ಮದ್ಯದ ಅಂಗಡಿ ತೆರೆಯಲು ಸಿದ್ದರಾಮಯ್ಯ ಸಲಹೆ

ಮದ್ಯದ ಅಂಗಡಿ ತೆರೆಯಲು  ಸಿದ್ದರಾಮಯ್ಯ ಸಲಹೆ

ಬೆಂಗಳೂರು: ಕೊರೊನಾ ನಿಗ್ರಹ ಸಲುವಾಗಿ ದೇಶಾದ್ಯಂತ ಮದ್ಯಪಾನ ಮಾರಾಟಕ್ಕೆ ನಿಷೇಧ ಹೇರಿರುವ ಬೆನ್ನಿಗೆ ಕೊರೊನಾ ಕಾಟ ಇಲ್ಲದ ಗ್ರೀನ್​ ಜೋನ್​ನಲ್ಲಿ ಮದ್ಯದ ಅಂಗಡಿ ತೆರೆಯಲು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲಿ ಆರ್ಥಿಕ ಸಮಸ್ಯೆಯಿದೆ. ಅಬಕಾರಿ ಸುಂಕ ಬಂದರೆ ಹಣಕಾಸು ಸ್ಥಿತಿ ಸುಧಾರಿಸಲಿದೆ. ಷರತ್ತು ವಿಧಿಸಿ ಮದ್ಯದ ಅಂಗಡಿ ತೆರೆದರೆ ಒಳ್ಳೆಯದು. ರಾಜ್ಯದ ಆರ್ಥಿಕ ದೃಷ್ಟಿಯಿಂದ ಹೇಳುತ್ತಿರುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Published On - 4:32 pm, Tue, 28 April 20

Click on your DTH Provider to Add TV9 Kannada