ತುಮಕೂರು: ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು

ಈಜಲು ತೆರಳಿದ್ದ ಮೂವರು ಬಾಲಕರು ನೀರಲ್ಲಿ ಮುಳುಗಿ ಮರಣ ಹೊಂದಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ತಿಪಟೂರು ಹೊರವಲಯದ ಮಾರನಗೆರೆಯಲ್ಲಿ ಘಟನೆ ನಡೆದಿದೆ.

  • TV9 Web Team
  • Published On - 17:33 PM, 2 Apr 2021
ತುಮಕೂರು: ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜನ

ತುಮಕೂರು‌: ಈಜಲು ತೆರಳಿದ್ದ ಮೂವರು ಬಾಲಕರು ನೀರಲ್ಲಿ ಮುಳುಗಿ ಮರಣ ಹೊಂದಿರುವ ಘಟನೆ ನಡೆದಿದೆ. ಜಿಲ್ಲೆಯ ತಿಪಟೂರು ಹೊರವಲಯದ ಮಾರನಗೆರೆಯಲ್ಲಿ ಘಟನೆ ನಡೆದಿದೆ. ನೀರಿನಲ್ಲಿ ಈಜುತ್ತಿದ್ದಾಗ ಮುಳುಗುತ್ತಿದ್ದ ತನ್ನ ಸ್ನೇಹಿತನನ್ನು ಉಳಿಸಲು ಹೋದ ಮತ್ತೋರ್ವರಿಬ್ಬರು ನೀರು ಪಾಲಾಗಿದ್ದಾರೆ.

ಮೃತ ದುರ್ದೈವಿ ತರುಣ್(11), ದೀಪಕ್‌ (13), ಕೌಶಿಕ್ (13) ಎಂಬುದು ತಿಳಿದು ಬಂದಿದೆ. ತಿಪಟೂರು ತಾಲೂಕು ಮತ್ತಿಹಳ್ಳಿ ನಿವಾಸಿ ಕೌಶಿಕ್ 8ನೇ‌ ತರಗತಿ ಕಲಿಯುತ್ತಿದ್ದನು, ಮುದ್ದೇನಹಳ್ಳಿಯ ದೀಪಕ್ ಕೂಡಾ 8ನೇ ತರಗತಿಯಲ್ಲಿ ಓದುತ್ತಿದ್ದನು. ಇನ್ನೋರ್ವ ಬಾಲಕ ತರುಣ್ 5ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು ಎಂಬುದು ಮೂಲಗಳಿಂದ ತಿಳಿದು ಬಂದಿದೆ. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಸ್ನೇಹಿತನ ಜನ್ಮದಿನವನ್ನು ಆಚರಿಸಲು ನದಿ ದಡಕ್ಕೆ ಹೋದ ನಾಲ್ವರು ನೀರಿನಲ್ಲಿ ಮುಳುಗಿ ಸಾವು

ಚಿಕ್ಕಬಳ್ಳಾಪುರ: ನೀರಿನಲ್ಲಿ ಮುಳುಗಿ ನಾಲ್ಕು ಮಕ್ಕಳ ದಾರುಣ ಸಾವು

(Three boys who went for a swim have died in tumkur)