ತುಮಕೂರು: ತಾಯಿ-ಮಗಳ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್ಗೆ ಎಂಟ್ರಿ; 32 ಗ್ರಾಂ ಚಿನ್ನದ ಸರ ಕದ್ದು ಪರಾರಿ
ತುಮಕೂರಿನ(Tumakuru) ಗುಂಚಿ ಸರ್ಕಲ್ ಬಳಿಯಿರುವ ಎಸ್ಎನ್ಡಿ ಜ್ಯುವೆಲ್ಲರಿ ಶಾಪ್ಗೆ ತಾಯಿ-ಮಗಳ ಸೋಗಿನಲ್ಲಿ ನುಗ್ಗಿದ ಖದೀಮರು, ಚಿನ್ನ ಖರೀದಿಸುವ ನೆಪದಲ್ಲಿ ಬರೊಬ್ಬರಿ 32 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ಸದ್ಯ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೆಲ ಗಂಟೆಗಳ ಬಳಿಕ ಚಿನ್ನದ ಸರವನ್ನ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ತುಮಕೂರು, ಡಿ.05: ತಾಯಿ-ಮಗಳ ಸೋಗಿನಲ್ಲಿ ಜ್ಯುವೆಲ್ಲರಿ ಶಾಪ್(Jewellery Shop)ಗೆ ಎಂಟ್ರಿಕೊಟ್ಟಿದ್ದ ಖತರ್ನಾಕ್ ಖದೀಮರು, ಚಿನ್ನ ಖರೀದಿಸುವ ನೆಪದಲ್ಲಿ ಬರೊಬ್ಬರಿ 32 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾದ ಘಟನೆ ತುಮಕೂರಿನ(Tumakuru) ಗುಂಚಿ ಸರ್ಕಲ್ ಬಳಿಯಿರುವ ಎಸ್ಎನ್ಡಿ ಜ್ಯುವೆಲ್ಲರಿ ಶಾಪ್ನಲ್ಲಿ ನಡೆದಿದೆ. ಇವರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಖದೀಮರಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಘಟನೆ ವಿವರ
ಈ ಘಟನೆ ಕಳೆದ ಡಿ.2 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇವರ ಕೃತ್ಯ ಸಿಸಿಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ಅದರಲ್ಲಿ ತಾಯಿ -ಮಗಳ ಸೋಗಿನಲ್ಲಿ ಎಂಟ್ರಿ ಕೊಟ್ಟಿರುವ ಓರ್ವ ಯುವತಿ ಹಾಗೂ ಮಹಿಳೆ. ಚಿನ್ನದ ಸರ ಖರೀದಿ ಮಾಡುವುದಾಗಿ ಚಿನ್ನದ ಸರಗಳನ್ನು ವಿಕ್ಷೀಸುತ್ತಿದ್ದಾರೆ. ಬಳಿಕ ಮಾತಿನ ಮೂಲಕ ಜ್ಯುವೆಲ್ಲರಿ ಶಾಪ್ ಮಾಲೀಕನ ಗಮನ ಬೇರೆಡೆ ಸೆಳೆದ ಓರ್ವ ಯುವತಿ ಹಾಗೂ ಮಹಿಳೆ, ಸರ ಕದ್ದು, ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಎಸ್ಕೇಪದದ ಆಗಿದ್ದಾರೆ. ಸದ್ಯ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೆಲ ಗಂಟೆಗಳ ಬಳಿಕ ಚಿನ್ನದ ಸರವನ್ನ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಬೆಂಗಳೂರು: ಉಂಡ ಮನೆಗೆ ದ್ರೋಹ, ಜ್ಯುವೆಲ್ಲರಿ ಶಾಪ್ನಿಂದ ಕೆಜಿ ಕೆಜಿ ಚಿನ್ನ, ಬೆಳ್ಳಿ ಕದ್ದ ಮನೆ ಕೆಲಸದಾಳು
ಕೊಡಗು: ಮಡಿಕೇರಿ ತಾಲೂಕಿನ ಮುತ್ತಾರ್ಮುಡಿ ಬಳಿ ಖಾಸಗಿ ಬಸ್ ಹಾಗೂ ಕಾರು ಮುಖಾಮಖಿ ಡಿಕ್ಕಿಯಾಗಿ ಕಾರು ಚಾಲಕ ಇಬ್ರಾಹಿಂಗೆ ಗಂಭೀರ ಗಾಯವಾಗಿದೆ. ಗಾಯಾಳು ಇಬ್ರಾಹಿಂಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಮೂರ್ನಾಡು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಮೂರ್ನಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Tue, 5 December 23