ಗರ್ಭಿಣಿಯರಿಗೆ‌ ಬಾಧೆಯಾಗದಂತೆ‌‌ ಸರ್ಕಾರದಿಂದ ಹೊಸ ಮಾರ್ಗಸೂಚಿ

ಗರ್ಭಿಣಿಯರಿಗೆ‌ ಬಾಧೆಯಾಗದಂತೆ‌‌ ಸರ್ಕಾರದಿಂದ ಹೊಸ ಮಾರ್ಗಸೂಚಿ

ಬೆಂಗಳೂರು: ಕೊರೊನಾ ವೈರಸ್ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಗರ್ಭಿಣಿಯರ ಆರೋಗ್ಯ ವಿಚಾರದಲ್ಲಿ ಸರ್ಕಾರ ಹೊಸ ಮಾರ್ಗದರ್ಶನಕ್ಕೆ ಮುಂದಾಗಿದೆ. ಗರ್ಭಿಣಿಯರು ಇಂತಹ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಗರ್ಭಿಣಿಯರಿಗೆ ಸೋಂಕು ಬೇಗ ತಗುಲುತ್ತದೆ. ಹೀಗಾಗಿ ಸರ್ಕಾರ ಹೊಸ‌ ಗೈಡ್ ಲೈನ್ ಹೊರಡಿಸಿದೆ.

ಗರ್ಭಿಣಿಯರಿಗೆ‌ ತೊಂದರೆಯಾಗದಂತೆ‌‌ ಸರ್ಕಾರದಿಂದ ಕ್ರಮ: -ಪ್ರಥಮಿಕ ಆರೋಗ್ಯ ಕೇಂದ್ರಗಳು 24 ಗಂಟೆ ಓಪನ್ ಮಾಡಬೇಕು -ಕೊರೊನಾ ಹಾಟ್ ಸ್ಪಾಟ್, ಸೀಲ್‌ಡೌನ್ ಏರಿಯಾದ ಗರ್ಭಿಣಿಯರ ಪಟ್ಟಿ ಸಿದ್ಧ ಮಾಡಿಕೊಳ್ಳಬೇಕು -ಗರ್ಭಿಣಿ ಸ್ತ್ರೀಯರ ಆರೋಗ್ಯ ತಪಾಸಣೆ ಮನೆಯಲ್ಲೇ ಮಾಡಬೇಕು -ತುರ್ತು ಪರಿಸ್ಥಿತಿಯನ್ನ ನಿಭಾಯಿಸಲು ಸಿದ್ಧರಿರಬೇಕು

ಈ ರೀತಿ ಕೆಲ ಕ್ರಮಗಳನ್ನು ಪಾಲಿಸಲು ಸರ್ಕಾರ ನಿರ್ಧರಿಸಿದೆ. ಆಶಾ ಕಾರ್ಯಕರ್ತೆಯರು ಸೀಲ್ ಡೌನ್ ಮತ್ತು ಹಾಟ್ ಸ್ಟಾಟ್​ನ ಗರ್ಭಿಣಿಯರ ಮಾಹಿತಿ ಕಲೆ ಹಾಕಬೇಕು. ಜೊತೆಗೆ ಅವ್ರ ಹೆರಿಗೆ ದಿನಾಂಕದ ಬಗ್ಗೆ ಮಾಹಿತಿ ಕಲೆಹಾಕಿ‌ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಬೇಕು. ಸಾಮಾನ್ಯ ಪರೀಕ್ಷೆ ಜೊತೆಗೆ ಕೊರೊನಾ ಸೋಂಕಿನ ಲಕ್ಷಣದ ಬಗ್ಗೆ ನಿಗಾ ವಹಿಸಬೇಕು ಎಂದು ತಿಳಿಸಿದೆ.

ಪರೀಕ್ಷೆ ವೇಳೆ ಕೊರೊನಾ ಪಾಸಿಟಿವ್ ಇದ್ದ ಗರ್ಭಿಣಿಯರಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಗರ್ಭಿಣಿಯರಿರುವ ವಲಯದ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ವಾರ್ಡ್​ನಲ್ಲಿ ಚಿಕಿತ್ಸೆಗೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ಕ್ಲೋಸ್‌ ಆಗಿರೋ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರಗಳು ಗರ್ಭಿಣಿಯರ ಚಿಕಿತ್ಸೆಗೆ ಸಿದ್ಧರಿರಬೇಕು ಎಂದು ತಿಳಿಸಲಾಗಿದೆ.

Published On - 3:50 pm, Tue, 28 April 20

Click on your DTH Provider to Add TV9 Kannada