AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಸುಳ್ಳು ದಾಖಲೆ ನೀಡಿ 2ನೇ ಮದುವೆಗೆ ಮುಂದಾದ 4 ಮಕ್ಕಳ ತಂದೆ; ಮದುವೆ ಅರ್ಜಿ ತಿರಸ್ಕರಿಸಲು ಮನವಿ

ಕೊರೊನಾ ಸೋಂಕಿಗೆ ಮೊದಲ ಪತ್ನಿ ಬಲಿಯಾಗಿದ್ದರು. 18 ವರ್ಷದ ಪುತ್ರಿ, 16 ವರ್ಷದ ಮಗ, ಎರಡೂವರೆ ವರ್ಷದ ಅವಳಿ ಮಕ್ಕಳು ಇರುವ ತಂದೆ ಈಗ, ತನ್ನ 4 ಮಕ್ಕಳನ್ನು ಬಿಟ್ಟು ಅಜ್ಜಿ ಮನೆಯಲ್ಲಿ ಮತ್ತೊಂದು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾನೆ.

ಉಡುಪಿ: ಸುಳ್ಳು ದಾಖಲೆ ನೀಡಿ 2ನೇ ಮದುವೆಗೆ ಮುಂದಾದ 4 ಮಕ್ಕಳ ತಂದೆ; ಮದುವೆ ಅರ್ಜಿ ತಿರಸ್ಕರಿಸಲು ಮನವಿ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Dec 17, 2021 | 3:13 PM

Share

ಉಡುಪಿ: ಸುಳ್ಳು ದಾಖಲೆ ನೀಡಿ 4 ಮಕ್ಕಳ ತಂದೆ ಒಬ್ಬ 2ನೇ ಮದುವೆಗೆ ಮುಂದಾದ ಘಟನೆ ಉಡುಪಿಯಲ್ಲಿ ನಡೆದಿದೆ. ಯುವತಿ ಜತೆ ವಿವಾಹಕ್ಕೆ ಅನ್ಯಧರ್ಮೀಯ ಯುವಕ ಮುಂದಾಗಿದ್ದಾನೆ. ಸಬ್​ರಿಜಿಸ್ಟ್ರಾರ್​ ಕಚೇರಿಯಲ್ಲಿ ವಿವಾಹ ನೋಂದಣಿಗೆ ಯುವಕ ಸಿದ್ಧತೆ ಮಾಡಿಕೊಂಡಿದ್ದಾನೆ. ಉಡುಪಿಯ ಮಧ್ವನಗರದ ನಿವಾಸಿಯಾಗಿರುವ ಮಹಿಳೆಯನ್ನು ವರಿಸಲು ಸುಳ್ಳು ದಾಖಲೆ ನೀಡಿ ತಯಾರಾಗಿದ್ದ.

ಯುವಕ ದಕ್ಷಿಣ ಕನ್ನಡ ಜಿಲ್ಲೆಯ ವಿಳಾಸದಲ್ಲಿ ಅವಿವಾಹಿತನೆಂದು ಅರ್ಜಿ ಸಲ್ಲಿಕೆ ಮಾಡಿದ್ದ. 2002ರಲ್ಲಿ ಯುವಕ ಮೊದಲ ಮಡದಿಯನ್ನು ಮದುವೆಯಾಗಿದ್ದ. ಆದರೆ, ಕೊರೊನಾ ಸೋಂಕಿಗೆ ಮೊದಲ ಪತ್ನಿ ಬಲಿಯಾಗಿದ್ದರು. 18 ವರ್ಷದ ಪುತ್ರಿ, 16 ವರ್ಷದ ಮಗ, ಎರಡೂವರೆ ವರ್ಷದ ಅವಳಿ ಮಕ್ಕಳು ಇರುವ ತಂದೆ ಈಗ, ತನ್ನ 4 ಮಕ್ಕಳನ್ನು ಬಿಟ್ಟು ಅಜ್ಜಿ ಮನೆಯಲ್ಲಿ ಮತ್ತೊಂದು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದಾನೆ.

ತನ್ನ ಸಮುದಾಯದ ಮುಖಂಡರ ಮಾತಿಗೂ ಕಿಮ್ಮತ್ತು ನೀಡುತ್ತಿಲ್ಲ. ಇತರೆ ಮುಖಂಡರು, ಮಕ್ಕಳ ಮನವಿಗೂ ಕೇರ್​ಲೆಸ್​ ಎನ್ನುತ್ತಿದ್ದಾನೆ ಎಂದು ತಿಳಿದುಬಂದಿದೆ. ಇದೀಗ, ಮುಖಂಡರು ಹಾಗೂ ಮಕ್ಕಳು ಸಬ್​ರಿಜಿಸ್ಟ್ರಾರ್​ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಮದುವೆ ಅರ್ಜಿ ತಿರಸ್ಕರಿಸುವಂತೆ ವಿವಾಹ ನೋಂದಣಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಹೊಡೆದಂತೆ: ಉಡುಪಿಯಲ್ಲಿ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್

ಇದನ್ನೂ ಓದಿ: ಉಪ್ಪಿನಂಗಡಿ: ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಖಂಡಿಸಿ ಪಿಎಫ್‌ಐ ಕಚೇರಿಯಿಂದ ಎಸ್​ಪಿ ಕಚೇರಿಗೆ ಮೆರವಣಿಗೆ

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ