ತುಮಕೂರು: 26ರ ಯುವಕನ ಜತೆ 36ರ ಮಹಿಳೆಯ ಲವ್, ಲಿವ್ ಇನ್! ಮಾಜಿ ಪತಿಯಿಂದ ಮಹಿಳೆಯ ಪ್ರಿಯಕರನ ಕೊಲೆ

ತುಮಕೂರು ನಗರದ ಜನತಾ ಕಾಲೋನಿಯಲ್ಲಿ ಮಹಿಳೆಯೊಂದಿಗೆ ವಾಸವಿದ್ದ 26 ವರ್ಷದ ದಸ್ತಗೀರ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಆರೋಪದಲ್ಲಿ ಮಹಿಳೆಯ ಮಾಜಿ ಪತಿ ಗೌಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಏತನ್ಮಧ್ಯೆ, ಗಾಯಗೊಂಡಿದ್ದ ದಸ್ತಗೀರ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.

ತುಮಕೂರು: 26ರ ಯುವಕನ ಜತೆ 36ರ ಮಹಿಳೆಯ ಲವ್, ಲಿವ್ ಇನ್! ಮಾಜಿ ಪತಿಯಿಂದ ಮಹಿಳೆಯ ಪ್ರಿಯಕರನ ಕೊಲೆ
ಸಾಂದರ್ಭಿಕ ಚಿತ್ರ
Image Credit source: TV9 Network
Edited By:

Updated on: Sep 23, 2026 | 11:41 AM

ತುಮಕೂರು, ಸೆಪ್ಟೆಂಬರ್ 23: ತುಮಕೂರು ನಗರದ ಜನತಾ ಕಾಲೋನಿಯಲ್ಲಿ 36 ವರ್ಷದ ಮಹಿಳೆಯೊಬ್ಬರ ಜೊತೆ ವಾಸವಿದ್ದ 26 ವರ್ಷದ ಯುವಕನ ಮೇಲೆ ಚಾಕುವಿನಿಂದ ದಾಳಿ ನಡೆಸಿ ಹತ್ಯೆ ಮಾಡಿದ ಆರೋಪದಲ್ಲಿ ಮಹಿಳೆಯ ಮಾಜಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವಕನನ್ನು ದಸ್ತಗೀರ್ (26) ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ದಸ್ತಗೀರ್ ಎರಡು ವರ್ಷಗಳ ಹಿಂದೆ ಆರೋಪಿ ಗೌಸ್ (45) ಜೊತೆ ಕೆಲಸ ಮಾಡುತ್ತಿದ್ದ. ಈ ವೇಳೆ ಗೌಸ್​ನ ಪತ್ನಿಯ ಪರಿಚಯವಾಗಿತ್ತು. ಮಹಿಳೆ ತನ್ನ ಪತಿಯಿಂದ ಕಿರುಕುಳವಾಗುತ್ತಿದೆ ಎಂದು ದಸ್ತಗೀರ್ ಬಳಿ ಹೇಳಿಕೊಂಡಿದ್ದರೆನ್ನಲಾಗಿದೆ. ಬಳಿಕ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು.

ಸುಮಾರು ಒಂದೂವರೆ ವರ್ಷದ ಹಿಂದೆ ದಸ್ತಗೀರ್ ಮಹಿಳೆಯೊಂದಿಗೆ ಮನೆ ಬಿಟ್ಟು ತೆರಳಿದ್ದ. ಬಳಿಕ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾಗಲು ಇಬ್ಬರೂ ನಿರ್ಧರಿಸಿದ್ದರು ಎನ್ನಲಾಗಿದೆ. ಈ ನಡುವೆ ಮಹಿಳೆ ಗೌಸ್‌ನಿಂದ ವಿಚ್ಛೇದನ ಪಡೆದ ಬಳಿಕ ದಸ್ತಗೀರ್ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಮಹಿಳೆ ಜತೆ ದಸ್ತಗೀರ್ ಪ್ರತ್ಯೇಕ ವಾಸದ ವೇಳೆ ನಡೆದಿದ್ದೇನು?

ಆದರೂ ಗೌಸ್‌ನಿಂದ ಆಗಾಗ್ಗೆ ಕಿರುಕುಳ ಮುಂದುವರಿದಿತ್ತು. ಇದೇ ತಿಂಗಳ 16ರಂದು ಜನತಾ ಕಾಲೋನಿಯಲ್ಲಿರುವ ಮಹಿಳೆ ಮತ್ತು ದಸ್ತಗೀರ್ ವಾಸಿಸುತ್ತಿದ್ದ ಮನೆಗೆ ಗೌಸ್ ಬಂದಿದ್ದಾನೆ. ಮಹಿಳೆ ಮೇಲೆ ಚಾಕುವಿನಿಂದ ದಾಳಿ ನಡೆಸಲು ಮುಂದಾದಾಗ ದಸ್ತಗೀರ್ ಅಡ್ಡ ಬಂದಿದ್ದಾನೆ. ಈ ವೇಳೆ ದಸ್ತಗೀರ್ ಮೇಲೆ ಚಾಕುವಿನಿಂದ ಹಲವು ಬಾರಿ ದಾಳಿ ನಡೆಸಿ ಗೌಸ್ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ದಸ್ತಗೀರ್‌ನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಈ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಸ್ತಗೀರ್ ಮೃತಪಟ್ಟಿದ್ದಾನೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us