ಕೊರೊನಾ ಹಿನ್ನೆಲೆ ಮಧುರೈನಿಂದ ಬಂದಿದ್ದ ದಂಪತಿಗೆ ಆನೇಕಲ್​ನಲ್ಲಿ ಏನಾಯ್ತು?

ಕೊರೊನಾ ಹಿನ್ನೆಲೆ ಮಧುರೈನಿಂದ ಬಂದಿದ್ದ ದಂಪತಿಗೆ ಆನೇಕಲ್​ನಲ್ಲಿ ಏನಾಯ್ತು?

ಆನೇಕಲ್: ನಿನ್ನೆ ರಾತ್ರಿ ತಮಿಳುನಾಡಿನ ಮಧುರೈನಿಂದ ಒಂದು ದಂಪತಿ ಆನೇಕಲ್ ತಾಲ್ಲೂಕಿನ ಕಾವಲಹೊಸಹಳ್ಳಿಗೆ ಆಗಮಿಸಿದ್ದರು. ಈ ದಂಪತಿಯ ಆಗಮನದ ಸುದ್ದಿ ಆರೋಗ್ಯ ಇಲಾಖೆಗೆ ತಲುಪಿದ ತಕ್ಷಣ ಅವಿರಬ್ಬರನ್ನೂ ದೈಹಿಕ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.

ಮಧುರೈನ ಈ ದಂಪತಿ ಮುಂದಿನ 14 ದಿನಗಳ‌ ಕಾಲ ಅವರ ಮನೆಯಲ್ಲಿಯೇ ಕ್ವಾರಂಟೈನ್​ನಲ್ಲಿಟ್ಟು, ನಿಗಾ ಇಡಲಾಗಿದೆ. ದಂಪತಿಗಳ ಕೈ ಮೇಲೆ ಸೀಲ್ ಹಾಕಲಾಗಿದೆ. ಮತ್ತು ಅವರ ಮನೆಯ ಗೋಡೆ ಮೇಲೆ ಕೋವಿಡ್ 19 ಪತ್ರ ಅಂಟಿಸುವ ಮೂಲಕ ಸುತ್ತಮುತ್ತಲ ಜನರಿಗೂ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ.

Published On - 1:33 pm, Tue, 28 April 20

Click on your DTH Provider to Add TV9 Kannada