ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಅತ್ತೆಯನ್ನೇ ಬೆಂಕಿ ಹಚ್ಚಿ ಕೊಂದ ಸೊಸೆ, ಇಬ್ಬರು ಅರೆಸ್ಟ್
ಸುಧಾಮಣಿ, 35 ವರ್ಷ ವಯಸ್ಸಿನ ಶ್ರೀ ರಂಗಪ್ಪ ಎಂಬುವವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಅತ್ತೆ ಸರೋಜಮ್ಮ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸೊಸೆ ಮತ್ತು ಅತ್ತೆ ಜೊತೆ ಜಗಳವಾಗಿದೆ...
ತುಮಕೂರು: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಅತ್ತೆಯನ್ನು ಸೊಸೆ ಕೊಲೆ ಮಾಡಿದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಉಜ್ಜನಕುಂಟೆ ಗ್ರಾಮದಲ್ಲಿ ನಡೆದಿದೆ. ಅತ್ತೆಯನ್ನೇ ಕೊಂದ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ. ಸುಧಾಮಣಿ(28) ಬಂಧಿತ ಸೊಸೆ. ಕಳೆದ ಜೂನ್ 14 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸುಧಾಮಣಿ, 35 ವರ್ಷ ವಯಸ್ಸಿನ ಶ್ರೀ ರಂಗಪ್ಪ ಎಂಬುವವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಅತ್ತೆ ಸರೋಜಮ್ಮ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಸೊಸೆ ಮತ್ತು ಅತ್ತೆ ಜೊತೆ ಜಗಳವಾಗಿದೆ. ಹೀಗಾಗಿ ಕೋಪಗೊಂಡ ಸೊಸೆ ಸುಧಾಮಣಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಬಳಿಕ ಅನುಮಾನ ಬಂದು ಪೊಲೀಸರು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮೂಡ್ಲಹಟ್ಟಿ ಗ್ರಾಮದಲ್ಲಿ ಶ್ರೀ ರಂಗಪ್ಪ ಎಳನೀರು ವ್ಯಾಪಾರ ಮಾಡಿಕೊಂಡಿದ್ದ. ಸದ್ಯ ಇವನ ಜೊತೆ ಸುಧಾಮಣಿಗೆ ಅಕ್ರಮ ಸಂಬಂಧ ಇತ್ತು. ಈಗ ಇಬ್ಬರನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೊಟ್ಟೆ ಸರಬರಾಜಿನಲ್ಲೂ ಭಾರಿ ಗೋಲ್ಮಾಲ್.. ಕಡಿಮೆ ತೂಕದ ಕಳಪೆ ಮೊಟ್ಟೆ ನೀಡಿ ಹಣ ಲೂಟಿ