AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ತುಮಕೂರು-ಬೆಂಗಳೂರು ಮಧ್ಯೆ ಮೆಮು ರೈಲು ಸಂಚಾರ; ಸಂಸದ ಜಿ.ಎಸ್.ಬಸವರಾಜು ಚಾಲನೆ

ಇಂದು ತುಮಕೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಗಮಿಸಲಿದ್ದು ತುಮಕೂರು ಹಾಗೂ ಕೆಎಸ್ಆರ್ ಬೆಂಗಳೂರು ಮೆಮು ರೈಲು ನಿತ್ಯ ಸೇವೆಗೆ ಚಾಲನೆ ನೀಡಲಿದ್ದಾರೆ.

ಇಂದಿನಿಂದ ತುಮಕೂರು-ಬೆಂಗಳೂರು ಮಧ್ಯೆ ಮೆಮು ರೈಲು ಸಂಚಾರ; ಸಂಸದ ಜಿ.ಎಸ್.ಬಸವರಾಜು ಚಾಲನೆ
ಇಂದಿನಿಂದ ತುಮಕೂರು-ಬೆಂಗಳೂರು ಮಧ್ಯೆ ಮೆಮು ರೈಲು ಸಂಚಾರ
TV9 Web
| Edited By: |

Updated on:Apr 08, 2022 | 12:04 PM

Share

ತುಮಕೂರು: ಇಂದಿನಿಂದ ತುಮಕೂರು-ಬೆಂಗಳೂರು ಮಧ್ಯೆ ವಿದ್ಯುತ್ ಚಾಲಿತ ಮೆಮು ರೈಲು ಸಂಚಾರಕ್ಕೆ ಚಾಲನೆ ಸಿಕ್ಕಿದೆ. ಸಂಸದ ಜಿ.ಎಸ್.ಬಸವರಾಜು ತುಮಕೂರು-ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ಮೆಮು ರೈಲು ಸಂಚಾರಕ್ಕೆ ಚಾಲನೆ ನೀಡಿದ್ದಾರೆ. ತುಮಕೂರು ರೈಲ್ವೆ ನಿಲ್ದಾಣ ಬಳಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಒಟ್ಟು 6 ಟ್ರಿಪ್​ನಲ್ಲಿ ಈ ಟ್ರೈನ್ ಸಂಚರಿಸಲಿದೆ.ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಹಾಗೂ ರೈಲ್ವೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇಂದು ತುಮಕೂರಿನಲ್ಲಿ ಸಂಸದ ಜಿ.ಎಸ್.ಬಸವರಾಜು ತುಮಕೂರು ಹಾಗೂ ಕೆಎಸ್ಆರ್ ಬೆಂಗಳೂರು ಮೆಮು ರೈಲು ನಿತ್ಯ ಸೇವೆಗೆ ಚಾಲನೆ ನೀಡಿದ್ದಾರೆ. ಬೆಂಗಳೂರು-ತುಮಕೂರು ನಡುವೆ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಈ ಎರಡು ನಗರಗಳ ನಡುವೆ ಡೆಮು ರೈಲಿಗೆ ಬದಲಾಗಿ 16 ಕೋಚಿನ ಮೆಮು ರೈಲು ಸಂಚಾರ ಇಂದಿನಿಂದ ಆರಂಭವಾಗಿದೆ. ಈವರೆಗೆ ತುಮಕೂರು ಯಶವಂತಪುರ ಮಧ್ಯೆ 8 ಬೋಗಿಗಳ ರೈಲು ಸಂಚರಿಸುತ್ತಿದ್ದು, ಇಂದಿನಿಂದ ಮೆಮು ರೈಲು ಸಂಚರಿಸಲಿದೆ.

ನಗರದಿಂದ ಬೆಳಿಗ್ಗೆ ಹೊರಡುತ್ತಿದ್ದ ಡೆಮು ರೈಲಿಗೆ ಬದಲಾಗಿ 16 ಬೋಗಿಗಳ ಮೆಮು ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ತುಮಕೂರು ಕಡೆಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ನಿಲ್ದಾಣದಿಂದ ಬೆಳಿಗ್ಗೆ 9.30 ಕ್ಕೆ ಹೊಸ ರೈಲು ಸಂಚಾರ ಆರಂಭಗೊಳ್ಳಲಿದ್ದು 11 ಗಂಟೆಗೆ ತುಮಕೂರು ತಲುಪಲಿದೆ. ಇದೇ ರೈಲು ತುಮಕೂರಿನಿಂದ ಬೆಳಗ್ಗೆ 11.15ಕ್ಕೆ ಹೊರಟು ಬೆಂಗಳೂರಿನ ಕೆಎಸ್‌ಆರ್‌ ನಿಲ್ದಾಣವನ್ನು 1.25ಕ್ಕೆ ತಲುಪಲಿದೆ. ಕೆಎಸ್‌ಆರ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಟು ತುಮಕೂರು ನಗರವನ್ನು 3.20ಕ್ಕೆ ತಲುಪಲಿದೆ. ಮಧ್ಯಾಹ್ನ 3.50ಕ್ಕೆ ತುಮಕೂರಿನಿಂದ ಹೊರಟ ರೈಲು ಕೆ.ಎಸ್‌.ಆರ್ ರೈಲು ನಿಲ್ದಾಣಕ್ಕೆ 5.25ಕ್ಕೆ ಸೇರಲಿದೆ.ಇದರಿಂದ ಬೆಂಗಳೂರಿಗೆ ಹೋಗಿ ಬರುವ ಪ್ರಯಾಣಿಕರಿಗೆ ಮತ್ತಷ್ಟು ಉಪಯೋಗವಾಗಲಿದೆ.

ಇದನ್ನೂ ಓದಿ: ಕೊಲೆ ಮಾಡುವ ಉದ್ದೇಶ ನನಗಿರಲಿಲ್ಲ; ಬಿದ್ಧಿ ಕಲಿಸಲು ಹೋಗಿ ಕೋಪದಿಂದ ಮಗನನ್ನೇ ಕೊಂದೆ, ವಿಚಾರಣೆ ವೇಳೆ ಅರ್ಪಿತ್ ತಂದೆ ಕಣ್ಣೀರು

ಗೆಳೆತನದಲ್ಲಿ ಹೀಗಾಗುತ್ತಿದೆಯೇ? ಹಾಗಾದರೆ ಅಂತಹ ಫ್ರೆಂಡ್​ಶಿಪ್​ಗೆ ಬೈ ಬೈ ಹೇಳುವುದು ಒಳ್ಳೆಯದು!

Published On - 7:41 am, Fri, 8 April 22