ಉಡುಪಿ: ದಟ್ಟ ಅರಣ್ಯದೊಳಗೆ ಕಟ್ಟಿಗೆ ತರಲು ಹೋಗಿದ್ದ 28 ವರ್ಷದ ಯುವಕ 8 ದಿನಗಳ ಬಳಿಕ ಪತ್ತೆ

ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ನಿವಾಸಿ 28 ವರ್ಷದ ಯುವಕ ಕಟ್ಟಿಗೆ ತರಲು ಸೆಪ್ಟೆಂಬರ್ 16 ರಂದು ಮಧ್ಯಾಹ್ನ ಕಾಡಿಗೆ ಹೋಗಿದ್ದರು. ಹಿಂದಿರುಗುವಾಗ, ಯುವಕ ದಾರಿ ತಪ್ಪಿ ತಮ್ಮ ಮನೆಯಿಂದ ನಾಲ್ಕು ಕಿಮೀ ದೂರದಲ್ಲಿರುವ ದಟ್ಟವಾದ ಕಾಡಿನೊಳಗೆ ಕಣ್ಮರೆಯಾಗಿದ್ದರು.

ಉಡುಪಿ: ದಟ್ಟ ಅರಣ್ಯದೊಳಗೆ ಕಟ್ಟಿಗೆ ತರಲು ಹೋಗಿದ್ದ 28 ವರ್ಷದ ಯುವಕ 8 ದಿನಗಳ ಬಳಿಕ ಪತ್ತೆ
ನಾಪತ್ತೆಯಾಗಿದ್ದ ಯುವಕ ವಿವೇಕಾನಂದ Image Credit source: Hindustan Times
Follow us
TV9 Web
| Updated By: ವಿವೇಕ ಬಿರಾದಾರ

Updated on: Sep 25, 2023 | 7:50 AM

ಉಡುಪಿ ಸೆ.25: ಕುಂದಾಪುರ (Kundapura) ತಾಲೂಕಿನ ಅಮಾಸೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಸಮೀಪದ ದಟ್ಟ ಅರಣ್ಯದಲ್ಲಿ (Forest) ನಾಪತ್ತೆಯಾಗಿದ್ದ 28 ವರ್ಷದ ಯುವಕ ಎಂಟು ದಿನ ಬಳಿಕ ಪತ್ತೆಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ, 28 ವರ್ಷದ ವಿವೇಕಾನಂದ ಎಂಬವರು ಉರುವಲು ತರಲು ಸೆಪ್ಟೆಂಬರ್ 16 ರಂದು ಮಧ್ಯಾಹ್ನ ಕಾಡಿಗೆ ಹೋಗಿದ್ದರು. ಹಿಂದಿರುಗುವಾಗ, ವಿವೇಕಾನಂದ (Vivekananda) ದಾರಿ ತಪ್ಪಿ ತಮ್ಮ ಮನೆಯಿಂದ ನಾಲ್ಕು ಕಿಮೀ ದೂರದಲ್ಲಿರುವ ದಟ್ಟವಾದ ಕಾಡಿನೊಳಗೆ ಕಣ್ಮರೆಯಾಗಿದ್ದರು. ಅವರ ಜೊತೆಯಲ್ಲಿ ಎರಡು ಸಾಕು ನಾಯಿಗಳು ಕೂಡ ತೆರಳಿದ್ದವು.

ವಿವೇಕಾನಂದ ಸಂಜೆಯಾದರೂ ಮನೆಗೆ ಹಿಂತಿರುಗದಿದ್ದಾಗ, ಕುಟುಂಬಸ್ಥರು ಕಳವಳಗೊಂಡಿದ್ದರು. ವಿವೇಕಾನಂದರ ಬಗ್ಗೆ ನೆರೆಹೊರೆಯವರಲ್ಲಿ ವಿಚಾರಿಸಿದರೂ, ಪ್ರಯೋಜನವಾಗಲಿಲ್ಲ. ಬಳಿಕ ಗ್ರಾಮಸ್ಥರು ಒಟ್ಟುಗೂಡಿ ತಡರಾತ್ರಿಯವರೆಗೂ ವಿವೇಕಾನಂದ ಅವರನ್ನು ಹುಡುಕಾಡಿದರು. ಆದರೆ ವಿವೇಕಾನಂದ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮರುದಿನ ಸೆ.17ರಂದು ಅಮಾಸೆಬೈಲು ಪೊಲೀಸ್​ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ಬಳಿಕ ಪೊಲೀಸರು, ಅರಣ್ಯ ಇಲಾಖೆ ಜಂಟಿಯಾಗಿ ಮತ್ತು ಸುಮಾರು 100 ಗ್ರಾಮಸ್ಥರು ಜೊತೆಗೂಡಿ ಹುಡುಕಾಡಿದ್ದಾರೆ.

ಸೆಪ್ಟೆಂಬರ್ 17 ರಿಂದ ಸೆಪ್ಟೆಂಬರ್ 22 ರವರೆಗೆ ಪ್ರತಿದಿನ ನೂರಕ್ಕೂ ಹೆಚ್ಚು ಜನ ಹುಡುಕಾಡಿದರೂ ವಿವೇಕಾನಂದ ಸಿಗಲಿಲ್ಲ. ಕೊನೆಗೂ ವಿವೇಕಾನಂದ ಸಿಗದೆ ಇದ್ದಾಗ, ಅಧಿಕಾರಿಗಳು ಹುಡುಕಾಟ ಕೈಬಿಟ್ಟಿದ್ದಾರೆ. ಕೊನೆಗೆ ಸೆ.24 ರಂದು ಎಂಟನೇ ದಿನ ವಿವೇಕಾನಂದ ಹೇಗೊ ಮನೆ ದಾರಿ ಕಂಡುಕೊಂಡು ನಿವಾಸದತ್ತ ಬರುತ್ತಿದ್ದರು. ಇದನ್ನು ಕಂಡ ಕುಟುಂಬಸ್ಥರು ಹರ್ಷಗೊಂಡಿದ್ದಾರೆ. ಎಂಟು ದಿನಗಳ ಕಾಲ ವಿವೇಕಾನಂದ ಊಟ ಮತ್ತು ನೀರು ಇಲ್ಲದೇ ತೀವ್ರವಾಗಿ ಬಳಲಿದ್ದರು.

ಹೀಗಾಗಿ ಕೂಡಲೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ತಪಾಸಣೆ ಮಾಡಿದ ಬಳಿಕ ಯಾವುದೆ ಅಪಾಯವಿಲ್ಲ ಎಂದು ಹೇಳಿದರು. ವಿವೇಕಾನಂದ ಪ್ರಾಥಮಿಕ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದನ್ನೂ ಓದಿ: ಕೋಟಿಗಟ್ಟಲೆ ಆಸ್ತಿ ಹೊಂದಿದ್ದ ಆಕೆ 5 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಳು: ಇತ್ತೀಚೆಗಷ್ಟೇ ಆಕೆಯ ಆಧಾರ್ ನವೀಕರಿಸಲಾಗಿದೆ, ಹೋಗಿ ತಡಕಾಡಿದಾಗ!

ವಿವೇಕಾನಂದ ನಾಪತ್ತೆಯಾಗಿದ್ದಾರೆ ಎಂದು ಕಳೆದ ಭಾನುವಾರ ಸೆ.17 ರಂದು ದೂರು ದಾಖಲಾಗಿತ್ತು. ನಾಪತ್ತೆ ದೂರು ದಾಖಲಿಸಿಕೊಂಡು ಶುಕ್ರವಾರದವರೆಗೆ ಅರಣ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಸೇರಿಕೊಂಡು ಹುಡುಕಾಟ ನಡೆಸಿದ್ದೇವೆ ಎಂದು ಅಮಾಸೆಬೈಲು ಪೊಲೀಸ್ ಉಪನಿರೀಕ್ಷಕ ಸದಾಶಿವ ರಾಮಪ್ಪ ಗವರೋಜಿ ತಿಳಿಸಿದ್ದಾರೆ.

ಸಾಕಷ್ಟು ಹುಡುಕಾಟ ನಡೆಸಿದರೂ ವಿವೇಕಾನಂದ ಸಿಗದೆ ಇದ್ದಾಗ, ಹುಡುಕಾಟ ನಿಲ್ಲಿಸಿದೇವು. ಕೊನೆಗೆ ಕಾಣೆಯಾದ ವ್ಯಕ್ತಿ ಶನಿವಾರ ಪತ್ತೆಯಾಗಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿದ್ದು, ಅವರ ಆರೋಗ್ಯದ ಬಗ್ಗೆ ಯಾವುದೇ ಆತಂಕವಿಲ್ಲ ಅಂತ ವೈದ್ಯರು ತಿಳಿಸಿದ್ದರು ಎಂದು ಹೇಳಿದರು.

ವಿವೇಕಾನಂದರು ನಾಪತ್ತೆಯಾಗಿದ್ದ ಪ್ರದೇಶದಲ್ಲಿ ಚಿರತೆ, ಕಾಡುಹಂದಿ, ಕಾಡುಕೋಣ ಸೇರಿದಂತೆ ನಾನಾ ಪ್ರಾಣಿಗಳು ವಾಸಿಸುತ್ತವೆ. ರಾತ್ರಿಯಲ್ಲಿ ಈ ಪ್ರದೇಶಕ್ಕೆ ಏಕಾಂಗಿಯಾಗಿ ಹೋಗುವುದು ಅತ್ಯಂತ ಅಪಾಯಕಾರಿ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದರು. ಶನಿವಾರ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಿವೇಕಾನಂದರ ಮನೆಗೆ ಭೇಟಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
ಜವಾರಿ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಹನುಮಂತ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
Daily Devotional: ಶನಿ ನೇರ ಸಂಚಾರ ಯಾರಿಗೆಲ್ಲ ಅದೃಷ್ಟ? ವಿಡಿಯೋ ನೋಡಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಶನಿದೇವ ಕುಂಬ ರಾಶಿಗೆ ಪ್ರವೇಶಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ಮನೆಯಲ್ಲಿ ಸಲಗೆನಾ, ಸ್ಟ್ರೀಕ್ಟಾ? ವಿದ್ಯಾರ್ಥಿನಿ ಪ್ರಶ್ನೆಗೆ ಡಿಕೆಶಿ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ತಮಗೊಂದು ಗ್ಯಾರಂಟಿ ನೀಡುವಂತೆ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಡಿಸಿಎಂ ಉತ್ತರ
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು