ತುಮಕೂರಿನಲ್ಲಿ ಮತ್ತೆ ತಬ್ಲೀಗ್​ ಹೆಜ್ಜೆಗುರುತು, ಮಾಹಿತಿಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ

ತುಮಕೂರಿನಲ್ಲಿ ಮತ್ತೆ ತಬ್ಲೀಗ್​ ಹೆಜ್ಜೆಗುರುತು, ಮಾಹಿತಿಗೆ ಜಿಲ್ಲಾಧಿಕಾರಿ ಖಡಕ್ ಸೂಚನೆ

ತುಮಕೂರು: ತಬ್ಲೀಗಿಗಳಿಂದ ತುಮಕೂರಿನಲ್ಲಿ ಮತ್ತೆ ಆತಂಕ ಹೆಚ್ಚಾಗುತ್ತಿದೆ. ಮಸೀದಿಗಳಲ್ಲಿ ಜಮಾತ್ ಸದಸ್ಯರು ತಂಗಿರುವ ಶಂಕೆ ಉಂಟಾಗಿದ್ದು, ಈ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಜಿಲ್ಲಾ ವಕ್ಫ್ ಮಂಡಳಿಯ ಅಧಿಕಾರಿಗಳು, ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ತುಮಕೂರಿನ 10 ಮಸೀದಿಗಳಲ್ಲಿ ಜಮಾತ್ ಸದಸ್ಯರು ತಂಗಿರುವುದು ಕಂಡು ಬಂದಿದೆ.‌ ವಿದೇಶ, ಹೊರ ರಾಜ್ಯದಿಂದ ಬಂದವರ ಮಾಹಿತಿ ನೀಡಿ. ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಸರ್ಕಾರದ ಜೊತೆ ಕೈ ಜೋಡಿಸಿ. ಹೆಚ್ಚುಕಮ್ಮಿಯಾದ್ರೆ ಮಸೀದಿ ಅಧ್ಯಕ್ಷರು, ಕಾರ್ಯದರ್ಶಿಗಳೇ ಹೊಣೆಯಾಗುತ್ತಾರೆ.

ಮಾಹಿತಿ ನೀಡದಿದ್ದರೆ ಮುಂದಿನ ಆಗು ಹೋಗುಗಳಿಗೆ ಸಂಬಂಧಪಟ್ಟ ಮಸೀದಿ ಅಧ್ಯಕ್ಷರು ಕಾರ್ಯದರ್ಶಿಗಳ ವಿರುದ್ಧ ಕ್ರಮ ಕೈಗೊಳ್ತೇವೆ ಎಂದು ತುಮಕೂರು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ತುಮಕೂರಿನಲ್ಲಿ ಇಂತಹ ಶಂಕೆ ವ್ಯಕ್ತವಾಗಿದ್ದು, ಆತಂಕ ಹೆಚ್ಚಾಗಿದೆ. https://www.facebook.com/Tv9Kannada/videos/865999823918558/

Published On - 11:26 am, Tue, 28 April 20

Click on your DTH Provider to Add TV9 Kannada