AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್‌ಡಿಎ ಪರೀಕ್ಷೆಯಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್ ಪಡೆದ ಶಿವಮೊಗ್ಗದ ಶ್ರೇಯಾ ಗೌಡ

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಶ್ರೇಯಾ ಎನ್. ಗೌಡ ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆಯ ಮಹಿಳಾ ವಿಭಾಗದಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಬಾಲ್ಯದಿಂದಲೂ ಸೇನೆ ಸೇರುವ ಕನಸು ಕಂಡಿದ್ದ ಶ್ರೇಯಾ, ಮೊದಲ ಪ್ರಯತ್ನದಲ್ಲೇ ಸಾಧನೆ ಮಾಡಿದ್ದಾರೆ. ಪುಣೆಯ ಖಡಕ್ವಾಸ್ಲಾದಲ್ಲಿ ತರಬೇತಿ ಪಡೆದು ಭಾರತೀಯ ಸೇನೆಯ ಮಿಸೈಲ್ ವಿಭಾಗದಲ್ಲಿ ಸೇವೆ ಸಲ್ಲಿಸುವ ಗುರಿ ಹೊಂದಿದ್ದಾರೆ.

ಎನ್‌ಡಿಎ ಪರೀಕ್ಷೆಯಲ್ಲಿ ಅಖಿಲ ಭಾರತ ಪ್ರಥಮ ರ‍್ಯಾಂಕ್ ಪಡೆದ ಶಿವಮೊಗ್ಗದ ಶ್ರೇಯಾ ಗೌಡ
ಶ್ರೇಯಾ ಗೌಡ
ಭಾವನಾ ಹೆಗಡೆ
|

Updated on:Nov 08, 2026 | 10:47 AM

Share

ಶಿವಮೊಗ್ಗ, ನವೆಂಬರ್ 08: ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರುವ ಕನಸು ಕಂಡಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಶ್ರೇಯಾ ಎನ್. ಗೌಡಾ ಇದೀಗ ದೇಶದ ಗಮನ ಸೆಳೆದಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್​ಡಿಎ) ಪ್ರವೇಶ ಪರೀಕ್ಷೆಯಲ್ಲಿ ಶ್ರೇಯಾ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿರುವ 18 ವರ್ಷದ ಶ್ರೇಯಾ ಅವರ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಜಿಲ್ಲೆಯ ಜನರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

8ನೇ ತರಗತಿಯಲ್ಲೇ ಸೇನೆ ಸೇರುವ ಕನಸು ಕಂಡಿದ್ದ ಶ್ರೇಯಾ

ಶ್ರೇಯಾ ಅವರಿಗೆ ಚಿಕ್ಕಂದಿನಿಂದಲೂ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುವ ಆಸೆಯಿತ್ತು. ಎಂಟನೇ ತರಗತಿಯಲ್ಲಿ ಮಹಿಳೆಯರಿಗೂ ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಪ್ರವೇಶ ಪಡೆಯುವ ಅವಕಾಶವಿದೆ ಎಂಬುದನ್ನು ತಿಳಿದುಕೊಂಡ ಬಳಿಕ ತಮ್ಮ ಗುರಿಯತ್ತ ಸತತ ಪ್ರಯತ್ನ ಆರಂಭಿಸಿದರು. ಆರಂಭದಲ್ಲಿ ಪರೀಕ್ಷೆಯಲ್ಲಿ ಅಗ್ರ ಹತ್ತರೊಳಗೆ ಸ್ಥಾನ ಪಡೆಯುವ ನಿರೀಕ್ಷೆ ಹೊಂದಿದ್ದ ಅವರು, ಇದೀಗ ದೇಶಕ್ಕೇ ಪ್ರಥಮ ಸ್ಥಾನ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಥಮ ರ‍್ಯಾಂಕ್ ಪಡೆದಿರುವುದು ವರ್ಣಿಸಲಾಗದ ಸಂತೋಷ ನೀಡಿದೆ ಎಂದು ಶ್ರೇಯಾ ಹೇಳಿದ್ದಾರೆ.

ಶ್ರೇಯಾ ಅವರು ಭದ್ರಾವತಿಯ ಕಾರೇಹಳ್ಳಿಯ ಬಿಜಿಎಸ್ ಸೆಂಟ್ರಲ್ ಶಾಲೆಯಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು, ಶಾಲೆಯಲ್ಲಿ ಉತ್ತಮ ಅಂಕಗಳೊಂದಿಗೆ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದಿದ್ದರು. ಬಳಿಕ ಬೆಂಗಳೂರಿನ ರಾಜಾಜಿನಗರದ ಬೇಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದರು. ಜೆಇಇ ಪರೀಕ್ಷೆಗೆ ನಡೆಸಿದ ಸತತ ಅಭ್ಯಾಸವೂ ಎನ್‌ಡಿಎ ಲಿಖಿತ ಪರೀಕ್ಷೆಗೆ ಸಾಕಷ್ಟು ನೆರವಾಗಿದೆ. ಪ್ರಸ್ತುತ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.

ವ್ಯಕ್ತಿತ್ವ ವಿಕಸನಕ್ಕೂ ಹೆಚ್ಚಿನ ಒತ್ತು ನೀಡಿದ್ದ ಸಾಧಕಿ

ಶ್ರೇಯಾ ಕೇವಲ ಪಠ್ಯಪುಸ್ತಕದ ಓದಿಗೆ ಸೀಮಿತವಾಗಿರಲಿಲ್ಲ. ಚರ್ಚಾ ಸ್ಪರ್ಧೆ, ಚಿತ್ರಕಲೆ, ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲೂ ಪ್ರಥಮ ಬಹುಮಾನ ಪಡೆದಿದ್ದರು. ಎನ್‌ಡಿಎ ಆಯ್ಕೆಯ ಪ್ರಕ್ರಿಯೆಯಲ್ಲಿ ಐದು ದಿನಗಳ ಎಸ್‌ಎಸ್‌ಬಿ ಸಂದರ್ಶನ ಅತ್ಯಂತ ಸವಾಲಿನದ್ದಾಗಿತ್ತು ಎಂದು ಅವರು ಹೇಳಿದ್ದಾರೆ. ನಾಯಕತ್ವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ತಂಡದೊಂದಿಗೆ ಕೆಲಸ ಮಾಡುವ ಗುಣಗಳನ್ನು ಈ ಸಂದರ್ಶನದಲ್ಲಿ ಪರೀಕ್ಷಿಸಲಾಗುತ್ತದೆ. ಇದಕ್ಕಾಗಿ ಪ್ರತಿದಿನ ಓಟದ ಅಭ್ಯಾಸ, ಪತ್ರಿಕೆಗಳ ಓದು ಹಾಗೂ ದೇಶ-ವಿದೇಶದ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ನಾಗಪುರದಲ್ಲಿ 14 ದಿನಗಳ ವಿಶೇಷ ತರಬೇತಿಯನ್ನೂ ಪಡೆದಿದ್ದರು.

LIVE TV

ತಂದೆ-ತಾಯಿಯ ಪ್ರೋತ್ಸಾಹವೇ ಯಶಸ್ಸಿನ ಶಕ್ತಿ

ಶ್ರೇಯಾ ಅವರ ತಂದೆ ಜೆ. ನಾಗೇಂದ್ರ ಅವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ (VISL) ಉದ್ಯೋಗಿಯಾಗಿದ್ದು, ತಾಯಿ ಬಿ.ಎಂ. ಆಶಾ ಉಪನ್ಯಾಸಕರಾಗಿದ್ದಾರೆ. ಮಗಳ ಕನಸಿಗೆ ಪೋಷಕರು ಸದಾ ಬೆಂಬಲವಾಗಿ ನಿಂತಿದ್ದಾರೆ. ಅಂಕಗಳ ವಿಚಾರದಲ್ಲಿ ಒತ್ತಡ ಹೇರದೆ, ತನಗೆ ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ತಂದೆ ಸ್ವಾತಂತ್ರ್ಯ ನೀಡಿದ್ದರು ಎಂದು ಶ್ರೇಯಾ ಸ್ಮರಿಸಿದ್ದಾರೆ.

ಇದೀಗ ಸುರತ್ಕಲ್‌ನ ಎಂಜಿನಿಯರಿಂಗ್ ವ್ಯಾಸಂಗವನ್ನು ಬಿಟ್ಟು ಪುಣೆಯ ಖಡಕ್ವಾಸ್ಲಾದ ಎನ್‌ಡಿಎಗೆ ಸೇರಿ ಮೂರು ವರ್ಷಗಳ ತರಬೇತಿ ಪಡೆಯುವ ಉದ್ದೇಶ ಹೊಂದಿದ್ದಾರೆ. ಭಾರತೀಯ ಸೇನೆಯ ರಕ್ಷಣಾ ತಂತ್ರಜ್ಞಾನ ಮತ್ತು ಮಿಸೈಲ್ ವಿಭಾಗದಲ್ಲಿ ಸೇವೆ ಸಲ್ಲಿಸುವುದು ಅವರ ಮುಂದಿನ ಗುರಿಯಾಗಿದೆ. ಯುವತಿಯರು ತಮ್ಮ ಕನಸನ್ನು ಧೈರ್ಯವಾಗಿ ಹೇಳಿಕೊಳ್ಳಬೇಕು, ಗುರಿ ಸಾಧನೆಗೆ ಆದ್ಯತೆ ನೀಡಬೇಕು ಎಂಬುದು ಶ್ರೇಯಾ ಅವರ ಸಂದೇಶವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 am, Sun, 8 November 26

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಪತ್ರಿಕೋದ್ಯಮ ಇವರು ಇಷ್ಟಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್‌ನಲ್ಲಿ ವೃತ್ತಿ ಜೀವನ ಆರಂಭಿಸಿರುವ ಇವರು, ಸಂಸ್ಥೆಯಲ್ಲಿ ಒಂದು ವರ್ಷದ ವೃತ್ತಿ ಅನುಭವ ಹೊಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ನಮ್ಮ ಧ್ವನಿ ಅಡಗಿಸಲಾಗಲ್ಲ: ಡಿಕೆಶಿ
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು
ಸಿದ್ದರಾಮಯ್ಯ ಕುರಿತ ಸ್ಟಿಂಗ್​ ಆಪರೇಷನ್ ಪ್ರಕರಣಕ್ಕೆ ಕೇರಳ ನಂಟು