ಕೊರೊನಾ ಸೋಂಕಿತ ಈ ವ್ಯಕ್ತಿ ಆರೋಗ್ಯ ಇಲಾಖೆಗೆ ತಲೆನೋವಾಗಿದ್ದಾನೆ

ಕೊರೊನಾ ಸೋಂಕಿತ ಈ ವ್ಯಕ್ತಿ ಆರೋಗ್ಯ ಇಲಾಖೆಗೆ ತಲೆನೋವಾಗಿದ್ದಾನೆ

ಬೆಂಗಳೂರು: ಕೊರೊನಾ ಸೋಂಕು ತಗುಲಿಸಿಕೊಂಡಿರುವ 419ನೇ ಸೋಂಕಿತ ವ್ಯಕ್ತಿ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಬಿಹಾರ ಮೂಲದ ಈತ ವಿದೇಶಕ್ಕೂ ಹೋಗಿಲ್ಲ, ದೆಹಲಿಗೂ ಹೋಗಿ ಬಂದಿಲ್ಲ. ಆದರೂ ಹೇಗೆ ಕೊರೊನಾ ಸೋಂಕು ಬಂತೆಂಬುದೇ ಟೆನ್ಷನ್​ ಆಗಿದೆ.

ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಮೂಲಕ ಪತ್ತೆ ಹಚ್ಚಲು ಪೊಲೀಸರೂ ನೆರವಾಗುತ್ತಿದ್ದಾರೆ. ಆದ್ರೆ ಈ 419ನೇ ಸೋಂಕಿತ ವ್ಯಕ್ತಿ ಮೊಬೈಲ್ ಫೋನ್‌ ಬಳಸುತ್ತಿರಲಿಲ್ಲ. ಆತ ಕೆಲಸ ಮಾಡುತ್ತಿದ್ದ ಮಂಗಮ್ಮನಪಾಳ್ಯದ ಗುಜರಿ ಅಂಗಡಿ ಮಾಲೀಕ ಈಗ ನಾಪತ್ತೆಯಾಗಿದ್ದಾನೆ.

419ನೇ ಸೋಂಕಿತ ವ್ಯಕ್ತಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈಗಾಗಲೇ ಎರಡು ಬಾರಿ ವೆಂಟಿಲೇಟರ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ. ಲಾಕ್ ಡೌನ್ ಇದ್ದರೂ ಕೆಲಸಕ್ಕೆ ಬರಲು ಆತನ ಮಾಲೀಕ ಒತ್ತಾಯ ಮಾಡಿದ್ದ ಎಂದು ಆರೋಪಿಸಿ, ಮಾಲೀಕನ ಬಗ್ಗೆ ಈ ಬಿಹಾರಿ ಸೋಂಕಿತ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾನೆ

ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ ಎಂದರೂ ಮಾಲೀಕ ಕೆಲಸಕ್ಕೆ ಬರಲು ಒತ್ತಾಯಿಸಿದ್ದನಂತೆ. 13 ದಿನಗಳ ಕಾಲ ಗುಜರಿಯಲ್ಲಿ ಕೆಲಸ ಮಾಡಿದ್ದ ಮಾಹಿತಿಯಿದೆ. ತನ್ನಲ್ಲಿ ಕೆಲಸ ಮಾಡುತ್ತಿದ್ದವನಿಗೆ ಸೋಂಕು ತಗುಲಿರುವ ವಿಚಾರ ತಿಳಿಯುತ್ತಿದಂತೆ ಮಾಲೀಕ ಎಸ್ಕೇಪ್ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ಮಾಲೀಕನಿಗಾಗಿ ಶೋಧ ತೀವ್ರಗೊಂಡಿದೆ.

Click on your DTH Provider to Add TV9 Kannada