TV9 Kannada News Live: ಬೆಂಗಳೂರಿನಲ್ಲಿ ರಾತ್ರೋರಾತ್ರಿ ಅಬ್ಬರಿಸಿದ ಮಳೆರಾಯ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

Karnataka News Today Live Updates: ಬೆಂಗಳೂರಿನ ಭಾರಿ ಮಳೆ, ಹಾಲಿನ ದರ ಹಾಗೂ ಬಸ್ ದರ ಏರಿಕೆ ಕುರಿತ ಡಿ.ಕೆ.ಶಿವಕುಮಾರ್ ನೇತೃತ್ವದ ಸಂಪುಟ ಸಭೆ ಮತ್ತು ಬ್ರಿಟಿಷ್ ಏರ್‌ವೇಸ್ ತುರ್ತು ಭೂಸ್ಪರ್ಶ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಲೈವ್ ಅಪ್‌ಡೇಟ್ ಇಲ್ಲಿದೆ.

TV9 Kannada News Live: ಬೆಂಗಳೂರಿನಲ್ಲಿ ರಾತ್ರೋರಾತ್ರಿ ಅಬ್ಬರಿಸಿದ ಮಳೆರಾಯ! ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ
ಬೆಂಗಳೂರಿನಲ್ಲಿ ರಾತ್ರೋರಾತ್ರೊ ಅಬ್ಬರಿಸಿದ ಮಳೆರಾಯ!

Updated on: Oct 06, 2026 | 9:37 AM

LIVE NEWS & UPDATES

  • 06 Oct 2026 09:37 AM (IST)

    ಬೆಂಗಳೂರಿನಲ್ಲಿ ಭಾರಿ ಮಳೆ: ಚಲಿಸುತ್ತಿದ್ದ ಬಸ್ ಮೇಲೆ ಬಿದ್ದ ಮರ!

    ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಬೈಯ್ಯಪ್ಪನಹಳ್ಳಿ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಮೇಲೆ ಮರ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದಾಗಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿದ್ದು, ಪೊಲೀಸರು ಮರ ತೆರವುಗೊಳಿಸಿ ಬಸ್ ಹೊರತೆಗೆದಿದ್ದಾರೆ.

  • 06 Oct 2026 09:08 AM (IST)

    ಬೀದಿನಾಯಿಗಳ ಹಾವಳಿಗೆ ಮುಕ್ತಿ ಹಾಡಲು ದಾವಣಗೆರೆ ಪಾಲಿಕೆ ಮುಂದು

    ದಾವಣಗೆರೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿ ಹಾಗೂ ಮಕ್ಕಳ ಮೇಲಿನ ದಾಳಿಯಿಂದ ಜನರು ಭೀತಿಗೊಂಡಿದ್ದಾರೆ. ಈ ಸಮಸ್ಯೆಗೆ ಕಡಿವಾಣ ಹಾಕಲು ಸ್ಥಳೀಯರು ಆಗ್ರಹಿಸಿದ್ದು, ಮಹಾನಗರ ಪಾಲಿಕೆಯು ₹95 ಲಕ್ಷ ವೆಚ್ಚದಲ್ಲಿ ಶ್ವಾನಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ವಿಶೇಷ ಯೋಜನೆ ರೂಪಿಸಿದೆ.

  • 06 Oct 2026 08:13 AM (IST)

    ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪ್ರಮುಖ ಯೋಜನೆಗಳು ಮತ್ತು ದೇಶದ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

  • 06 Oct 2026 08:12 AM (IST)

    ಪ್ರದೋಷ್ ವಿಚಾರಣೆ ಇಂದು ಮುಂದುವರಿಕೆ

    ನಟ ದರ್ಶನ್ & ಗ್ಯಾಂಗ್‌ನಿಂದ ನಡೆದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ ವಿಚಾರಣೆ ಬೆಂಗಳೂರಿನ 59ನೇ ಸಿ‌ಸಿ‌ಎಚ್ ಕೋರ್ಟ್‌ನಲ್ಲಿ ಇಂದು ಮುಂದುವರಿಯಲಿದೆ. ನಿನ್ನೆ ತಮ್ಮ ಬಂಧನದವರೆಗಿನ ಘಟನೆಗಳ ಬಗ್ಗೆ ಹೇಳಿಕೆ ದಾಖಲಿಸಿರುವ ಮಾಫಿ ಸಾಕ್ಷಿ ಪ್ರದೋಷ್ ರಾವ್ ವಿಚಾರಣೆ ಇಂದು ನಡೆಯಲಿದೆ.

  • 06 Oct 2026 08:12 AM (IST)

    ಏಷ್ಯನ್ ಗೇಮ್ಸ್ ವಿಜೇತರಿಗೆ ಇಂದು ರಾಜ್ಯ ಸರ್ಕಾರದಿಂದ ನಗದು ಬಹುಮಾನ ಪ್ರಕಟ

    ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ರಾಜ್ಯದ ಕ್ರೀಡಾಪಟುಗಳಿಗೆ ಇಂದು ನಗದು ಬಹುಮಾನ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬಹುಮಾನ ಮೊತ್ತವನ್ನು ಪ್ರಕಟಿಸುವುದಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

  • 06 Oct 2026 08:11 AM (IST)

    ಚನ್ನಪಟ್ಟಣ ಆಸ್ಪತ್ರೆಗೆ ಸಚಿವ ಯು.ಟಿ.ಖಾದರ್ ದಿಢೀರ್ ಭೇಟಿ: ವೈದ್ಯರಿಗೆ ತರಾಟೆ!

    ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಐಸಿಯು, ಶೌಚಾಲಯ ಹಾಗೂ ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು. “ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ರೋಗಿಗಳಿಗೆ ಹೊರಗಿನಿಂದ ಔಷಧಿ ಬರೆದುಕೊಡುವುದೇಕೆ?” ಎಂದು ಸಚಿವರು ಸ್ಥಳದಲ್ಲಿದ್ದ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

  • 06 Oct 2026 08:11 AM (IST)

    ಮಳೆಯ ನಡುವೆಯೂ ನಟ ಧ್ರುವ ಸರ್ಜಾ ಹುಟ್ಟುಹಬ್ಬ ಸಂಭ್ರಮ

    ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಬೆಂಗಳೂರಿನ ಕೆ.ಆರ್.ರಸ್ತೆಯ ಅವರ ನಿವಾಸದ ಬಳಿ ಸಾವಿರಾರು ಅಭಿಮಾನಿಗಳು ನೆರೆದಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೂ ಕೇಕ್ ಕತ್ತರಿಸಿ ಸಂಭ್ರಮಿಸಿದ ಧ್ರುವ, ಮಳೆಯ ಕಾರಣ ಬೆಳಿಗ್ಗೆ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.

  • 06 Oct 2026 07:38 AM (IST)

    ನೈಜೀರಿಯಾದಲ್ಲಿ ಸೇನಾ ವಿಮಾನ ಪತನ: 32 ಮಂದಿ ಸಾವು

    ನೈಜೀರಿಯಾದ ಒಂಡೋ ರಾಜ್ಯದ ಇಗ್ಬೊಕೊಡಾ ಬಳಿ ಸೇನಾ ವಿಮಾನ ಪತನಗೊಂಡು 25 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಸೇರಿ 32 ಮಂದಿ ಮೃತಪಟ್ಟಿದ್ದಾರೆ. ಘಟನೆಗೆ ತನಿಖೆಗೆ ಆದೇಶಿಸಿರುವ ಅಧ್ಯಕ್ಷ ಬೋಲಾ ಟಿನುಬು, ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ. ಮತ್ತಷ್ಟು ಓದಿ

Breaking News Today Live in Kannada: ಬೆಂಗಳೂರಿನ ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಮಲ್ಲೇಶ್ವರಂ ಮತ್ತು ಶಾಂತಿನಗರ ಸೇರಿದಂತೆ ಹಲವೆಡೆ ಎಡೆಬಿಡದೆ ಭಾರಿ ಮಳೆ ಸುರಿಯುತ್ತಿದ್ದು, ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯುತ್ತಿದೆ. ಇನ್ನೊಂದೆಡೆ, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ನಂದಿನಿ ಹಾಲಿನ ದರ ಲೀಟರ್‌ಗೆ 8 ರಿಂದ 12 ರೂ. ಏರಿಕೆ ಹಾಗೂ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಪ್ರಮುಖ ಚರ್ಚೆ ಸಾಧ್ಯತೆಯಿದೆ. ಜೊತೆಗೆ, ಸೋಲಾರ್ ಅಳವಡಿಕೆಗೆ ಶೇ 50 ಸಬ್ಸಿಡಿ ಮತ್ತು ಏಷ್ಯನ್ ಗೇಮ್ಸ್ ವಿಜೇತರಿಗೆ ಬಹುಮಾನ ಘೋಷಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ. ಮತ್ತೊಂದೆಡೆ, ಲಂಡನ್‌ನಿಂದ ಚಿಕಾಗೋಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನ (BA295) ತಾಂತ್ರಿಕ ದೋಷದಿಂದಾಗಿ 9,000 ಅಡಿ ದಿಢೀರ್ ಕುಸಿದಿದ್ದು, ಪೈಲಟ್‌ಗಳ ಸಮಯಪ್ರಜ್ಞೆಯಿಂದ ಲಂಡನ್‌ನಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

Published On - 7:38 am, Tue, 6 October 26

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us