ಕೊರೊನಾ ಕುರಿತು ಸರ್ಕಾರ ಹೈಕೋರ್ಟ್​ಗೆ ನೀಡಿದ ಮಹತ್ವದ ಮಾಹಿತಿ ಏನು?

ಕೊರೊನಾ ಕುರಿತು ಸರ್ಕಾರ ಹೈಕೋರ್ಟ್​ಗೆ ನೀಡಿದ ಮಹತ್ವದ ಮಾಹಿತಿ ಏನು?
ಕರ್ನಾಟಕ ಹೈಕೋರ್ಟ್​

ಬೆಂಗಳೂರು: ಕರ್ನಾಟಕ ಸರ್ಕಾರ ನಿನ್ನೆ ರಾಜ್ಯ ಹೈಕೋರ್ಟ್​ಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಅದು ಕೊರೊನಾ ನಿಯಂತ್ರಣ ಕುರಿತಾಗಿದ್ದು, ರಾಜ್ಯದ ಜನತೆ ಸಮಾಧಾನ ಪಡಬಹುದಾದ ಸಂಗತಿಯಾಗಿದೆ. ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ 19 ಚಿಕಿತ್ಸೆಗೆ ಇನ್ನೂ ಬಳಸಿಕೊಂಡಿಲ್ಲ ಎಂಬುದು ಆ ಮಹತ್ವದ ಮಾಹಿತಿಯಾಗಿದೆ. ಅಂದ್ರೆ ಪರಿಸ್ಥಿತಿ ತೀರಾ ಅಷ್ಟು ಹದಗೆಟ್ಟಿಲ್ಲ. ಸದ್ಯಕ್ಕೆ ಸರ್ಕಾರಿ ಆಸ್ಪತ್ರೆಗಳೆ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿವೆ. ಹೌದು ಇದುವರೆಗೂ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ಅವಕಾಶ ನೀಡಿಲ್ಲವದರೂ ಕೆಲ ಪ್ರಮುಖ ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಗಾಗಿಯೇ ತಮ್ಮ ಆಸ್ಪತ್ರೆಗಳನ್ನು ಸಜ್ಜುಗೊಳಿಸಿಟ್ಟುಕೊಂಡಿವೆ! ಇದು ನಿಜಕ್ಕೂ ಸ್ವಲ್ಪ ಸಮಾಧಾನದ ಸಂಗತಿ.

ಖಾಸಗಿ ಆಸ್ಪತ್ರೆಗಳ ಸೇವೆ ಬಳಸಿಕೊಂಡಾಗ ಪಿಪಿಇ ಕಿಟ್ ಪೂರೈಕೆ ಮಾಡಲಾಗುವುದು. ಹೀಗಾಗಿ ಖಾಸಗಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್ ವಿತರಿಸಿಲ್ಲ. ಜೊತೆಗೆ, ಪಿಪಿಇ ಕಿಟ್ ಗಳು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಲವಾರು ಖಾಸಗಿ ಆಸ್ಪತ್ರೆಗಳೂ ಈ ಪಿಪಿಇ ಕಿಟ್ ಖರೀದಿ, ಕೊರೊನಾ ಸೋಂಕು ಚಿಕಿತ್ಸಿಸೆಗೆ ನೆರವಾಗಲು ಸನ್ನದ್ಧವಾಗಿವೆ ಎಂದು ರಾಜ್ಯ ಸರ್ಕಾರ ಕೋರ್ಟ್​ ಗಮನಕ್ಕೆ ತಂದಿದೆ.

ರಾಜ್ಯದಲ್ಲಿ ಎನ್ 95 ಮಾಸ್ಕ್, ಪಿಪಿಇ ಕಿಟ್ ಗಳ ಕೊರತೆಯಿಲ್ಲ. ಬೇಡಿಕೆ ಆಧರಿಸಿ ಜಿಲ್ಲೆಗಳಿಗೆ ಪೂರೈಸಲಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ ವಿತರಿಸಲಾಗಿದೆ ಎಂದು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಹೈಕೋರ್ಟ್​ಗೆ ಮಾಹಿತಿ ನೀಡಲಾಗಿದೆ.

Published On - 11:20 am, Tue, 28 April 20

Click on your DTH Provider to Add TV9 Kannada