ಬೆಳಗಿನ ಜಾವವೇ ಬೆಂಗಳೂರಿನಲ್ಲಿ ವರುಣನ ಅಬ್ಬರ, ಸುತ್ತಮುತ್ತ ಜಿಲ್ಲೆಗಳಲ್ಲೂ ಧಾರಾಕಾರ ಮಳೆ

ಬೆಳಗಿನ ಜಾವವೇ ಬೆಂಗಳೂರಿನಲ್ಲಿ  ವರುಣನ ಅಬ್ಬರ, ಸುತ್ತಮುತ್ತ ಜಿಲ್ಲೆಗಳಲ್ಲೂ ಧಾರಾಕಾರ ಮಳೆ

ಬೆಂಗಳೂರು: ಬೆಳ್ಳಂಬೆಳಗ್ಗೆ ಬೆಂಗಳೂರು ನಗರದ ಹಲವೆಡೆ ಗುಡುಗು ‌ಸಹಿತ ಭಾರಿ ಮಳೆಯಾಗಿದೆ. ಕಾರ್ಪೊರೇಷನ್, ಮೆಜೆಸ್ಟಿಕ್, K.R.ಮಾರ್ಕೆಟ್, ವಿಧಾನಸೌಧ, ಶಾಂತಿನಗರ, ಆರ್.ಟಿ.ನಗರ, ಮಲ್ಲೇಶ್ವರಂ, ಬಸವೇಶ್ವರನಗರ, ರಾಜಾಜಿನಗರ, ವಿಜಯನಗರ, ಉತ್ತರಹಳ್ಳಿ, ಯಶವಂತಪುರ, ವಸಂತನಗರ, ಮಲ್ಲಸಂದ್ರ, ಬಾಗಲಗುಂಟೆ, ಹೆಸರಘಟ್ಟ, ಚಿಕ್ಕಬಾಣಾವರ ಸೇರಿದಂತೆ ನಗರದ ಹಲವೆಡೆ ಭಾರಿ ಮಳೆಯಾಗಿದೆ.

ಬೆಳ್ಳಂಬೆಳಗ್ಗೆ ಸುಮಾರು 4 ಗಂಟೆಗೆ ಶುರುವಾದ ವರುಣರಾಯನ ಅಬ್ಬರ 7 ಗಂಟೆಯ ನಂತರ ಕೊಂಚ ರಿಲೀಫ್ ನೀಡಿದೆ. ಇನ್ನು ಹಲವೆಡೆ ಮಳೆಯ ಅಬ್ಬರ ಕಡಿಮೆಯಾಗಿಲ್ಲ. ಮಳೆಯ ಜೊತೆ ಗಾಳಿ ಕೂಡ ಬೀಸುತ್ತಿದ್ದು, ರಸ್ತೆಯಲ್ಲಿ ಮರಗಳು ಧರೆಗೆ ಉರುಳುವ ಸಾಧ್ಯತೆ ಇದೆ. ಮಳೆಗೆ ರಸ್ತೆಗಳೂ ಕೆರೆಯಂತಾಗಿವೆ. ಬೆಳ್ಳಂಬೆಳಗ್ಗೆ ಮಳೆರಾಯನ ಆಗಮನ ಉಷ್ಣಾಂಶದಿಂದ ಇದ್ದ ಸಿಲಿಕಾನ್ ಸಿಟಿ ತಂಪಾಗಿದೆ. ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ರಾತ್ರಿಯಿಡೀ ಒಂದೇ ಸಮನೆ ಮಳೆಯಾಗಿದೆ. ಕೊರೊನಾ ಸೋಂಕಿನ ಆತಂಕದ ನಡುವೆ ಈ ರೀತಿಯ ಮಳೆಯಿಂದ ಮುಂದೆ ಯಾವ ರೀತಿಯ ಸಂಕಷ್ಟವನ್ನು ಎದುರಿಸಬೇಕಾಗುತ್ತೋ ಕಾದು ನೋಡಬೇಕಿದೆ.

ಮಳೆಗೆ ಸಿಲಿಕಾನ್ ಸಿಟಿ ತತ್ತರ: ಅಲ್ಲದೆ ಮಳೆಯ ಪರಿಣಾಮ ಬೊಮ್ಮನಹಳ್ಳಿಯಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿದ್ದು, ನೀರು ಹೊರಹಾಕಲು ಜನ ಹರಸಾಹಸ ಪಡುತ್ತಿದ್ದಾರೆ. ಪಟ್ಟೇಗಾರಪಾಳ್ಯದಲ್ಲಿ ರಸ್ತೆ ಕುಸಿತವಾಗಿದೆ. ಸುಂಕದಕಟ್ಟೆ ಹಲವೆಡೆ ಹಲವು ಮನೆಗಳಿಗೆ ನೀರು ನುಗ್ಗಿದೆ. ಕೋರಮಂಗಲ, ಜಕ್ಕಸಂದ್ರ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದೆ. ಇದರಿಂದ ತುರ್ತು ಸೇವೆಗೆ ಹಾಗೂ ಅಗತ್ಯ ಸೇವೆಗೆ ಹೊರ ಬರತ್ತಿದ್ದವರಿಗೆ ಕಷ್ಟ ಎದುರಾಗಿದೆ. ಕೊರೊನಾ ಲಾಕ್​ಡೌನ್ ಹಿನ್ನೆಲೆ ಬಿಜಿ ಇರುವ ಬಿಬಿಎಂಪಿ ಸಿಬ್ಬಂದಿಗೆ ತಲೆ ನೋವಾಗಿದೆ.

ಒಳಗೆ ಕೊರೊನಾ.. ಹೊರಗೆ ವರುಣ! ಬೆಂಗಳೂರಿನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ರೋಗಿಗಳು ಪರದಾಡುವಂತ ಪರಿಸ್ಥಿತಿ ಉಂಟಾಗಿದೆ. ಅರಸೀಕೆರೆಯಿಂದ ವಿಕ್ಟೋರಿಯಾಗೆ 2 ಕುಟುಂಬ ಡಯಾಲಿಸಿಸ್​ಗಾಗಿ ಬಂದಿದೆ. ಕೊರೊನಾ ಹಿನ್ನೆಲೆಯಲ್ಲಿ ಸಿಬ್ಬಂದಿ ಅವರನ್ನ ಆಸ್ಪತ್ರೆ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಹೀಗಾಗಿ ವಿಕ್ಟೋರಿಯಾ ಹೊರಾಂಗಣದಲ್ಲಿ ಇಬ್ಬರು ಡಯಾಲಿಸಿಸ್ ರೋಗಿಗಳು ಮತ್ತು ಅವರ ಕುಟುಂಬ ಮಳೆಯಲ್ಲ ನೆನೆಯುತ್ತಿರುವ ದೃಶ್ಯ ಕಂಡು ಬಂದಿದೆ. https://www.facebook.com/Tv9Kannada/videos/585438538740475/

Published On - 7:19 am, Wed, 29 April 20

Click on your DTH Provider to Add TV9 Kannada