೇಶ್ವರ ನಾಮಪತ್ರ ಸಲ್ಲಿಕೆ ವೇಳೆ ಕಲ್ಲು ತೂರಾಟ
ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ ಕಣಕ್ಕೆ ಇಳಿದಿದ್ದಾರೆ. ಇವರು ಏ.19 ರಂದು ನಾಮಪತ್ರ ಸಲ್ಲಿಕೆಗೆ ಬೆಂಬಲಿಗರ ಜೊತೆ ತೆರಳುವಾಗ ಕಲ್ಲುತೂರಾಟ ನಡೆದಿತ್ತು. ಈ ಘಟನೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಕಾಂಗ್ರೆಸ್ ಮುಖಂಡರ ಗುಂಡಾಗಿರಿ, ಮಹಿಳೆ ಮನೆ ಮೇಲೆ ಕಲ್ಲು ತೂರಾಟ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡಾ. ಜಿ ಪರಮೇಶ್ವರ ಅವರು ಕಚೇರಿ ಮೇಲೆ ಯಾರು ಕಲ್ಲು ಎಸೆದರು ಅಂತಾ ನನಗೆ ಗೊತ್ತಿಲ್ಲ. ನಾನು ನಾಮಪತ್ರ ಸಲ್ಲಿಸಲು ಒಳಗೆ ಹೋದಾಗ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರ ಬಳಿ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:39 am, Sun, 23 April 23



