AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Exclusive: ಕೋಟಿ ಕೋಟಿ ಮೌಲ್ಯದ ಪ್ರಾಜೆಕ್ಟ್ ಮೇಲೆ ಘಟಾನುಘಟಿಗಳ ಕಣ್ಣು; ಆಪ್ತರಿಗೆ ಟೆಂಡರ್​ ಕೊಡಿಸಲು ಮಹಿಳಾ IPS ಅಧಿಕಾರಿ ಹೆಸರು ದುರ್ಬಳಕೆ?

ರಾಜ್ಯದ ಅತಿದೊಡ್ಡ ಸ್ಫೋಟಕ ಸುದ್ದಿಯಾಗಿರುವ ಇದರಲ್ಲಿ ಸರ್ಕಾರದ ಬಿಗ್ ಪ್ರಾಜೆಕ್ಟ್ ಒಂದರ ಟೆಂಡರ್ ಪಡೆಯಲು IAS ಮತ್ತು IPS ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಾರಿ ಲಾಬಿ ನಡೆಸುತ್ತಿರುವ ಬಗ್ಗೆ ಟಿವಿ9ಮಾಹಿತಿ ಬಿಚ್ಚಿಟ್ಟಿದೆ.

TV9 Exclusive: ಕೋಟಿ ಕೋಟಿ ಮೌಲ್ಯದ ಪ್ರಾಜೆಕ್ಟ್ ಮೇಲೆ ಘಟಾನುಘಟಿಗಳ ಕಣ್ಣು; ಆಪ್ತರಿಗೆ ಟೆಂಡರ್​ ಕೊಡಿಸಲು ಮಹಿಳಾ IPS ಅಧಿಕಾರಿ ಹೆಸರು ದುರ್ಬಳಕೆ?
ವಿಧಾನ ಸೌಧ
KUSHAL V
| Edited By: |

Updated on:Dec 25, 2020 | 4:59 PM

Share

ಬೆಂಗಳೂರು: ಕೊರೊನಾ ಕಾಲದ ಮಧ್ಯೆ ಬಹುದೊಡ್ಡ ಪ್ರಾಜೆಕ್ಟ್​ನ ನೂರಾರು ಕೋಟಿಯ ಕಳ್ಳಾಟದ ಸ್ಟೋರಿಯನ್ನು ಟಿವಿ9 ಬಯಲು ಮಾಡಿದೆ. ರಾಜ್ಯದ ಅತಿದೊಡ್ಡ ಸ್ಫೋಟಕ ಸುದ್ದಿಯಾಗಿರುವ ಇದರಲ್ಲಿ ಸರ್ಕಾರದ ಬಿಗ್ ಪ್ರಾಜೆಕ್ಟ್ ಒಂದರ ಟೆಂಡರ್ ಪಡೆಯಲು IAS ಮತ್ತು IPS ಅಧಿಕಾರಿಗಳು ಹಾಗೂ ರಾಜಕಾರಣಿಗಳು ಭಾರಿ ಲಾಬಿ ನಡೆಸುತ್ತಿರುವ ಬಗ್ಗೆ ಟಿವಿ9ಮಾಹಿತಿ ಬಿಚ್ಚಿಟ್ಟಿದೆ.

ಹೌದು, ರಾಜ್ಯ ಸರ್ಕಾರದ ಬಿಗ್ ಪ್ರಾಜೆಕ್ಟ್ ಒಂದರ ಟೆಂಡರ್ ಪಡೆಯಲು ತೆರೆಮರೆಯಲ್ಲಿ ಭಾರಿ ಲಾಬಿ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಒಟ್ಟು 600 ಕೋಟಿ ಮೌಲ್ಯದ ಈ ಪ್ರಾಜೆಕ್ಟ್​ನ ಟೆಂಡರ್ ಪಡೆಯಲು ಇನ್ನಿಲ್ಲದ ಕಸರತ್ತು ಸಹ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಇದೀಗ, ಈ ಟೆಂಡರ್ ಪಡೆಯಲು ನಡೆಸಲಾಗುತ್ತಿರುವ ಕಸರತ್ತಿನ ಎಕ್ಸ್​ಕ್ಲೂಸಿವ್ ಡಿಟೇಲ್ಸ್ ಟಿವಿ9 ಬಯಲು ಮಾಡಿದೆ.

ನೂರಲ್ಲ, ಇನ್ನೂರಲ್ಲ.. ಬರೋಬ್ಬರಿ 610 ಕೋಟಿಯ ಬಿಗ್ ಬಜೆಟ್ ಪ್ರಾಜೆಕ್ಟ್! ಅಂದ ಹಾಗೆ, ಇದು ನೂರಲ್ಲ, ಇನ್ನೂರಲ್ಲ.. 610ಕೋಟಿ ಮೌಲ್ಯದ ಬಿಗ್ ಬಜೆಟ್ ಪ್ರಾಜೆಕ್ಟ್. ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ರೂಪಿಸಲಾಗಿರುವ ಈ ಯೋಜನೆ ಮೇಲೆ ಇದೀಗ ರಾಜ್ಯದ ಅತಿರಥರ ಕಣ್ಣು ಬಿದ್ದಿದೆ ಎಂದು ಹೇಳಲಾಗಿದೆ. ಬೈ ದಿ ಬೈ, ರಾಜ್ಯದ ಘಟಾನುಘಟಿಗಳ ಕಣ್ಣು ಬಿದ್ದಿರುವುದು ನಿರ್ಭಯಾ ಫಂಡ್​ನಡಿಯಲ್ಲಿ ರೂಪಿಸಲಾಗಿರುವ 610 ಕೋಟಿ ಮೌಲ್ಯದ ಈ ಪ್ರಾಜೆಕ್ಟ್​ ಮೇಲೆ. ಈ ಯೋಜನೆಯ ಟೆಂಡರ್​ನ ತಮ್ಮ ಆಪ್ತರ ಕಂಪನಿಗಳಿಗೆ ಕೊಡಿಸಲೇಬೇಕೆಂದು ಕೆಲ ಪ್ರಭಾವಿಗಳು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರಂತೆ. ಹಾಗಾಗಿ, ಮೊದಲ ಬಿಡ್​ ವೇಳೆ ಆಸಕ್ತಿ ತೋರದ ಕಂಪನಿಗಳು ಎರಡನೇ ಬಿಡ್​ನಲ್ಲಿ ಟೆಂಡರ್​ ಪಡೆಯಲು ಮುಗಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.

ಬಹುಕೋಟಿ ಪ್ರಾಜೆಕ್ಟ್​ನ ವಿವರ ಇಲ್ಲಿದೆ ಸಿಲಿಕಾನ್​ ಸಿಟಿಯಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ 7,500 ಹೈ ಡೆಫಿನಿಷನ್ ಸಿಸಿಟಿವಿಗಳ ಅಳವಡಿಕೆ ಮತ್ತು ಅವುಗಳ ನಿರ್ವಹಣೆಗೆ ಕಮಾಂಡ್ ಸೆಂಟರ್​ ಒಂದರ ರಚನೆಗೆ ಈ ಯೋಜನೆ ರೂಪಿಸಲಾಗಿದೆ. ಒಂದೇ ಜಾಗದಲ್ಲಿ ಕುಳಿತು ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ವ್ಯವಸ್ಥೆ ಕಲ್ಪಿಸಲು ಸುಸಜ್ಜಿತ ಟೆಕ್ನಿಕಲ್ ಇಕ್ವಿಪ್​ಮೆಂಟ್ಸ್ , ಎಕ್ಸ್​ಪರ್ಟ್ ಕ್ವಿಕ್ ರೆಸ್ಪಾನ್ಸ್ ಟೀಂ ಹಾಗೂ ಕಾಲ್ ಸೆಂಟರ್ ಕಂಟ್ರೋಲ್ ವ್ಯವಸ್ಥೆ ಸೇರಿ ವಿವಿಧ ವ್ಯವಸ್ಥೆಗಳನ್ನು ನಿರ್ಮಿಸುವ ಗುರಿಯಲ್ಲಿ ಈ ಪ್ರಾಜೆಕ್ಟ್​ನ ರೂಪಿಸಲಾಗಿದ್ದು ಇದಕ್ಕಾಗಿ ಟೆಂಡರ್​ ಕರೆಯಲಾಗಿದೆ.

ಈ ನಡುವೆ, ಪ್ರಾಜೆಕ್ಟ್​ನ ಮೊದಲ ಬಿಡ್​ ವೇಳೆ ಆಸಕ್ತಿ ತೋರದ ಕಂಪನಿಗಳು ಎರಡನೇ ಬಿಡ್​ನಲ್ಲಿ ಟೆಂಡರ್​ ಪಡೆಯಲು ಮುಗಿಬಿದ್ದಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ, ಎರಡನೇ ಬಾರಿ ಲಾಬಿ ಶುರುವಾಗಿದ್ದು ಚೈನಾದ ಕೆಲ ಕಂಪನಿಗಳೊಂದಿಗೆ ಟೈ ಅಪ್ ಮಾಡ್ಕೊಂಡಿದ್ದ 3 ಕಂಪೆನಿಗಳು ಫೈನಲ್​ ಆಗಿದ್ದವು ಎಂದು ಹೇಳಲಾಗಿದೆ. ಆದರೆ, ಇತ್ತ, ಕೇಂದ್ರ ಸರ್ಕಾರ ಚೈನಾ ಮೂಲದ ವಸ್ತುಗಳನ್ನು ನಿಷೇಧಿಸಿದ ಬೆನ್ನಲೇ 3 ಕಂಪೆನಿಗಳ ಪ್ರೋಸೆಸ್ ಮೇಲೆ ಬೆಳಕು ಬಿದ್ದಿದೆ.

ಟೆಂಡರ್​ ಪಡೆಯಲು ಮಹಿಳಾ IPS ಅಧಿಕಾರಿ ಹೆಸರು ದುರ್ಬಳಕೆ? ಇದೀಗ, ಈ ಟೆಂಡರ್​ನ ಶತಾಯಗತಾಯ ಪಡೆಯಲು ಕೆಲ IPS ಅಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲಿ, ಹಿರಿಯ ಮಹಿಳಾ IPS ಅಧಿಕಾರಿಯಾದ ಡಿ.ರೂಪಾ ಅವರ ಹೆಸರನ್ನು ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಸಹ ಕೇಳಿಬಂದಿದೆ.

ಡಿ.ರೂಪಾ ಅವರ ಹೆಸರೇಳಿಕೊಂಡು ಮಹಿಳೆಯೊಬ್ಬರು ಕಾಲ್​ ಮಾಡಿ ಶಕ್ತಿ ಸೌಧದ 3ನೇ ಮಹಡಿಯಿಂದ ಕಾಲ್ ಮಾಡ್ತಿರೋದಾಗಿ ಹೇಳಿ ಕಂಪನಿಗೆ ಧಮ್ಕಿ ಹಾಕಿದ್ದಾರೆ ಎಂದು ಹೇಳಲಾಗಿದೆ. ಕಮಿಟಿಗೆ ಯೋಜನೆಯ ಇನ್ಪುಟ್ ಡ್ರಾಫ್ಟ್ ಕೊಡೋ ಮುನ್ನ ಹೋಂ ಸೆಕ್ರೆಟರಿಗೆ ನೀಡಬೇಕೆಂದು ತಾಕೀತು ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಅಂದ ಹಾಗೆ, ಈ ಯೋಜನೆಗೆ ಬಿಡ್ ಕರೆಯೋ ಮುನ್ನ ರಾಜ್ಯ ಮುಖ್ಯ ಕಾರ್ಯದರ್ಶಿ ನೇತೃತ್ವದ ಸ್ಟೇಟ್ ಅಪೆಕ್ಸ್ ಕಮಿಟಿ ಟ್ಟೆಕ್ನಿಕಲ್ ಕನ್ಸಲ್ಟೆಂಟ್ ಮೊರೆ ಹೋಗಿದ್ದರು ಎಂದು ಹೇಳಲಾಗಿದೆ. ಮುಂಬೈ ಮೂಲದ E & Y ಪ್ರಾಜೆಕ್ಟ್ ಮ್ಯಾನೇಜ್​ಮೆಂಟ್ ಕನ್ಸಲ್ಟೆಂಟ್ ಕಂಪನಿಗೆ ಡ್ರಾಫ್ಟ್​ ತಯಾರಿಸಲು ಕಮಿಟಿ ಸೂಚಿಸಿತ್ತು ಎಂದು ಹೇಳಲಾಗಿದೆ. ಕಂಪನಿಗೆ ಮಹಿಳಾ ಮತ್ತು ಮಕ್ಕಳ ಸುರಕ್ಷತಾ ಪ್ರಾಜೆಕ್ಟ್​ನ ಇನ್ಪುಟ್ ಡ್ರಾಫ್ಟ್ ನೀಡುವಂತೆ ಕಮಿಟಿ ಸೂಚಿಸಿತ್ತು ಎಂದು ಹೇಳಲಾಗಿದೆ.

ಈ ನಡುವೆ, ಡಿ.ರೂಪಾ ಅವರ ಹೆಸರು ದುರ್ಬಳಕೆ ಮಾಡಿ ಮಹಿಳೆಯೊಬ್ಬರು ಶಕ್ತಿ ಸೌಧದ 3ನೇ ಮಹಡಿಯಿಂದ ಕಾಲ್ ಮಾಡ್ತಿರೋದಾಗಿ ಹೇಳಿ ಕಂಪನಿಗೆ ಧಮ್ಕಿ ಹಾಕಿದ್ದಾರಂತೆ. ವಿಧಾನಸೌಧದ ಹೋಂ ಸೆಕ್ರೆಟರಿ ಕಚೇರಿಯ ಅಧಿಕಾರಿ ಎಂದು ಹೇಳಿ ಡಿ.ರೂಪಾ ಅವರ ಹೆಸರು ದುರ್ಬಳಕೆ ಮಾಡಿ ಕರೆ ಮಾಡಿದ ಮಹಿಳೆ ಕಮಿಟಿಗೂ ಮೊದಲೇ ಟೆಕ್ನಿಕಲ್ ಡ್ರಾಫ್ಟ್​ನ ತಮಗೆ ನೀಡಬೇಕೆಂದು ಧಮ್ಕಿ ಹಾಕಿದ್ದಾರಂತೆ.

ಕಂಪನಿಯಿಂದ ಸ್ಟೇಟ್ ಅಪೆಕ್ಸ್ ಕಮಿಟಿಗೆ ಇ-ಮೇಲ್ ಮಹಿಳಾ ಅಧಿಕಾರಿ ಕರೆ ಕೇಳಿ ಕಂಗಾಲಾದ ಕನ್ಸಲ್ಟೆಂಟ್ ಕಂಪನಿ ಸಿಬ್ಬಂದಿ ಆಕೆ ಧಮ್ಕಿ ಹಾಕಿದ್ರಿಂದ ಆತಂಕಗೊಂಡು ಸ್ಟೇಟ್ ಅಪೆಕ್ಸ್ ಕಮಿಟಿಗೆ ಇ-ಮೇಲ್ ಮಾಡಿ ವಿವರಣೆ ಪಡೆಯೋಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಧಮ್ಕಿ ಬಗ್ಗೆ ಸ್ಟೇಟ್ ಅಪೆಕ್ಸ್ ಕಮಿಟಿಗೆ ಕಂಪನಿ ಅಧಿಕಾರಿಗಳಿಂದ ವಿವರಣೆಗೆ ಮನವಿ ಮಾಡಿದ್ದಾರಂತೆ.

ಹಾಗಾಗಿ, ಈ ಕುರಿತು IPS ಅಧಿಕಾರಿ ಹೇಮಂತ್ ನಿಂಬಾಳ್ಕರ್​ ತನಿಖೆ ನಡೆಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಪತ್ರ ಬರೆದು ಫೋನ್ ಕಾಲ್ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದ್ದಾರಂತೆ.

ಸದ್ಯ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಬಿಗ್​ ಪ್ರಾಜೆಕ್ಟ್ ಟೆಕ್ನಿಕಲ್ ಇನ್​ಪುಟ್​ಗಾಗಿ ಕಂಪನಿಗೆ ಕರೆ ಮಾಡಿದ್ಯಾರು? ವಿಧಾನಸೌಧದಿಂದಲೇ ಮುಂಬೈ ಕಂಪನಿಗೆ ಕರೆ ಮಾಡಿ ಟೆಕ್ನಿಕಲ್ ಇನ್ಪುಟ್ ಕೇಳಿದ್ದೇಕೆ? ಅಸಲಿಗೆ ಹೋಂ ಸೆಕ್ರೆಟರಿ ಡಿ.ರೂಪಾ ಎಂದು ಪರಿಚಯಿಸಿಕೊಂಡು ಇನ್ಪುಟ್ ಕೇಳಿ ಧಮ್ಕಿ ಹಾಕಿದ ಆ ಮಹಿಳೆ ಯಾರು? ಜೊತೆಗೆ, ಈ ಯೋಜನೆ ಟೆಂಡರ್​ಗಾಗಿ ನಡೆಯುತ್ತಿರುವ ಲಾಬಿ ಹಿಂದಿದ್ಯಾ ಕಾಣದ ಕೈಗಳ ಕೈವಾಡ? ಕರೆ ಮಾಡಿದ್ದು ಯಾರು? ಏಕೆ? ಅದರ ಹಿಂದಿನ ಉದ್ದೇಶವೇನು? ಎಂಬ ಎಲ್ಲಾ ಪ್ರಮುಖ ಪ್ರಶ್ನೆಗಳಿಗೆ ತನಿಖೆ ನಡೆಸಲು ಮುಂದಾಗಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಸದ್ಯ, ತನಿಖೆಯ ಚೆಂಡು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅಂಗಳ ತಲುಪಿದ್ದು ಇದೀಗ ಯಾಱರಿಗೆ ಬಿಸಿ ತಟ್ಟಲಿದೆ ಅನ್ನೋದೆ ಸದ್ಯದ ಕುತೂಹಲ.

ಈ ನಡುವೆ, ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈ ವಿಚಾರದಿಂದ ಟೆಂಡರ್​ಗೆ ಎಫೆಕ್ಟ್ ಆಗಲ್ಲ. ನಿರ್ಭಯಾ ಫಂಡ್​ಗೆ ಇನ್ನು ಯಾವುದೇ ಬಿಡ್ ಬಂದಿಲ್ಲ. ಜನವರಿ 8 ನೇ ತಾರೀಖಿನವರೆಗೂ ಬಿಡಿಂಗ್​ಗೆ ಅವಕಾಶ ಇದೆ. ಈ ನಡುವೆ, ಟೆಂಡರ್ ಕಂಡಿಷನ್ ಬಗ್ಗೆ ಮಾಹಿತಿ ಕೇಳಿದ್ದಾರೆ ಅನ್ನೋ ವಿಚಾರ ಇದೆ. ಟೆಂಡರ್ ಮಾಹಿತಿ ಪಡೆಯೋಕೆ ಮುಂದಾಗಿದ್ದಾರೆ. ಆದರೆ, ಟೆಂಡರ್​ನಲ್ಲಿ ಯಾರೂ ಕೂಡ ಹಸ್ತಕ್ಷೇಪ ಮಾಡೋಕೆ ಆಗಲ್ಲ. ಇದರಿಂದ ಟೆಂಡರ್ ಗೆ ಎಫೆಕ್ಟ್ ಕೂಡ ಆಗಿಲ್ಲ. ಕರೆ ಬಂದಿದೆ ಅಂತಾ ಅಧಿಕಾರಿಗೆ ಮೇಲ್ ಹಾಕಿದ್ದಾರೆ. ಟೆಂಡರ್ ಶುರುವಾಗಿರದ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂದು ಕಮಲ್ ಪಂತ್​ ಹೇಳಿದ್ದಾರೆ.

ನಿರ್ಭಯಾ ನಿಧಿ ಮಹಿಳಾ ಸುರಕ್ಷತಾ ಯೋಜನೆ: ಗೃಹ ಕಾರ್ಯದರ್ಶಿ ರೂಪಾ ಅವರಿಂದ ದಾಖಲೆ ಬಿಡುಗಡೆ, ವಿವಾದಕ್ಕೆ ಹೊಸ ಆಯಾಮ

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅತಿದೊಡ್ಡ ಭೂ ಹಗರಣ? 11 ಭ್ರಷ್ಟ ಅಧಿಕಾರಿಗಳಿಗೆ ನೋಟಿಸ್

Published On - 12:55 pm, Fri, 25 December 20