ಕೊರೊನಾ ಹೊಡೆತಕ್ಕೆ ರಾಜ್ಯದ ಆರ್ಥಿಕತೆ ವಿಲವಿಲ!

ಬೆಂಗಳೂರು: ಕೊರೊನಾ ಹೊಡೆತಕ್ಕೆ ಸಿಲುಕಿ ಕರುನಾಡು ಕಂಪಿಸ್ಬಿಟ್ಟಿದೆ. ವಾರಗಟ್ಟಲೇ, ತಿಂಗಳುಗಟ್ಟಲೇ ರಾಜ್ಯಕ್ಕೆ ರಾಜ್ಯವೇ ಸ್ತಬ್ಧವಾಗಿದೆ. ರಾಜ್ಯದ ಆರ್ಥಿಕತೆಗೆ ಲಾಕ್​ ಬಿದ್ದಿದೆ. ಎಕಾನಮಿ ಎಂಜಿನ್ ಸ್ಟಾರ್ಟ್ ಆಗದೆ ನಿಂತಲ್ಲೇ ನಿಂತಿದೆ. ಕೊರೊನಾ ವಿರುದ್ಧ ಹೋರಾಡೋದರ ಜೊತೆಗೆ ಆರ್ಥಿಕ ನೊಗವನ್ನ ಹೆಗಲ ಮೇಲಿಟ್ಟು ಎಳೆಯೋದು ಸರ್ಕಾರಕ್ಕೆ ಸವಾಲಾಗಿದೆ. ಮೇ 3ಕ್ಕೆ ಲಾಕ್​ಡೌನ್ ಮುಗಿಯೋದು ಬಹುತೇಕ್ ಡೌಟ್. ಲಾಕ್​​​ಡೌನ್​​ ಬೀಗ ಗಲ್ಲಿ ಗಲ್ಲಿಗೂ ಬಿದ್ದಿದೆ. ಕೊರೊನಾ ಹೊಡೆತಕ್ಕೆ ಸಿಲಕಿ ಮಕಾಡೆ ಮಲಗಿರೊ ಆರ್ಥಿಕತೆ ಮೇಲೆತ್ತೋದೆ ಸಿಎಂ ಯಡಿಯೂರಪ್ಪ ಸರ್ಕಾರಕ್ಕಿರೋ ಬಹುದೊಡ್ಡ ಚಾಲೆಂಜ್. […]

ಕೊರೊನಾ ಹೊಡೆತಕ್ಕೆ ರಾಜ್ಯದ ಆರ್ಥಿಕತೆ ವಿಲವಿಲ!
Follow us
ಸಾಧು ಶ್ರೀನಾಥ್​
|

Updated on: Apr 29, 2020 | 10:04 AM

ಬೆಂಗಳೂರು: ಕೊರೊನಾ ಹೊಡೆತಕ್ಕೆ ಸಿಲುಕಿ ಕರುನಾಡು ಕಂಪಿಸ್ಬಿಟ್ಟಿದೆ. ವಾರಗಟ್ಟಲೇ, ತಿಂಗಳುಗಟ್ಟಲೇ ರಾಜ್ಯಕ್ಕೆ ರಾಜ್ಯವೇ ಸ್ತಬ್ಧವಾಗಿದೆ. ರಾಜ್ಯದ ಆರ್ಥಿಕತೆಗೆ ಲಾಕ್​ ಬಿದ್ದಿದೆ. ಎಕಾನಮಿ ಎಂಜಿನ್ ಸ್ಟಾರ್ಟ್ ಆಗದೆ ನಿಂತಲ್ಲೇ ನಿಂತಿದೆ. ಕೊರೊನಾ ವಿರುದ್ಧ ಹೋರಾಡೋದರ ಜೊತೆಗೆ ಆರ್ಥಿಕ ನೊಗವನ್ನ ಹೆಗಲ ಮೇಲಿಟ್ಟು ಎಳೆಯೋದು ಸರ್ಕಾರಕ್ಕೆ ಸವಾಲಾಗಿದೆ.

ಮೇ 3ಕ್ಕೆ ಲಾಕ್​ಡೌನ್ ಮುಗಿಯೋದು ಬಹುತೇಕ್ ಡೌಟ್. ಲಾಕ್​​​ಡೌನ್​​ ಬೀಗ ಗಲ್ಲಿ ಗಲ್ಲಿಗೂ ಬಿದ್ದಿದೆ. ಕೊರೊನಾ ಹೊಡೆತಕ್ಕೆ ಸಿಲಕಿ ಮಕಾಡೆ ಮಲಗಿರೊ ಆರ್ಥಿಕತೆ ಮೇಲೆತ್ತೋದೆ ಸಿಎಂ ಯಡಿಯೂರಪ್ಪ ಸರ್ಕಾರಕ್ಕಿರೋ ಬಹುದೊಡ್ಡ ಚಾಲೆಂಜ್. ಇದ್ರಿಂದ ಅಲರ್ಟ್ ಆಗಿರೋ ಆರ್ಥಿಕ ಇಲಾಖೆ, ಹಳಿ ತಪ್ಪಿರೋ ರೈಲನ್ನ ಮರಳಿ ಹಳಿಗೆ ತರೋದಕ್ಕೆ ಪ್ಲ್ಯಾನ್ ಮಾಡಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ. ಆರ್ಥಿಕ ಮಿತವ್ಯಯಕ್ಕೆ ಮೂಗುದಾರ ಜಡಿಯಲೇಬೇಕು ಅಂತ ಎಚ್ಚರಿಕೆಯೊಂದನ್ನ ರವಾನಿಸಿದೆ.

ಲಾಕ್​ಡೌನ್ ಹೊಡೆತಕ್ಕೆ ಸಿಲುಕಿ ಆರ್ಥಿಕತೆ ವಿಲ ವಿಲ! ಇನ್ನು, ರಾಜ್ಯದ ಆರ್ಥಿಕ ಸ್ಥಿತಿಗತಿಗೆ ಸಂಜೀವಿನಿ ನೀಡೋಕೆ ಆರ್ಥಿಕ ಇಲಾಖೆ ಹತ್ತು ಹಲವು ಬಿಗಿ ಸೂತ್ರ ಅನುಸರಿಸಲು ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಕೆಲವೊಂದು ವೆಚ್ಚಗಳಿಗೆ ಕಡಿವಾಣ ಹಾಕಲೇ ಬೇಕು ಅನ್ನೋ ಎಚ್ಚರಿಕೆ ರವಾನಿಸಿದೆ. ಎಲ್ಲಾ ಇಲಾಖೆಗಳಿಗೂ ಕಟ್ಟುನಿಟ್ಟಿನ ನಿರ್ದೇಶನ ಕೂಡ ನೀಡಿದೆ.

ಆರ್ಥಿಕ ಇಲಾಖೆ ಆದೇಶವೇನು? ಆರ್ಥಿಕ ಪುನಶ್ಚೇತನಕ್ಕಾಗಿ ಹತ್ತು ಹಲವು ಆದೇಶಗಳನ್ನ ಹೊರಡಿಸಿಲಾಗಿದೆ. ಸದ್ಯಕ್ಕೆ ಹೊಸ ವಾಹನ, ಪೀಠೋಪಕರಣಗಳ ಖರೀದಿ ಮಾಡುವಂತಿಲ್ಲ. ಕಟ್ಟಡಗಳ ದೊಡ್ಡ ಮಟ್ಟದ ರಿಪೇರಿ ಕೆಲಸಗಳನ್ನು ಕೂಡ ಮಾಡಂಗಿಲ್ಲ. ದೊಡ್ಡ ಮಟ್ಟದ ಕಟ್ಟಡಗಳ‌ ನಿರ್ಮಾಣ ಕಾರ್ಯವೂ ನಡೆಸಂಗಿಲ್ಲ ಎನ್ನಲಾಗಿದೆ.

ಜೊತೆಗೆ ಆರ್ಥಿಕ ಇಲಾಖೆಯ ಇಲಾಖೆ ಅನುಮತಿ ಇಲ್ಲದೇ ಅರಿಯರ್ಸ್ ಪಾವತಿಯಾಗುವಂತಿಲ್ಲ. ಇನ್ನು, ನಿಗಮ-ಮಂಡಳಿಗಳಿಗೆ ಸಂಬಂಧಿಸಿದ ಸಾಲ ಹಾಗೂ ಮುಂಗಡ ಹಣಗಳಿಗೆ ಆಡಳಿತಾತ್ಮಕ ಇಲಾಖೆ 15 ದಿನ ಮೊದಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು.

ಆಡಳಿತಾತ್ಮಕ ಇಲಾಖೆ ನೀಡುವ ಪ್ರತಿಯೊಂದು ಮಾಹಿತಿಯನ್ನ ಆಧರಿಸಿ ಹಣ ಬಿಡುಗಡೆ ಮಾಡಲಾಗುತ್ತೆ. ಅಲ್ಲದೇ, ಸಂಬಳ ಹೊರತು ಪಡಿಸಿ ಯಾವುದೇ ಅನಗತ್ಯ ವೆಚ್ಚ ಮಾಡುವಂತಿಲ್ಲ. ಏಪ್ರಿಲ್ ತಿಂಗಳ ಸಂಬಳ ಮಾತ್ರ ಬಿಡುಗಡೆ ಮಾಡ್ಬೇಕಾಗಿದ್ದು, ಹಿಂದಿನ ತಿಂಗಳ ಬಾಕಿ ಯಾವ ಕಾರಣಕ್ಕೂ ರಿಲೀಸ್ ಮಾಡುವಂತಿಲ್ಲ.

ಇದರ ಜೊತೆಗೆ ಸಂಬಳ ಹೊರತು ಪಡಿಸಿ ಯಾವುದೇ ಯೋಜನೆಗೆ ಖರ್ಚು ಮಾಡಂಗಿಲ್ಲ, ಒಂದು ವೇಳೆ ಹಣವನ್ನು ಯೋಜನೆಗಳಿಗೆ ಖರ್ಚು ಮಾಡಿದ್ದೇ ಆಗಿದಲ್ಲಿ, ಹಣಕಾಸು ಇಲಾಖೆ ಅನುಮತಿ ಅಗತ್ಯವಾಗಿದೆ. ಅನುದಾನಿತ ಸಂಸ್ಥೆಗಳು ಹೆಚ್​​ಆರ್​ಎಂಎಸ್ ಮೂಲಕ ಸ್ಯಾಲರಿ ಪಡೆಯಬೇಕು ಎಂದು ಆದೇಶ ಹೊರಡಿಸಲಾಗಿದೆ.

ಇನ್ನೊಂದೆಡೆ ಲಾಕ್​ಡೌನ್​​ನಿಂದಾಗಿ ಆಗಿರೋ ಲಾಸ್ ಎಷ್ಟು.. ಎಲ್ಲೆಲ್ಲಿ ಹೊಡೆತ ಬಿದ್ದಿದೆ. ಯಾವ್ಯಾವ ಕ್ಷೇತ್ರಗಳಿಗೆ ಕೋಟಿ ಕೋಟಿ ಲಾಸ್ ಆಗಿದೆ. ಈ ಬಗ್ಗೆ ಸಿಎಂ ಬಿಎಸ್​ವೈಗೆ ಅಧಿಕಾರಿಗಳು ಕೊಟ್ಟಿರೋ ಮಾಹಿತಿ ಏನು ಅನ್ನೋದನ್ನ ನೋಡೋದಾದ್ರೆ.

ಆದಾಯಕ್ಕೆ ಕೊರೊನಾಘಾತ! ಲಾಕ್​​ಡೌನ್​ನಿಂದಾಗಿ ತೆರಿಗೆ ಬಾಕಿಯಿಂದ 13 ಸಾವಿರದಿಂದ 14 ಸಾವಿರ ಕೋಟಿ ನಷ್ಟವಾಗಿದೆ. ಮಾರ್ಚ್ ಕೊನೆಯಲ್ಲಿ ಕೆಲವು ಕಾಮಗಾರಿಗಳ ಬಿಲ್​ಗಳಿಗೆ ಬ್ರೇಕ್ ಬಿದ್ದಿತ್ತು. ಮಾರ್ಚ್ ಹಾಗೂ ಏಪ್ರಿಲ್​​ನಲ್ಲಿ ವ್ಯಾಪಾರ ವಹಿವಾಟು ನಡೆದಿಲ್ಲ. ಹೀಗಾಗಿ ಮೇ ಅಂತ್ಯದವರೆಗೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ GST ಪಾಲು ದೊರೆಯುವುದಿಲ್ಲ. ಅಬಕಾರಿ ಇಲಾಖೆಗೆ 1 ತಿಂಗಳಿನಲ್ಲೇ ₹2 ಸಾವಿರ ಕೋಟಿ ನಷ್ಟವಾಗಿದ್ದು ರಾಜ್ಯದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕೋದು ಫಿಕ್ಸ್ ಅಂತ ಮಾಹಿತಿ ನೀಡಲಾಗಿದೆ.

ಆದಾಯ ಮೂಲ ಮದ್ಯದಂಗಡಿ ತೆರೆಯಲು ಸಲಹೆ! ಇಷ್ಟೇ ಅಲ್ಲ, ರಾಜ್ಯ ಸರ್ಕಾರಕ್ಕೆ ಆದಾಯದ ಮೂಲವಾಗಿರೋ ಮದ್ಯಮಾರಾಟಕ್ಕೆ ಅವಕಾಶ ನೀಡುವಂತೆ ಅಧಿಕಾರಿಗಳು ಸಿಎಂಗೆ ಸಲಹೆ ನೀಡಿದ್ದಾರೆ. ಅದ್ರಲ್ಲೂ ರೆಡ್​ಜೋನ್ ಬಿಟ್ಟು ಗ್ರೀನ್​​ಜೋನ್​​ನಲ್ಲಿ ಲಿಕ್ಕರ್ ಮಾರಾಟಕ್ಕೆ ಅವಕಾಶ ನೀಡಿದ್ರೆ, ಆರ್ಥಿಕವಾಗಿ ಸದೃಢವಾಗುವುದಕ್ಕೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಒಟ್ನಲ್ಲಿ, ಲಾಕ್​​ಡೌನ್​ನಿಂದಾಗಿ ಪ್ರತಿಯೊಂದು ಕ್ಷೇತ್ರವೂ ಸ್ತಬ್ಧವಾಗಿದೆ. ಕೈಗಾರಿಕೆಗಳಿಗೆ ಬೀಗ ಬಿದ್ದಿದೆ. ವ್ಯಾಪಾರವೂ ಇಲ್ಲದಂತಾಗಿದೆ. ಜನರ ಕೈಯಲ್ಲಿ ದುಡ್ಡಿಲ್ಲ. ಬ್ಯುಸಿನೆಸ್​ಮನ್​ಗಳು ಬೆಂದು ಹೋಗಿದ್ದಾರೆ. ಇದೆಲ್ಲದರ ಹೊಡೆತಕ್ಕೆ ಸಿಲುಕಿ ರಾಜ್ಯದ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕ್ಕಿದ್ದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲ್ ಎದುರಾಗಿದೆ.

ಆರ್ಥಿಕ ಪುನಶ್ಚೇತನದ ಬಗ್ಗೆ ಗಮನ ಹರಿಸದೇ ಹೋದಲ್ಲಿ ಲಾಕ್​ಡೌನ್ ತೆರವು ಬಳಿಕ ರಾಜ್ಯ ಅತೀ ದೊಡ್ಡ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿಬಿಡುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದೆ. ಹೀಗಾಗಿ ಸಾಧ್ಯವಾದಷ್ಟೂ ಮಿತವ್ಯಯಕ್ಕೆ ಈಗ ಆರ್ಥಿಕ ಇಲಾಖೆ ಕೈ ಹಾಕಿದೆ.

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ