AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿಂಗಳಲ್ಲಿ 15 ಮಂದಿ ಸಾವು: ಮೃತ್ಯುಕೂಪವಾಯ್ತಾ ತುಮಕೂರು ರಾಷ್ಟ್ರೀಯ ಹೆದ್ದಾರಿ?

ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಒಂದು ತಿಂಗಳಲ್ಲಿ 15 ಮಂದಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಲಾರಿಗಳಿಂದಾಗುವ ಪರೋಕ್ಷ ಸಮಸ್ಯೆಗಳು, ವಿಶ್ರಾಂತಿ ಇಲ್ಲದೆ ಚಾಲನೆ ಹಾಗೂ ಟ್ರಕ್ ಟರ್ಮಿನಲ್ ಕೊರತೆಯೇ ಈ ಅಪಘಾತಗಳಿಗೆ ಮುಖ್ಯ ಕಾರಣ ಎನ್ನಲಾಗ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಭವಿಷ್ಯದಲ್ಲಿ ಸೂಕ್ತ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

ತಿಂಗಳಲ್ಲಿ 15 ಮಂದಿ ಸಾವು: ಮೃತ್ಯುಕೂಪವಾಯ್ತಾ ತುಮಕೂರು ರಾಷ್ಟ್ರೀಯ ಹೆದ್ದಾರಿ?
ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸಾವು
Jagadisha B
| Edited By: |

Updated on:Jan 27, 2026 | 3:28 PM

Share

ತುಮಕೂರು, ಜನವರಿ 27: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತಗಳು ನಡೆಯುತ್ತಿದ್ದು, ತಮ್ಮದಲ್ಲದ ತಪ್ಪಿಗೆ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. 2025ರ ಡಿಸೆಂಬರ್ 25ರಿಂದ 2026ರ ಜನವರಿ 26ರವರೆಗೆ ಒಟ್ಟು 31 ದಿನಗಳ ಅವಧಿಯಲ್ಲಿ ಬರೋಬ್ಬರಿ 15 ಮಂದಿ ರಸ್ತೆ ಅಪಘಾತದಲ್ಲಿ ಜೀವ ಬಿಟ್ಟಿದ್ದಾರೆ. ಹೀಗಾಗಿ ತುಮಕೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಮೃತ್ಯುಕೂಪವಾಗಿ ಮಾರ್ಪಟ್ಟಿದ್ಯಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಅಪಘಾತಗಳ ಸರಮಾಲೆ

  • 2025ರ ಡಿಸೆಂಬರ್ 25ರ ಮಧ್ಯರಾತ್ರಿ ಚಿತ್ರದುರ್ಗದ ಹಿರಿಯೂರು ಬಳಿಯ ಬಸ್ ದುರಂತದಲ್ಲಿ ಒಂದು ಮಗು ಸೇರಿ ಒಟ್ಟು 7 ಮಂದಿ ಮೃತಪಟ್ಟಿದ್ದರು. ಬಸ್​​ಗೆ ಲಾರಿ ಗುದ್ದಿದ ಪರಿಣಾಮ ಅವಘಡ ನಡೆದಿತ್ತು.
  • 2026ರ ಜನವರಿ 1ರಂದು ತುಮಕೂರು ಹೊರವಲಯದ ಕೋರಾ ಬಳಿ ಲಾರಿಗೆ ಬೈಕ್​​ ಗುದ್ದಿದ ಪರಿಣಾಮ ಬೈಕ್​​ ಸವಾರ ಮೃತಪಟ್ಟಿದ್ದ.
  • ಜನವರಿ 9ರಂದು ತುಮಕೂರು ತಾಲೂಕಿನ ವಸಂತನರಾಸಪುರದ ಬಳಿ ನಡೆದ ಐಯ್ಯಪ್ಪ ಸ್ವಾಮಿ ಭಕ್ತರ ಕಾರು ಅಪಘಾತದಲ್ಲಿ ಮಗು ಸೇರಿ 4 ಮಂದಿ ಪ್ರಾಣ ಕಳೆದುಕೊಂಡಿದ್ದರು. ನಿಂತಿದ್ದ ಲಾರಿಗೆ ಕ್ರೂಸರ್​​ ಡಿಕ್ಕಿಯಾಗಿತ್ತು.
  • ಜನವರಿ 26ರ ಬೆಳಿಗ್ಗೆ ತುಮಕೂರು ತಾಲೂಕಿನ ನೆಲಹಾಳ್ ಬಳಿ ನಡೆದ ಕಾರು ಅಪಘಾತದಲ್ಲಿ ಮೂವರು ಟೆಕ್ಕಿಗಳು ಮೃತಪಟ್ಟಿದ್ದು, ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಸಾವು ನೋವುಗಳು ಸಂಭವಿಸಿದ್ದವು.

ಇದನ್ನೂ ಓದಿ: ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಕಾರು; ಸ್ಥಳದಲ್ಲೇ ಮೂವರ ದುರ್ಮರಣ!

ಮೇಲಿಂದ ಮೇಲೆ ನಡೆಯುತ್ತಿರುವ ಈ ರೀತಿಯ ಅಪಘಾತಗಳಿಗೆ ಲಾರಿಗಳಿಂದ ಆಗುತ್ತಿರುವ ಪರೋಕ್ಷ ಸಮಸ್ಯೆಗಳೂ ಕಾರಣ. ನಡೆದಿರುವ ಎಲ್ಲ ಅಪಘಾತಗಳಲ್ಲೂ ಲಾರಿ ಹೆಸರು ಕೇಳಿಬಂದಿದ್ದು, ವಿಶ್ರಾಂತಿ ಇಲ್ಲದೆ ಚಾಲನೆ ಮಾಡುವ ಲಾರಿಗಳ ಚಾಲಕರಿಗೆ ಹೈವೇನಲ್ಲಿ ಟ್ರಕ್ ಟರ್ಮಿನಲ್ ಇಲ್ಲದಿರುವುದೂ ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್​​, ಹಿಂದೆ ಟ್ರಕ್​​ ಟರ್ಮಿನಲ್​​ ನೀಡಲಾಗಿತ್ತು. ಆದರೆ ಹಿಂದಿನ ಸರ್ಕಾರ ಅದನ್ನು ಸೈಟ್​​ಗಳನ್ನು ಮಾಡಿ ಮಾರಿದೆ. ಅಗತ್ಯ ಬಿದ್ರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ವ್ಯವಸ್ಥೆ ಮಾಡೋದಾಗಿ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದಿದ್ದೇನೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:23 pm, Tue, 27 January 26

ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಜಾರಿಗೆ ಬಂದಿದೆ ಹೊಸ ನಿಯಮ
ಸಂಚಾರ ನಿಯಮ ಉಲ್ಲಂಘಿಸುವವರಿಗೆ ಬಿಗ್​​ ಶಾಕ್​​: ಜಾರಿಗೆ ಬಂದಿದೆ ಹೊಸ ನಿಯಮ
ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಸರ್ಪಗಾವಲು?
ಬೆಟಗೇರಿಯ ನಿಗೂಢ ಗವಿಯಲ್ಲೂ ಇದ್ಯಂತೆ ನಿಧಿ! ಸಂಪತ್ತಿಗಿದ್ಯಾ ಸರ್ಪಗಾವಲು?
ಗಿಲ್ಲಿಯ ಆರಂಭದ ದಿನಗಳು ಹೇಗಿದ್ದವು? ಆಪ್ತ ಗುರು ಹೇಳಿದ್ದೇನು?
ಗಿಲ್ಲಿಯ ಆರಂಭದ ದಿನಗಳು ಹೇಗಿದ್ದವು? ಆಪ್ತ ಗುರು ಹೇಳಿದ್ದೇನು?
ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್!
ಪತ್ನಿ ಎಲ್ಲಿದ್ದರೂ ಪತಿಗೆ ಗೊತ್ತಾಗ್ತಿತ್ತು ಲೊಕೇಷನ್!
ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ
ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ
ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ!
ಸ್ವಂತ ದುಡಿಮೆಯಲ್ಲಿ ಕಾರು ಖರೀದಿಸಿದ ಮಂಗಳೂರಿನ ವಿಶೇಷ ಚೇತನ ಯುವಕ!
‘ನೀವು ದರ್ಶನ್ ಸಿನಿಮಾದಲ್ಲಿ ಕಪ್ಪೇ ಇದ್ರಲ್ಲ ಸರ್’; ಸತೀಶ್ ಶಾಕ್
‘ನೀವು ದರ್ಶನ್ ಸಿನಿಮಾದಲ್ಲಿ ಕಪ್ಪೇ ಇದ್ರಲ್ಲ ಸರ್’; ಸತೀಶ್ ಶಾಕ್
ಹಾಡಹಗಲೇ ನಡುರಸ್ತೆಯಲ್ಲೇ ಸಿನಿಮೀಯ ರೀತಿಯಲ್ಲಿ ಯುವಕನ ಕಿಡ್ನ್ಯಾಪ್ ಯತ್ನ
ಹಾಡಹಗಲೇ ನಡುರಸ್ತೆಯಲ್ಲೇ ಸಿನಿಮೀಯ ರೀತಿಯಲ್ಲಿ ಯುವಕನ ಕಿಡ್ನ್ಯಾಪ್ ಯತ್ನ
ನಿಂಗೆ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಲು ಸಾಧ್ಯವಾಗುತ್ತಿಲ್ಲ, ಅಲ್ವಾ.!
ನಿಂಗೆ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಲು ಸಾಧ್ಯವಾಗುತ್ತಿಲ್ಲ, ಅಲ್ವಾ.!
ಘೀಳಿಡುತ್ತಾ ಕಾರನ್ನು ಅಟ್ಟಾಡಿಸಿದ ಸಲಗ: ಪ್ರವಾಸಿಗರು ಸ್ವಲ್ಪರದಲ್ಲೇ ಪಾರು
ಘೀಳಿಡುತ್ತಾ ಕಾರನ್ನು ಅಟ್ಟಾಡಿಸಿದ ಸಲಗ: ಪ್ರವಾಸಿಗರು ಸ್ವಲ್ಪರದಲ್ಲೇ ಪಾರು