ಯೋಧ ಸಚಿನ್ ಬಿಡುಗಡೆ, ಚರ್ಚಿಸಿ ಪೊಲೀಸರ ಮೇಲೆ ಕೇಸ್ ಮಾಡುವ ತೀರ್ಮಾನ
ಬೆಳಗಾವಿ: ಅತ್ಯಂತ ಸಣ್ಣ ವಿಷಯವೊಂದು ದೊಡ್ಡ ರಂಪಾರಾಮಾಯಣವಾಗುವ ಮೂಲಕ ಕೊರೊನಾ ಸೋಂಕು ಹೀಗೂ ನಮ್ಮ ಯೋಧರು ಮತ್ತು ಅಧಿಕಾರಿಗಳನ್ನು ಪರೀಕ್ಷೆಗೊಡ್ಡಿದೆ. ಯುವ ಯೋಧ ಸಚಿನ್ ಮಾಸ್ಕ್ ಧರಿಸಿಲ್ಲ, ಪ್ರಶ್ನಿಸಲು ಹೋದಾಗ ನಮ್ಮ ಪೊಲೀಸ್ ಬೆಲ್ಟ್ಗೆ ಒದ್ದಿದ್ದಾನೆ ಎಂದು ಎಂದು ಪೊಲೀಸರು ಅಲವತ್ತುಕೊಂಡಿದ್ದಾರೆ. ಸ್ವಲ್ಪದರಲ್ಲಿ ಬುದ್ಧಿವಾದ ಹೇಳಿ, ಸಂಯಮ ಮೆರೆದಿದ್ದರೆ ಘಟನೆ ಇಷ್ಟು ವಿಕೋಪಕ್ಕೆ ತಿರುಗುತ್ತಿರಲಿಲ್ಲ. ಸಾರ್ವಜನಿಕ ವಲಯದಲ್ಲೂ ಆಕ್ರೋಶಕ್ಕೆ ಗುರಿಯಾಗುತ್ತಿರಲಿಲ್ಲ. ಆದರೂ ಅಪಚಾರ ನಡೆದೇ ಹೋಗಿದೆ.. ತಾಜಾ ವರದಿಗಳ ಪ್ರಕಾರ ಯೋಧ ಸಚಿನ್ ಹಿಂಡಲಗಾ ಜೈಲಿಂದ ಬಿಡುಗಡೆಗೊಂಡಿದ್ದಾನೆ. […]
ಬೆಳಗಾವಿ: ಅತ್ಯಂತ ಸಣ್ಣ ವಿಷಯವೊಂದು ದೊಡ್ಡ ರಂಪಾರಾಮಾಯಣವಾಗುವ ಮೂಲಕ ಕೊರೊನಾ ಸೋಂಕು ಹೀಗೂ ನಮ್ಮ ಯೋಧರು ಮತ್ತು ಅಧಿಕಾರಿಗಳನ್ನು ಪರೀಕ್ಷೆಗೊಡ್ಡಿದೆ. ಯುವ ಯೋಧ ಸಚಿನ್ ಮಾಸ್ಕ್ ಧರಿಸಿಲ್ಲ, ಪ್ರಶ್ನಿಸಲು ಹೋದಾಗ ನಮ್ಮ ಪೊಲೀಸ್ ಬೆಲ್ಟ್ಗೆ ಒದ್ದಿದ್ದಾನೆ ಎಂದು ಎಂದು ಪೊಲೀಸರು ಅಲವತ್ತುಕೊಂಡಿದ್ದಾರೆ. ಸ್ವಲ್ಪದರಲ್ಲಿ ಬುದ್ಧಿವಾದ ಹೇಳಿ, ಸಂಯಮ ಮೆರೆದಿದ್ದರೆ ಘಟನೆ ಇಷ್ಟು ವಿಕೋಪಕ್ಕೆ ತಿರುಗುತ್ತಿರಲಿಲ್ಲ. ಸಾರ್ವಜನಿಕ ವಲಯದಲ್ಲೂ ಆಕ್ರೋಶಕ್ಕೆ ಗುರಿಯಾಗುತ್ತಿರಲಿಲ್ಲ. ಆದರೂ ಅಪಚಾರ ನಡೆದೇ ಹೋಗಿದೆ..
ತಾಜಾ ವರದಿಗಳ ಪ್ರಕಾರ ಯೋಧ ಸಚಿನ್ ಹಿಂಡಲಗಾ ಜೈಲಿಂದ ಬಿಡುಗಡೆಗೊಂಡಿದ್ದಾನೆ. ಸಿಆರ್‌ಪಿಎಫ್ ಡೆಪ್ಯೂಟಿ ಕಮಾಂಡೆಂಟ್ ರಘುವಂಶಿ ಉಪಾಧ್ಯ ಅವರು ಸಚಿನ್ನರನ್ನು ಬಿಡುಗಡೆ ಮಾಡಿಸಿಕೊಂಡು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿಯಲ್ಲಿರುವ ಸಿಆರ್‌ಪಿಎಫ್ ಕೋಬ್ರಾ ಟ್ರೈನಿಂಗ್ ಸೆಂಟರ್ ಗೆ ಕರೆದುಕೊಂಡು ಹೋಗಿದ್ದಾರೆ. ಟ್ರೈನಿಂಗ್ ಸೆಂಟರ್ಗೆ ಕರೆದುಕೊಂಡು ಹೋದ ಬಳಿಕ ಯೋಧನಿಂದ ಘಟನೆ ಕುರಿತು ಮಾಹಿತಿ ಪಡೆಯುತ್ತೇವೆ. ಮಾಹಿತಿ ಪಡೆದು, ಘಟನೆ ಬಗ್ಗೆ ಮುಂದಿನ ನಿರ್ಧಾರ ಮಾಡುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆ ಕುರಿತು ಮೇಲಾಧಿಕಾರಿಗಳಿಗೆ ಸಂಪೂರ್ಣ ವಿವರವನ್ನ ತಿಳಿಸಲಾಗುತ್ತೆ. ಯೋಧ ಸಚಿನ್ ಗೆ ಡ್ಯೂಟಿಗೆ ಹಾಜರು ಪಡಿಸಿಕೊಳ್ಳುತ್ತೇವೆ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪೊಲೀಸರ ಮೇಲೆ ಕೇಸ್ ಮಾಡುವ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ. ಎಂದು ಬೆಳಗಾವಿಯ ಹಿಂಡಲಗಾ ಜೈಲು ಬಳಿ ಡೆಪ್ಯೂಟಿ ಕಮಾಂಡೆಂಟ್ ರಘುವಂಶಿ ಉಪಾಧ್ಯ ಹೇಳಿದ್ದಾರೆ.
Published On - 5:39 pm, Tue, 28 April 20