ರೈತ ಮಹಿಳೆ ಮನವಿಗೆ ಸ್ಪಂದಿಸಿದ ಸಿಎಂ ಯಡಿಯೂರಪ್ಪ, ತಕ್ಷಣ ಈರುಳ್ಳಿ ಖರೀದಿಗೆ ಸೂಚನೆ
ಚಿತ್ರದುರ್ಗ: ತಾನು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಅಂತಾ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದ ರೈತ ಮಹಿಳೆಗೆ ಸಿಎಂ ಬಿಎಸ್ ಯಡಿಯೂರಪ್ಪ ಆತ್ಮಸ್ಥೈರ್ಯ ತುಂಬಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರೈತ ಮಹಿಳೆ ವಸಂತ ಎಂಬುವವರು ತಾನು ಬೆಳೆದ ಈರುಳ್ಳಿ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ವಿಡಿಯೋ ಮಾಡಿ ಸಿಎಂಗೆ ಮನವಿ ಮಾಡಿಕೊಂಡಿದ್ದರು. ಮಹಿಳೆಯ ವಿಡಿಯೋ ವೀಕ್ಷಿಸಿದ ಸಿಎಂ ರೈತ ಮಹಿಳೆಗೆ ಕರೆ ಮಾಡಿದ ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸಿಕೊಡುತ್ತೇನೆಂದು ಧೈರ್ಯ ಹೇಳಿದ್ದಾರೆ. ಕೂಡಲೇ […]
ಚಿತ್ರದುರ್ಗ: ತಾನು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಅಂತಾ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದ ರೈತ ಮಹಿಳೆಗೆ ಸಿಎಂ ಬಿಎಸ್ ಯಡಿಯೂರಪ್ಪ ಆತ್ಮಸ್ಥೈರ್ಯ ತುಂಬಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರೈತ ಮಹಿಳೆ ವಸಂತ ಎಂಬುವವರು ತಾನು ಬೆಳೆದ ಈರುಳ್ಳಿ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ವಿಡಿಯೋ ಮಾಡಿ ಸಿಎಂಗೆ ಮನವಿ ಮಾಡಿಕೊಂಡಿದ್ದರು. ಮಹಿಳೆಯ ವಿಡಿಯೋ ವೀಕ್ಷಿಸಿದ ಸಿಎಂ ರೈತ ಮಹಿಳೆಗೆ ಕರೆ ಮಾಡಿದ ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸಿಕೊಡುತ್ತೇನೆಂದು ಧೈರ್ಯ ಹೇಳಿದ್ದಾರೆ.
ಕೂಡಲೇ ಚಿತ್ರದುರ್ಗ ಡಿಸಿ ಜೊತೆ ಮಾತನಾಡಿ ಆ ಹಳ್ಳಿಗೆ ಭೇಟಿ ನೀಡಿ ಆಕೆಯ ಕಷ್ಟ ಆಲಿಸುವಂತೆ ಸೂಚಿಸಿದ್ದಾರೆ. ಆಕೆ ಬೆಳೆದ ಈರುಳ್ಳಿ ಹಾಗೂ ರೈತರ ಈರುಳ್ಳಿಯನ್ನು ಸರ್ಕಾರದ ವತಿಯಿಂದ ಖರೀದಿಸಲು ಸಿಎಂ ಸೂಚನೆ ನೀಡಿದ್ದಾರೆ.
Published On - 11:57 am, Tue, 28 April 20