ಕರಿಮಣಿ ಮಾಲೀಕ ನೀನಲ್ಲ ಎಂದ ರೀಲ್ಸ್ ರಾಣಿ…ಲವರ್ ಜತೆ ಸೇರಿ ತಾಳಿ ಕಟ್ಟಿದವನನ್ನೇ ಕೊಂದಳು!

ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯನ್ನು ತಲ್ಲಣಿಸಿದೆ. ಪ್ರಿಯಕರ ದಿಲೀಪ್ ಹೆಗ್ಡೆ ಮತ್ತು ಪ್ರತಿಮಾ, ಗಂಡ ಬಾಲಕೃಷ್ಣನಿಗೆ ಸ್ಲೋ ಪಾಯಿಸನ್ ನೀಡಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಇನ್ನು ಸಾಯಿಸುವ ಮೊದಲು ಪ್ರತಿಮಾ, ಪತಿಯ ಜೊತೆ ಹಲವಾರು ರೀಲ್ಸ್ ಮಾಡಿದ್ದಾಳೆ. ಅದರಲ್ಲೂ ಕರಿಮಣಿ ಮಾಲೀಕ ನೀನಲ್ಲ ಎಂಬ ರೀಲ್ಸ್ ಸಹ ಮಾಡಿದ್ದು, ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಂಡನನ್ನು ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಸಾಯಿಸಿದ್ದು ಮಾತ್ರ ಭಯಾನಕ.

ಕರಿಮಣಿ ಮಾಲೀಕ ನೀನಲ್ಲ ಎಂದ ರೀಲ್ಸ್ ರಾಣಿ...ಲವರ್ ಜತೆ ಸೇರಿ ತಾಳಿ ಕಟ್ಟಿದವನನ್ನೇ ಕೊಂದಳು!
ದಿಲೀಪ್ ಹೆಗ್ಡೆ(ಎಡಚಿತ್ರ) ಪ್ರತಿಮಾ-ಬಾಲಕೃಷ್ಣ ಪೂಜಾರಿ
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ರಮೇಶ್ ಬಿ. ಜವಳಗೇರಾ

Updated on:Oct 25, 2024 | 7:20 PM

ಉಡುಪಿ, (ಅಕ್ಟೋಬರ್ 25): ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಅಜೆಕಾರಿನಲ್ಲಿ ನಡೆದ ಘಟನೆ ಎಲ್ಲರನ್ನ ತಲ್ಲಣಿಸಿಬಿಟ್ಟಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವಕ ದಿಲೀಪ್ ಹೆಗ್ಡೆ ಲವ್​ನಲ್ಲಿ ಬಿದ್ದಿದ್ದ ಪ್ರತಿಮಾ, ಗಂಡ ಬಾಲಕೃಷ್ಣನಿಗೆ ಸ್ಲೋ ಪಾಯಿಸನ್ ನೀಡಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ನರಳಿ ನರಳಿ ಸಾಯಲಿ ಎಂದು ಗೊತ್ತಾಗದ ಹಾಗೇ ಊಟದಲ್ಲಿ ವಿಷ ಹಾಕಿ ಕೊನೆಗೆ ಇಬ್ಬರು ಸೇರಿ ಉಸಿರುಗಟ್ಟಿಸಿ ಕೊಂದಿದ್ದಾರೆ. ಅಕ್ಟೋಬರ್ 20ರಂದು ಬೆಂಗಳೂರಿನಲ್ಲಿ ಚಿಕಿತ್ಸೆ ಮುಗಿಸಿ ಮನೆಗೆ ಕರೆದುಕೊಂಡು ಬರಲಾಗಿತ್ತು. ಅದೇ ರಾತ್ರಿ ಬಾಲಕೃಷ್ಣ ಪೂಜಾರಿ ಸಾವನ್ನಪ್ಪಿದ್ದಾರೆ. ಕುಟುಂಬಸ್ಥರೆಲ್ಲ ಅಂತ್ಯಸಂಸ್ಕಾರವನ್ನು ಮುಗಿಸಿದ್ದಾರೆ. ಇದಾಗಿ ಮರಣೋತ್ತರ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದ್ದ ದಿನ ತನ್ನ ಸಹೋದರನ ಬಳಿ ಪ್ರತಿಮಾ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾಳೆ. ಪ್ರಿಯಕರ ದಿಲೀಪ್ ಜೊತೆ ಸೇರಿ ಸ್ಲೋ ಪಾಯಿಸನ್ ನೀಡಿದ್ದು, ಉಸಿರುಗಟ್ಟಿಸಿ ಸಾಯಿಸಿದ್ದನ್ನು ಒಪ್ಪಿಕೊಂಡಿದ್ದಾಳೆ.

ಅನ್ಯೋನ್ಯ ಸಂಸಾರ ಮಾಡಿದ್ದ ಪತ್ನಿ ಗಂಡನನ್ನು ಮುಗಿಸಿದ ಕಥೆಯಿದು. ಬಾಲಕೃಷ್ಣ ಪೂಜಾರಿ ಮತ್ತು ಪತ್ನಿ ಪ್ರತಿಮಾ 17 ವರ್ಷದ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇವೆ. ಆದ್ರೆ, 2020ರಲ್ಲಿ ಕರೋನ ಮಹಾಮಾರಿ ಆವರಿಸಿಕೊಂಡ ನಂತರ ಕುಟುಂಬ ಮುಂಬೈನಿಂದ ಅಜೆಕಾರಿಗೆ ಶಿಫ್ಟ್ ಆಗಿತ್ತು. ಹೊಸ ಮನೆ ಒಂದನ್ನು ಕಟ್ಟಿಸಿದ್ರು. ಅಜೆಕಾರು ಜಂಕ್ಷನ್ ನಲ್ಲಿ ಬ್ಯೂಟಿ ಪಾರ್ಲರ್ ಮಾಡಿಕೊಂಡಿದ್ದ ಪ್ರತಿಮಾ ಮತ್ತು ಕಾರ್ಕಳದಲ್ಲಿ ಬಿಸಿನೆಸ್ ಮ್ಯಾನ್ ಆಗಿರುವ ದಿಲೀಪ್ ಹೆಗ್ಡೆ ಪರಿಚಯ ಆಗಿದೆ. ಪರಿಚಯ ಪ್ರೀತಿಗೆ ತಿರುಗಿ ಬಹಳ ಸಮಯದಿಂದ ಇಬ್ಬರು ಜೊತೆಗೆ ಓಡಾಡಿಕೊಂಡಿದ್ದರು. ಕಾಲೇಜು ಕ್ಯಾಂಟೀನ್ ಮಾಡಿಕೊಂಡಿದ್ದ ಗಂಡನಿಗೆ,ಪ್ರತಿಮಾ ಮನೆಗೂ ಆಕೆಯ ಸಂಬಂಧದ ಬಗ್ಗೆ ತಿಳಿದು ಜಗಳ ಆಗಿದೆ. ಪೊಲೀಸ್ ಠಾಣೆಯವರೆಗೂ ತಲುಪಿ, ಎರಡು ಕುಟುಂಬದ ಪಂಚಾಯಿತಿ ನಡೆಸಿ ಸುಸೂತ್ರವಾಗಿ ಸಂಸಾರವನ್ನು ನಡೆಸಿಕೊಂಡು ಹೋಗುವುದಾಗಿ ಮುಚ್ಚಳಿಕೆ ಬರೆದಿದ್ದರು. ಇಷ್ಟಾಗಿ, ಕಳೆದ ಒಂದು ತಿಂಗಳಿಂದ ಬಾಲಕೃಷ್ಣ ಪೂಜಾರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ನಿರಂತರ ಜ್ವರ, ವಾಂತಿ ಆಗುತ್ತಿತ್ತು. ಕಾಮಾಲೆ ರೋಗ ಇದೆ ಎಂದು ಕಾರ್ಕಳ, ಮಣಿಪಾಲ ಕೆಎಂಸಿ, ಬೆಂಗಳೂರಿನ ನಿಮಾನ್ಸ್, ವಿಕ್ಟೋರಿಯಾ ಮಂಗಳೂರಿನ ವೆಲ್ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪತ್ನಿ ಕುಟುಂಬಸ್ಥರು ಕೊಡಿಸಿದ್ದಾರೆ. ಬಳಿಕ ಮನೆಗೆ ಕರೆದುಕೊಂಡು ಬಂದು ಒಂದು ದಿನ ರಾತ್ರಿ ಪ್ರಿಯಕರನ ಜೊತೆ ಸೇರಿಸಿ ಉಸಿರುಗಟ್ಟಿಸಿ ಕೊಂದಿದ್ದಾಳೆ.

ಇದನ್ನೂ ಓದಿ: ಸ್ಲೋ ಪಾಯಿಸನ್ ನೀಡಿ ಗಂಡನ ಹತ್ಯೆ: ಹೆಂಡ್ತಿಯ ಸ್ಫೋಟಕ ಆಡಿಯೋ ಇಲ್ಲಿದೆ

ಬ್ಯೂಟಿಷಿಯನ್ ಪ್ರತಿಮಾಗೆ ರೀಲ್ಸ್ ಮಾಡುವ ಹುಚ್ಚು

ಪ್ರತಿಮ ಬ್ಯೂಟಿಷನಾಗಿ ದುಡಿಯುತ್ತಿದ್ದರು. ಮದುವೆ ಮನೆಗಳಿಗೆ ಹೋಗಿ ನವ ಜೋಡಿಗಳ ಅಲಂಕಾರ ಮಾಡುತ್ತಿದ್ದರು. ನೋಡುವುದಕ್ಕೂ ಸ್ಫುರದ್ರೂಪಿಯಾದ ಕಾರಣ ರಿಲ್ಸ್ ಮಾಡುವ ಜಾಲಿ ಬೆಳೆಸಿಕೊಂಡಿದ್ದಳು. ಲೈಕ್ ಗಳ ಆಸೆಗೆ ಬಿದ್ದು ಡ್ರಿಂಕ್ಸ್ ಮಾಡುವುದನ್ನು ಹೆಚ್ಚಾಗಿ ಬಳಸಿಕೊಂಡಿದಳು. ಗಂಡ ಬಾಲಕೃಷ್ಣ ಪೂಜಾರಿಯನ್ನೇ ಪಕ್ಕದಲ್ಲಿ ಇರಿಸಿಕೊಂಡು ಕರಿಮಣಿ ಮಾಲೀಕ ನಿನ್ನಲ್ಲ ಎಂದು ರೀಲ್ಸ್ ಮಾಡಿಬಿಟ್ಟಿದ್ದಳು. ಮಡದಿಯ ಒತ್ತಾಯಕ್ಕೆ ಬಿದ್ದು ಬಾಲಕೃಷ್ಣ ಕೂಡ ನೀಡುತ್ತಿದ್ದರು. ಇದೀಗ ಕರಿಮಣಿ ಮಾಲಿಕ ನೀನಲ್ಲ ಎಂದು ಗಂಡನ ಜೊತೆ ರೀಲ್ಸ್ ಮಾಡಿದ್ದ ಪ್ರತಿಮ ತನ್ನ ಗಂಡನಿಗೆ ಸ್ಲೋ ಪಾಯಿಸನ್ ನೀಡಿ ಸಾಯಿಸಿದ್ದಾಳೆ

ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ದಿಲೀಪ್.

ದಿಲೀಪ್ ಕಾರ್ಕಳದ ಪ್ರತಿಷ್ಠಿತ ಉದ್ಯಮಿ. ಕಾರ್ಕಳ ಪೇಟೆಯಲ್ಲಿರುವ ಬಾಲಾಜಿ ಎಂಬ ಲಾಡ್ಜ್ ಕಮ್ ರೆಸ್ಟೋರೆಂಟ್ ಮಾಲಕರ ಮಗ. ವಯಸ್ಸು ಇನ್ನು 28… instagram ಮೂಲಕ ಈತನಿಗೂ ಪ್ರತಿಮಗು ಪರಿಚಯವಾಗಿದ್ದು, ಪರಿಚಯ ಸ್ನೇಹವಾಗಿದೆ. ಸ್ನೇಹ ಒಂದು ಹೆಜ್ಜೆ ಮುಂದೆ ಹೋಗಿ ಇಬ್ಬರಿಗೂ ಅನ್ಯೋನ್ಯತೆ ಬೆಳೆಯುತ್ತೆ. ಇಬ್ಬರು ಒಟ್ಟಿಗೆ ಓಡಾಡುವುದನ್ನು ಊರ ಜನ ಎಲ್ಲ ಗಮನಿಸಿದ್ದಾರೆ. ಪತಿಗೂ ವಿಚಾರ ತಿಳಿಸಿದ್ದಾರೆ. ಸಾಕಷ್ಟು ಬುದ್ಧಿವಾದ ಹೇಳಿದರೂ ಇವರ ವರ್ತನೆಯಲ್ಲಿ ಬದಲಾವಣೆಯಾಗಿಲ್ಲ. ಒಂದೆರಡು ಬಾರಿ ಪೊಲೀಸ್ ಠಾಣೆಗೂ ಈ ವಿಚಾರ ಹೋಗಿತ್ತು. ಆದರೆ ತನ್ನ ಪತ್ನಿಯ ಮೇಲೆ ವಿಪರೀತ ವ್ಯಾಮೋಹ ಹೊಂದಿದ್ದ ಬಾಲಕೃಷ್ಣ, ಎಲ್ಲೂ ಕೂಡ ಪ್ರತಿಮಾಳನ್ನು ಬಿಟ್ಟು ಕೊಟ್ಟಿಲ್ಲ. ಚೆನ್ನಾಗಿಯೇ ಸಂಸಾರ ಮಾಡುವ ಭರವಸೆ ಹೊತ್ತು ಮಡದಿಯನ್ನು ವಹಿಸಿಕೊಂಡು ಮಾತನಾಡಿದ್ದರು. ಇವರ ಸಂಸಾರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಮನೆಯವರು ಭಾವಿಸಿದ್ದರು.

ಪ್ರಿಯತಮೆಗಾಗಿ ಸಂಚು ಮಾಡಿದ ದಿಲೀಪ್ ಹೆಗ್ಡೆ

ಪ್ರತಿಮಾಳ ಸೋಶಿಯಲ್ ಲೈಫ್ ಕಂಡು, ದಿಲೀಪ್ ಗೆ ಆಕೆಯ ಬಗ್ಗೆ ವಿಪರೀತ ವ್ಯಾಮೋಹ ಹುಟ್ಟಿತ್ತು. ಆಕೆ ಏನು ಹೇಳಿದರು ಈತ ಮಾಡಲು ತಯಾರಿದ್ದ. ಇಬ್ಬರು ಸೇರಿ ಬಾಲಕೃಷ್ಣನಿಗೆ ಮುಹೂರ್ತ ಇಡಲು ನಿರ್ಧಾರ ಮಾಡುತ್ತಾರೆ. ಹಾಗೂ ಹೇಗೆ ವಿಚಾರ ತಿಳಿದುಕೊಂಡು ಹಂತ ಹಂತವಾಗಿ ಸ್ಲೋ ಪಾಯಿಸನ್ ನೀಡಲು ನಿರ್ಧಾರ ಮಾಡುತ್ತಾರೆ. ಆಹಾರದಲ್ಲಿ ಸ್ವಲ್ಪ ಸ್ವಲ್ಪವೇ ವಿಷವುಣಿಸಿ, ಆರೋಗ್ಯ ಕೆಡುವಂತೆ ನೋಡಿಕೊಳ್ಳುತ್ತಾರೆ. ಇದ್ಯಾವುದರ ಅರಿವು ಇಲ್ಲದ ಬಾಲಕೃಷ್ಣ ತಾನಾಯ್ತು ತನ್ನ ದುಡಿಮೆ ಆಯ್ತು ಎಂದು ಹೆಂಡತಿ ಕೊಟ್ಟದ್ದನೆಲ್ಲ ತಿಂದಿದ್ದಾನೆ. ಪದೇ ಪದೇ ವಿಷಪ್ರಾಶನವಾದದ್ದರಿಂದ, ಬಾಲಕೃಷ್ಣರ ಕಿಡ್ನಿ ಲಿವರ್ ಹಾಳಾಗಿವೆ. ನರಗಳಲ್ಲಿ ಪದೇ ಪದೇ ಸಮಸ್ಯೆ ಕಂಡು ಬಂದಿದೆ.

ಕೊನೆಗೆ ಸಂಪೂರ್ಣ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಿದ್ದಾನೆ. ಮೊದಲು ಕಾರ್ಕಳದ ಕೆಎಂಸಿ ಕ್ಯಾಂಪ್ ನಲ್ಲಿ ಚಿಕಿತ್ಸೆ ಪಡೆಯುತ್ತಾರೆ, ಹೆಚ್ಚಿನ ಚಿಕಿಸಬೇಕು ಎಂಬುದು ಅರಿವಿಗೆ ಬಂದು ಉಡುಪಿ ಜಿಲ್ಲೆಯ ಅಜರಕಾಡು ಆಸ್ಪತ್ರೆಗೆ ದಾಖಲಾಗುತ್ತಾರೆ. ಅಲ್ಲು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆಲ್ಲಕಾಸ್ಪತ್ರೆಗೆ ಸೇರಿಸಲಾಗುತ್ತದೆ. ಇದರಿಂದಲೂ ಏನು ಪ್ರಯೋಜನವಾಗುವುದಿಲ್ಲ. ಮುಂದೆ ಹೆಚ್ಚಿನ ಚಿಕಿಸಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ತಕ್ಕಮಟ್ಟಿಗೆ ಆರೋಗ್ಯ ಸುಧಾರಿಸಿಕೊಂಡು ವಾಪಸು ಅಜೆಕಾರಿಗೆ ಅವರನ್ನು ಐದಾರು ದಿನಗಳ ಹಿಂದೆ ಕರೆತರಲಾಗಿತ್ತು.

ಕೊಲೆ ನಡೆದ ದಿನ ಏನಾಯ್ತು?

ಬೆಂಗಳೂರಿನಿಂದ ಚಿಕಿತ್ಸೆ ಮುಗಿಸಿಕೊಂಡು ಬಂದ ಬಾಲಕೃಷ್ಣ, ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಂತೆ ಕಂಡುಬಂದಿದ್ದರು. ಚಿಕ್ಕಮ್ಮನ ಜೊತೆ ಇವರು ಬೆಂಗಳೂರಿನವರೆಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದರು. ವಾಪಸಾದ ಬಳಿಕ, ತನ್ನ ಸುಧಾರಿಸಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಆ ದಿನ ರಾತ್ರಿ ಅಮ್ಮನ ಕೈಯಿಂದ ಊಟ ಕಷಾಯ ಪಡೆದುಕೊಂಡು, ಅಮ್ಮನಿಗೆ ಪಕ್ಕದಲ್ಲಿರುವ ಮನೆಗೆ ಹೋಗುವಂತೆ ಹೇಳಿದ್ದರು. ಪ್ರತಿಮಾ ಕೂಡ ಗಂಡನನ್ನು ನಾನೇ ನೋಡಿಕೊಳ್ಳುತ್ತೇನೆ ಎಂದು ಬಂಧುಗಳಿಗೆಲ್ಲ ಹೇಳಿ ರಾತ್ರಿ ಪತಿಯ ಜೊತೆ ಏಕಾಂಗಿಯಾಗಿದ್ದರು.

ನಡುರಾತ್ರಿ ಪ್ರಿಯಕರನಿಗೆ ಬುಲಾವ್.

ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಬಂದ ನಂತರ ಪತಿ ಸುಧಾರಿಸಿಕೊಳ್ಳಬಹುದು ಎಂಬ ಆತಂಕ ಪ್ರತಿಮಾಗೆ ಕಾದಿತ್ತು. ಹಾಗಾಗಿ ಪತಿಯನ್ಮು ಕೊಂದೆ ಬಿಡಬೇಕು ಎಂಬ ನಿರ್ಧಾರ ಮಾಡಿ ನಡುರಾತ್ರಿ ಪ್ರಿಯಕರ ದಿಲೀಪ್ ಹೆಗಡೆಯನ್ನು ಫೋನ್ ಮಾಡಿ ಕರೆಸಿಕೊಂಡಿದ್ದಾಳೆ. ಇಬ್ಬರು ಸರಿ ರಾತ್ರಿ ಮೂರು ಗಂಟೆ ಸುಮಾರಿಗೆ ದಿಂಬಿನ ಮೂಲಕ ಕುತ್ತಿಗೆ ಒತ್ತಿ ಹಿಡಿದು, ಬಾಲಕೃಷ್ಣ ಪೂಜಾರಿಯನ್ನು ಬಲಿ ಪಡೆದಿದ್ದಾರೆ. ನಂತರ ದಿಲೀಪ್ ಹೆಗಡೆ ಏನು ಆಗಿಲ್ಲ ಎಂಬಂತೆ ಕಾರ್ಕಳಕ್ಕೆ ವಾಪಸ್ ಆಗಿದ್ದಾನೆ. ಪಕ್ಕದಲ್ಲಿ ಇರುವ ಸಂಬಂಧಿಕರ ಮನೆಗೆ ಕರೆ ಮಾಡಿ ಪ್ರತಿಮಾ, ತನ್ನ ಪತಿ ಸತ್ತಿರುವುದಾಗಿ ಮಾಹಿತಿ ರವಾನಿಸಿದ್ದಾಳೆ.

ಸಂಶಯಪಟ್ಟು ದೂರು ಕೊಟ್ಟ ಸಹೋದರ

ಈ ಅಮಾನವೀಯ ಘಟನೆಯನ್ನು ಎರಡು ಮಾನವೀಯ ಸಂಗತಿಗಳು ಗಮನ ಸೆಳೆದಿದೆ. ತನ್ನ ಪುತ್ರ ಬಾಲಕೃಷ್ಣ ಸತ್ತಿರುವುದನ್ನು ಕಂಡು ತಾಯಿಗೆ ಸಂಶಯ ಬಂದಿರುತ್ತೆ. ಮೈ ಮೇಲೆ ಗಾಯಗಳನ್ನು ನೋಡಿ ಇದು ಕೊಲೆಯಾಗಿರಬಹುದು ಎಂದು ಆತಂಕ ಕಾಡುತ್ತೆ. ಆದರೆ ಪೊಲೀಸರು ತನ್ನ ಸೊಸೆಯನ್ನು ಕರೆದೊಯ್ಯುತ್ತಾರೆ ಎಂಬ ಆತಂಕದಲ್ಲಿ ಆಕೆ ಏನು ಹೇಳಿರುವುದಿಲ್ಲ. ಒಳಗೆ ಬೆಳೆಸಿದ ದಿಂಬು ಬೆಡ್ ಶೀಟ್ ಗಳನ್ನು ಗಮನಿಸಿರುತ್ತಾರೆ, ಆದರೆ ತನ್ನ ಮಗನ ಕುಟುಂಬ ಹಾಳಾಗಬಾರದು ಎಂಬ ಪ್ರೀತಿಯಿಂದ, ಮೌನವಾಗಿರುತ್ತಾರೆ. ಆದರೆ ಪ್ರತಿಮಾಳ ಸಹೋದರ ಸಂದೀಪ್ ಗೆ, ಭಾವನ ಮೇಲೆ ವಿಪರೀತ ಗೌರವ ಮತ್ತು ಪ್ರೀತಿ. ಈ ಮೊದಲೇ ತನ್ನ ಸಹೋದರಿ ಬೇರೆಯವರ ಜೊತೆ ಓಡಾಟ ನಡೆಸುವುದನ್ನು ಸಂದೀಪ್ ಗಮನಿಸಿದ್ದ. ಹಾಗಾಗಿ ಅವಳನ್ನು ಕರೆಸಿ ಬುದ್ದಿವಾದ ಹೇಳಿದ್ದ. ಬಾಲಕೃಷ್ಣ ಪೂಜಾರಿಯ ಇತರ ಬಂಧುಗಳಿಗೂ ವಿಚಾರ ತಿಳಿಸಿದ್ದ. ಏನೇ ಆದರೂ ಬಾಲಕೃಷ್ಣ ಪೂಜಾರಿಗೆ ತನ್ನ ಮಡದಿಯ ಮೇಲೆ ವಿಶೇಷ ಪ್ರೀತಿ ಇತ್ತು. ಯಾರು ಹೇಳಿದರು ಪತ್ನಿಯನ್ನು ಬಿಟ್ಟುಕೊಟ್ಟಿಲ್ಲ.ಸಂಶಯಾಸ್ಪದ ರೀತಿಯಲ್ಲಿ ಬಾಲಕೃಷ್ಣ ಸತ್ತಾಗ ಮೊದಲು ಸಂಶಯ ವ್ಯಕ್ತಪಡಿಸಿದ್ದೆ ಸಂದೀಪ್. ತನ್ನ ಸ್ವಂತ ಸಹೋದರಿಯ ಮೇಲೆ ಸಂಶಯಗೊಂಡ ಸಂದೀಪ್, ದೂರು ನೀಡುವಂತೆ ಭಾವನ ಮನೆಯವರಿಗೆ ಹೇಳಿದ್ದ. ಸ್ವತಹ ತಾನೆ ಭಾವನ ಬಂಧುಗಳ ಜೊತೆ ಅಧಿಕಾರ ಠಾಣೆಗೆ ಹೋಗಿ ದೂರು ನೀಡಿದ. ಪೋಸ್ಟ್ ಮಾರ್ಟಮ್ ನಡೆಸುವಂತೆ ಒತ್ತಾಯಿಸಿದ್ದ. ಕೊನೆಗೆ ತಂಗಿಯ ತಪ್ಪೊಪ್ಪಿಗೆಗೂ ಈತ ಪ್ಲಾನ್ ಮಾಡಿದ್ದ!

ಸತ್ತು ಐದನೇ ದಿನ ಬೆಳಕಿಗೆ ಬಂತು ಸತ್ಯ!

ಗುರುವಾರ ಬಾಲಕೃಷ್ಣ ಪೂಜಾರಿ ಸತ್ತು ಐದು ದಿನ ಕಳೆದಿತ್ತು. ಐದನೇ ದಿನಕ್ಕೆ, ಶವ ಸಂಸ್ಕಾರ ನಡೆದ ಸ್ಥಳದಲ್ಲಿ ಧೂಳಪ್ಪ ಶಾಸ್ತ್ರ ನಡೆಸುವ ಪರಿಪಾಠ ಇದೆ. ಹಾಗಾಗಿ ಬಂಧುಗಳೆಲ್ಲ ದಿನ ಮನೆಯಲ್ಲಿ ಸೇರಿದ್ದರು. ಅದೇನು ಆತ್ಮಸಾಕ್ಷಿ ಕಾಡಿತೋ ಗೊತ್ತಿಲ್ಲ. ಪ್ರತಿಮಾ ತನ್ನ ಸಹೋದರಿ ಮಮತಾಳನ್ನು ಕರೆದು ಎಲ್ಲಾ ಸತ್ಯ ಬಾಯಿಬಿಟ್ಟಿದ್ದಾಳೆ. ಗಾಬರಿಯಾದ ಮಮತಾ ಎಲ್ಲರಿಗೂ ಕೇಳುವಂತೆ ಬೊಬ್ಬೆ ಇಟ್ಟಿದ್ದಾಳೆ. ಅಣ್ಣ ಸಂದೀಪ್ ನನ್ನು ಕರೆದು ವಿಚಾರ ತಿಳಿಸಿದ್ದಾಳೆ. ಮೊದಲೇ ಸಂಶಯವಿದ್ದ ಸಂದೀಪ್ ಕೋಣೆಗೆ ಬಾಗಿಲು ಹಾಕಿ ಬೆದರಿಸಿ ಸಹೋದರ ಜೊತೆ ಮಾತನಾಡಿದ್ದಾನೆ. ಆಘಾತದಲ್ಲಿದ್ದ ಪ್ರತಿಮಾ ಎಲ್ಲ ವಿಚಾರವನ್ನು ಅಣ್ಣನ ಮುಂದೆ ಬಾಯಿಬಿಟ್ಟಿದ್ದಾಳೆ. ಎಲ್ಲವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡ ಸಂದೀಪ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ತಕ್ಷಣವೇ ಕಾರ್ಯಚರಣೆ ನಡೆಸಿದ ಅಧಿಕಾರಿ ಪೊಲೀಸರು ಪ್ರತಿಮಾ ಹಾಗೂ ಆಕೆಯ ಪ್ರಿಯಕರನ್ನು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:41 pm, Fri, 25 October 24

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ