Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಡ್ರಗ್ಸ್ ನೀಡಿ ಅತ್ಯಾಚಾರ ಕೇಸ್​ಗೆ ಟ್ವಿಸ್ಟ್, ಬಿಜೆಪಿ ಕಾರ್ಯಕರ್ತ ಅರೆಸ್ಟ್

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದೀಗ 3ನೇ ಆರೋಪಿ ಅಭಯ್​ನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ಎಸಗಿದ ನಂತರ ಕ್ರಿಮಿ ಅಲ್ತಾಫ್ ತಪ್ಪಿಸಿಕೊಳ್ಳಲು ಅಭಯ್ ಸಹಕರಿಸಿದ್ದ. ಎನ್​ಡಿಪಿಎಸ್ ಕಾಯ್ದೆಯಡಿ ಅಭಯ್​ನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ಉಡುಪಿ: ಡ್ರಗ್ಸ್ ನೀಡಿ ಅತ್ಯಾಚಾರ ಕೇಸ್​ಗೆ ಟ್ವಿಸ್ಟ್, ಬಿಜೆಪಿ ಕಾರ್ಯಕರ್ತ ಅರೆಸ್ಟ್
ಅಭಯ್
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಆಯೇಷಾ ಬಾನು

Updated on: Aug 27, 2024 | 10:05 AM

ಉಡುಪಿ, ಆಗಸ್ಟ್​.27: ಉಡುಪಿ (Udupi) ಜಿಲ್ಲೆಯಲ್ಲಿ ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಕೇಸ್​ಗೆ ಸಂಬಂಧಿಸಿ ಕಾರ್ಕಳ ಠಾಣೆ ಪೊಲೀಸರು (Karkala Police) ಮೂರನೇ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಭಯ್ ಬಿಜೆಪಿ ಕಾರ್ಯಕರ್ತ ಎನ್ನುವ ಮಾಹಿತಿ ಸಿಕ್ಕಿದ್ದು ಉಡುಪಿ ಅತ್ಯಾಚಾರ ಕೇಸನ್ನು ಲವ್ ಜಿಹಾದ್​​ ಎಂದು ಆರೋಪಿಸಿದ್ದ ಬಿಜೆಪಿ, ಹಿಂದೂ ಸಂಘಟನೆಗಳಿಗೆ ಅಭಯ್ ಬಂಧನ ಮುಖ ಭಂಗ ತಂದಿದೆ. ಅಲ್ಲದೆ ಅಭಯ್ ಅತ್ಯಾಚಾರಿ ಅಲ್ತಾಫ್​ಗೆ ಡ್ರಗ್ಸ್ ತಂದು ಕೊಟ್ಟಿದ್ದ ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದ್ದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಇದೀಗ 3ನೇ ಆರೋಪಿ ಅಭಯ್​ನನ್ನು ಪೊಲೀಸರು ಬಂಧಿಸಿದ್ದು ಹೊಸ ಟ್ವಿಸ್ಟ್ ಸಿಕ್ಕಿದೆ. ಬಂಧಿತ ಆರೋಪಿ ಅಭಯ್ ಫೇಸ್​​ಬುಕ್​ನಲ್ಲಿ MLA ಸುನೀಲ್​​ಕುಮಾರ್​​ ಫೋಟೋ ಹಾಕಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಬಿಜೆಪಿ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾನೆ.

ಇದನ್ನೂ ಓದಿ: ಕಾರ್ಕಳದಲ್ಲಿ ಹಿಂದೂ ಯುವತಿ ಮೇಲೆ ಅತ್ಯಾಚಾರ ಪ್ರಕರಣ; ಪೊಲೀಸರ ಕೈಸೇರಿದ ಸಂತ್ರಸ್ಥೆ ಬ್ಲಡ್ ರಿಪೋರ್ಟ್

ಇತ್ತೀಚೆಗೆ ಈ ಪ್ರಕರಣಕ್ಕೆ ಬಿಜೆಪಿ, ಹಿಂದೂ ಸಂಘಟನೆಗಳು ಲವ್ ಜಿಹಾದ್ ಹಣೆಪಟ್ಟಿ ಕಟ್ಟಿದ್ದರು. ಆದರೆ ಇದೀಗ ತಮ್ಮದೇ ಕಾರ್ಯಕರ್ತ ಈ ಪ್ರಕರಣದಲ್ಲಿ ಭಾಗಿಯಾಗಿರೋದು ಮುಖಭಂಗವಾಗಿದೆ. ಆರೋಪಿ ಅಭಯ್, ಪ್ರಮುಖ ಆರೋಪಿ ಅಲ್ತಾಫ್​ ಜೊತೆ ಆತ್ಮೀಯವಾಗಿದ್ದ. ಅತ್ಯಾಚಾರ ನಡೆದ ದಿನ ಅಲ್ತಾಫ್​ಗೆ ಡ್ರಗ್ಸ್​ ಒದಗಿಸಿದ್ದ. ಸದ್ಯ ಈಗ ಅಭಯ್ ಬಂಧನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಡ್ರಗ್ಸ್​​ ವಿರೋಧಿ ಅಭಿಯಾನದಲ್ಲಿ ಇದ್ದವನೇ ಡ್ರಗ್ಸ್​ ಪೂರೈಸಿದ್ದ

ಇನ್ನು ಕಳೆದ ತಿಂಗಳು ಬಜರಂಗದಳ ಡ್ರಗ್ಸ್​ ವಿರೋಧಿ ಅಭಿಯಾನ ನಡೆಸಿತ್ತು. ಈ ಡ್ರಗ್ಸ್​​ ವಿರೋಧಿ ಅಭಿಯಾನದಲ್ಲಿ ಅಭಯ್ ಕೂಡ ಭಾಗಿಯಾಗಿದ್ದ. ಡ್ರಗ್ಸ್​ ಮಾರಾಟದ ವಿರುದ್ಧ ಸಿಡಿದೆದ್ದಿದ್ದ. ಕಾರ್ಕಳ DySPಗೆ ಮನವಿ ನೀಡುವ ಸಮಯದಲ್ಲಿಯೂ ಜೊತೆಗಿದ್ದ. ಜಾಲತಾಣದಲ್ಲಿ ಅಭಯ್ ಫೋಟೋ ವೈರಲ್ ಆಗುತ್ತಿದೆ. ಪ್ರಮುಖ ಆರೋಪಿ ಅಲ್ತಾಫ್​​​ಗೆ ಡ್ರಗ್ಸ್​ ಪೂರೈಸಿದ್ದ ಅಭಯ್​ನನ್ನು ಕಾರ್ಕಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್