ಸ್ಲೋ ಪಾಯಿಸನ್ ನೀಡಿ ಗಂಡನ ಹತ್ಯೆ: ಹೆಂಡ್ತಿಯ ಸ್ಫೋಟಕ ಆಡಿಯೋ ಇಲ್ಲಿದೆ

ಪ್ರಿಯಕರ ಅದೇನು ಮೂಡಿ ಮಾಡಿದ್ನೋ ಗೊತ್ತಿಲ್ಲ. ಕೈ ಹಿಡಿದ ಗಂಡನಿಗೆ ಸ್ಲೋ ಪಾಯಿಸನ್ ನೀಡಿ ಪತ್ನಿ ಕೊಲೆ ಮಾಡಿರುವಂತಹ ದಾರುಣ ಘಟನೆಯೊಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಅಜೆಕಾರಿನಲ್ಲಿ ನಡೆದಿದೆ. ಸದ್ಯ ಪ್ರಿಯಕರ ಮತ್ತು ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಗಂಡನ ಹತ್ಯೆಯನ್ನು ಸಹೋದರನ ಬಳಿ ಪತ್ನಿ ಒಪ್ಪಿಕೊಂಡಿದ್ದು, ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.

ಸ್ಲೋ ಪಾಯಿಸನ್ ನೀಡಿ ಗಂಡನ ಹತ್ಯೆ: ಹೆಂಡ್ತಿಯ ಸ್ಫೋಟಕ ಆಡಿಯೋ ಇಲ್ಲಿದೆ
ಸ್ಲೋ ಪಾಯಿಸನ್ ನೀಡಿ ಗಂಡನ ಹತ್ಯೆ: ಹೆಂಡ್ತಿಯ ಸ್ಫೋಟಕ ಆಡಿಯೋ ಇಲ್ಲಿದೆ
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಗಂಗಾಧರ​ ಬ. ಸಾಬೋಜಿ

Updated on:Oct 25, 2024 | 7:59 PM

ಉಡುಪಿ, ಅಕ್ಟೋಬರ್​​​ 25: ಪ್ರಿಯಕರನ ಜೊತೆ ಸೇರಿ ಪತಿಗೆ ಸ್ಲೋ ಪಾಯಿಸನ್​ ನೀಡಿ ಪತ್ನಿ ಕೊಲೆ (kill) ಮಾಡಿರುವಂತಹ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ನಡೆದಿದೆ. ಬಾಲಕೃಷ್ಣ(44) ಹತ್ಯೆಗೊಳಗಾದ ಗಂಡ. ಸದ್ಯ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ದಿಲೀಪ್ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಜೆಕಾರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದುವರೆ ತಿಂಗಳಿಂದ ಸ್ಲೋ ಪಾಯಿಸನ್ ನೀಡಿ ಕೊಲೆ

ಸಾವಿನಗೂ ಮುನ್ನ ಕಳೆದ 25 ದಿನದಿಂದ ಜ್ವರ, ವಾಂತಿಯಿಂದ ಬಾಲಕೃಷ್ಣ ಬಳಲುತ್ತಿದ್ದರು. ಕೆಎಂಸಿ, ನಿಮ್ಹಾನ್ಸ್ ಹಾಗೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದ ಹಿನ್ನೆಲೆ ಬಾಲಕೃಷ್ಣನನ್ನು ಮನೆಗೆ ಕರೆತರಲಾಗಿತ್ತು. ಅಕ್ಟೋಬರ್ 20ರ ತಡರಾತ್ರಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಕತ್ತು ಸೀಳಿ ಸ್ನೇಹಿತನನ್ನೇ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ

ಬಾಲಕೃಷ್ಣ ಅನಾರೋಗ್ಯ ಬಗ್ಗೆ ಮನೆಯವರಿಗೆ ಸಂಶಯ ಮೂಡಿತ್ತು. ಹೀಗಾಗಿ ಮೃತ ಬಾಲಕೃಷ್ಣ ಸಹೋದರ ರಾಮಕೃಷ್ಣರಿಂದ ದೂರು ದಾಖಲಿಸಿದ್ದರು. ಇದಾಗಿ ಮರಣೋತ್ತರ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದ್ದ ದಿನ ತನ್ನ ಸಹೋದರನ ಬಳಿ ಪ್ರತಿಮಾ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾಳೆ. ಪ್ರಿಯಕರ ದಿಲೀಪ್ ಜೊತೆ ಸೇರಿ ಒಂದುವರೆ ತಿಂಗಳಿಂದ ಸ್ಲೋ ಪಾಯಿಸನ್ ನೀಡಿದ್ದು, ಉಸಿರುಗಟ್ಟಿಸಿ ಸಾಯಿಸಿದ್ದನ್ನು ಒಪ್ಪಿಕೊಂಡಿದ್ದಾಳೆ.

ಸದ್ಯ ಸಹೋದರ ಸಂದೀಪ್ ಮತ್ತು ಪ್ರತಿಮಾ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಇದನ್ನು ಪೊಲೀಸರು ಕೂಡ ಇದು ಅವರದ್ದೇ ಆಡಿಯೋ ಎಂದು ಅಧಿಕೃತ ಪಡಿಸಿಲ್ಲ.

ವೈರಲ್ ಆದ ಆಡಿಯೋದಲ್ಲಿ ಏನಿದೆ?

ಸಂದೀಪ್- ಹೌದಾ.. ಅವರು ರಾತ್ರಿ ಬಂದದ್ದು ಹೌದಾ?

ಪ್ರತಿಮಾ- ಬಾಗಿಲು ಹಾಕು ನಾನು ಸಾಯುತ್ತೇನೆ ನನಗೆ ಆಗುವುದಿಲ್ಲ.

ಸಂದೀಪ್- ನೀನು ಸಾಯಿ ನನಗೆ ಬೇಜಾರಿಲ್ಲ ಯಾಕಂದ್ರೆ ನನಗೆ ನನ್ನ ದೇವರೇ ಹೋದರು ಆದರೆ ನೀನು ಅವನನ್ನು ಯಾಕೆ ಕರೆದದ್ದು?

ಪ್ರತಿಮಾ- ನನ್ನದು ತಪ್ಪಾಯ್ತು ನಿಧಾನ ಮಾತನಾಡು.

ಸಂದೀಪ್- ಜೀವನೇ ಹೋಯಿತಲ್ಲ ಅಂತಹ ದೇವರನ್ನ ಯಾಕೆ ಕೊಂದದ್ದು? ನಿನಗೆ ಅವರು ಏನು ಕಷ್ಟ ಕೊಟ್ಟಿದ್ದಾರೆ. ಅವರಿಗೆ ಯಾವುದಾದರೂ ಒಂದು ಹೆಣ್ಣಿನ ಜೊತೆ ಸಂಪರ್ಕ ಇತ್ತಾ? ಮೇಲೆ ಹೋದವರಿಗೊಂದು ನ್ಯಾಯ ಸಿಗಬೇಕಲ್ಲ.

ಪ್ರತಿಮಾ- ನಾನು ಸಾಯುತ್ತೇನೆ ನಾನು ಸಾಯುತ್ತೇನೆ.

ಸಂದೀಪ್- ಕೊಂದದ್ದು ಯಾಕೆ ಹೇಳು?

ಪ್ರತಿಮಾ- ನನ್ನದು ತಪ್ಪಾಯಿತಣ್ಣ.

ಸಂದೀಪ್- ನಾನು ಮನೆಯಿಂದ ಹೋದ ಮೇಲೆ ಅವನನ್ನು ಕರೆಸಿದ್ದಾ? ನಿಜ ಹೇಳು ನಿನಗೆ ಆಗುವ ಶಿಕ್ಷೆ ಕಡಿಮೆ ಮಾಡಿಸುತ್ತೇನೆ. ನಿನ್ನ ಇನ್ನೊಂದು ಮೊಬೈಲ್ ಇದೆಯಲ್ಲ ಎಲ್ಲಿದೆ?

ಪ್ರತಿಮಾ- ನಾನು ಫೋನ್ ಮಾಡಿ ಕರೆಸಿದೆ.

ಸಂದೀಪ್- ಅವನ ಬಳಿ ಹಣ ಇದೆ ಎಂದು ನೀನು ಗಂಡನನ್ನು ಕೊಲ್ಲಿಸಿದೆಯಾ? ಐದಾರು ತಿಂಗಳಿಂದ ನಿಮ್ಮ ನಡುವಿನ ಸಂಬಂಧ ನನಗೆ ಗೊತ್ತಿದೆ.

ಪ್ರತಿಮಾ- ತಪ್ಪಾಯ್ತು ನನ್ನನ್ನು ಕ್ಷಮಿಸು. ಅವರದ್ದು ಒಂದು ಕೆಲಸ ಆಗಲಿ ಆಮೇಲೆ ನಾನು ಸಾಯುತ್ತೇನೆ.

ಸಂದೀಪ್- ನೀನು ಸತ್ತರೂ ಬೇಸರ ಪಡುವುದಿಲ್ಲ. ನಿನ್ನ ಯಾವುದೇ ಮರಣೋತ್ತರದ ಕ್ರಿಯೆ ಕೆಲಸಗಳನ್ನು ಮಾಡುವುದಿಲ್ಲ. ನಿನ್ನ ಹೆಣವನ್ನು ನದಿಗೆ ಬಿಸಾಡುತ್ತೇನೆ. ದೇವರಂತ ಬಾವನನ್ನು ಕೊಂದೆಯಲ್ಲ. ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ. ಅದರ ತಲೆಬಿಸಿ ಬೇಡ. ಆ ಬೆವರ್ಸಿಯನ್ನು ಕರೆಸಿ ಕೊಲ್ಲಿಸಿದೆಯಲ್ಲ ನಾನು ನಿನಗೆ 18 ವರ್ಷದಲ್ಲಿ ಮದುವೆ ಮಾಡಿಸಿದ್ದೇನೆ. ನಾನು ಜವಾಬ್ದಾರಿ ನಿರ್ವಹಿಸಿದ್ದೇನೆ.

ಪ್ರತಿಮಾ- ಹೊರಗೆ ಎಲ್ಲರಿಗೆ ಕೇಳಿಸುತ್ತಿದೆ ಮೆಲ್ಲ ಮಾತನಾಡು

ಸಂದೀಪ್- ಇಡೀ ಊರಿಗೆ ಗೊತ್ತಾಗಿ ಆಗಿದೆ ಮನೆಯವರಿಗೆ ಗೊತ್ತಾದರೆ ಏನು? ಹಿಂದೆ ಒಮ್ಮೆ ಕೇಸಾದಾಗ ನಾನು ಎಲ್ಲವೂ ಸರಿ ಮಾಡಿದ್ದೆ. ಆ ಮೇಲೆ ನೀವು ಸರಿಯಾಗಬೇಕಾಗಿತ್ತಲ್ಲ? ಅವನೊಬ್ಬನೇ ಬಂದದ್ದಾ? ಬೇರೆ ಯಾರಾದರು ಇದ್ರಾ? ಅಥವಾ ನೀನು ಒಬ್ಬಳೇ ಕೊಂದೆಯಾ?

ಪ್ರತಿಮಾ- ಒಬ್ಬನೇ ಬಂದದ್ದು.

ಸಂದೀಪ್- ನಿನಗೆ ಶಿಕ್ಷೆಯಾಗಬೇಕು. ಬಾವನಿಗೆ ಮೋಕ್ಷ ಸಿಗಬೇಕು. ಅವನ ಬಳಿ ದುಡ್ಡಿದೆ ಎಂದು ನೀನು ಹೋದದ್ದಲ್ವಾ? ನಿನಗೆ ಶಿಕ್ಷೆ ಆಗಬೇಕು. ಪೊಲೀಸನ್ನು ಕರೆಸಬೇಕಾ? ಬೇರೆ ಮೊಬೈಲ್ ಇದೆಯಾ? ನೀನು ಮಕ್ಕಳನ್ನೂ ಕೊಲ್ಲುತ್ತಿದ್ದೆ, ಅವರನ್ನು ಕರೆದುಕೊಂಡು ಹೋದದ್ದಕ್ಕೆ ಅವರು ಬಚಾವ್ ಆದರು. ಹಣದ ಹಿಂದೆ ಹೋದೆ.

ಪ್ರತಿಮಾ- ನಾನು ಡಿಸೈಡ್ ಮಾಡಿದ್ದೇನೆ ನಾನು ಸಾಯುತ್ತೇನೆ.

ಸಂದೀಪ್- ನಾನು ಮರ್ಯಾದೆ ಮರ್ಯಾದೆ ಅಂತ ಸೊರಗಿ ಹೋದೆ. ನಾನು ಮೂರು ತಿಂಗಳಿಂದ ಅನುಭವಿಸಿದ್ದೇನೆ.

ಬಾಲಕೃಷ್ಣ ಮತ್ತು ಪ್ರತಿಮಾ 17 ವರ್ಷದ ಹಿಂದೆ ಇಬ್ಬರಿಗೂ ಮದುವೆ ಆಗಿತ್ತು. ದಂಪತಿಗೆ ಎರಡು ಮಕ್ಕಳ್ಳಿದ್ದಾರೆ. 2020ರಲ್ಲಿ ಕೊರೋನಾ ಆವರಿಸಿಕೊಂಡ ನಂತರ ಕುಟುಂಬ ಮುಂಬೈನಿಂದ ಅಜೆಕಾರಿಗೆ ಶಿಫ್ಟ್ ಆಗಿತ್ತು. ಹೊಸ ಮನೆ ಕೂಡ ಕಟ್ಟಿಸಿದ್ದರು. ಅಜೆಕಾರು ಜಂಕ್ಷನ್​ನಲ್ಲಿ ಬ್ಯೂಟಿ ಪಾರ್ಲರ್ ಮಾಡಿಕೊಂಡಿದ್ದ ಪ್ರತಿಮಾ ಮತ್ತು ಕಾರ್ಕಳದಲ್ಲಿ ಬಿಸಿನೆಸ್ ಮ್ಯಾನ್ ಆಗಿರುವ ದಿಲೀಪ್ ಹೆಗ್ಡೆ ಪರಿಚಯ ಆಗಿದೆ. ಪರಿಚಯ ಪ್ರೀತಿಗೆ ತಿರುಗಿ ಬಹಳ ಸಮಯದಿಂದ ಇಬ್ಬರು ಜೊತೆಗೆ ಓಡಾಡಿಕೊಂಡಿದ್ದರು.

ಇದನ್ನೂ ಓದಿ: ಕರಿಮಣಿ ಮಾಲೀಕ ನೀನಲ್ಲ ಎಂದ ರೀಲ್ಸ್ ರಾಣಿ…ಲವರ್ ಜತೆ ಸೇರಿ ತಾಳಿ ಕಟ್ಟಿದವನನ್ನೇ ಕೊಂದಳು!

ಇತ್ತ ಕಾಲೇಜು ಕ್ಯಾಂಟೀನ್ ಮಾಡಿಕೊಂಡಿದ್ದ ಗಂಡನಿಗೆ, ಪ್ರತಿಮಾ ಸಂಬಂಧದ ಬಗ್ಗೆ ತಿಳಿದು ಜಗಳವಾಗಿದೆ. ಪೊಲೀಸ್ ಠಾಣೆಯವರೆಗೂ ಹೋಗಿ ಎರಡು ಕುಟುಂಬದ ಪಂಚಾಯಿತಿ ನಡೆಸಿ ಸುಸೂತ್ರವಾಗಿ ಸಂಸಾರವನ್ನು ನಡೆಸಿಕೊಂಡು ಹೋಗುವುದಾಗಿ ಮುಚ್ಚಳಿಕೆ ಬರೆಸಿಕೊಂಡಿದ್ದರು. ಇಷ್ಟಾದರೂ ಇವರಿಬ್ಬರ ಲವ್ವಿ-ಡವ್ವಿ ಮುಂದುವರೆದಿತ್ತು. ಇಬ್ಬರು ಕೂಡ ಕರಿಮಣಿ ಮಾಲೀಕ ನೀನಲ್ಲ ಎಂದು ರೀಲ್ಸ್ ಕೂಡ ಮಾಡಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:26 pm, Fri, 25 October 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ