AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಹಿಂದೂ ಜಾಗರಣ ವೇದಿಕೆ ರಾಜ್ಯ ಮುಖಂಡರ ಫೇಸ್ಬುಕ್ ಪೇಜ್ ಹ್ಯಾಕ್; ಇಲ್ಲಿದೆ ವಿವರ

ಹಿಂದೂ ಜಾಗರಣ ವೇದಿಕೆ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆ. ಹಿಂಜಾವೆಯ ರಾಜ್ಯದ 20 ಕ್ಕೂ ಅಧಿಕ ಪ್ರಮುಖರ ಫೇಸ್ ಬುಕ್ ಪ್ರೊಫೈಲ್​ಗಳನ್ನು ಏಕಕಾಲದಲ್ಲಿ ತೆಗೆದು ಹಾಕಲಾಗಿದೆ. ಹಿಂಜಾವೇ ಸಾಮಾಜಿಕ ಜಾಲತಾಣವನ್ನು ನಂಬಿಕೊಂಡಿರುವ ಫೇಸ್ ಬುಕ್ ಹುಲಿಗಳಲ್ಲ. ಹಿಂಜಾವೇ ಜನರ ಮಧ್ಯೆ ಕೆಲಸ ಮಾಡುವ ಸಂಘಟನೆ ಎಂದು ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದಾರೆ.

ಉಡುಪಿ: ಹಿಂದೂ ಜಾಗರಣ ವೇದಿಕೆ ರಾಜ್ಯ ಮುಖಂಡರ ಫೇಸ್ಬುಕ್ ಪೇಜ್ ಹ್ಯಾಕ್; ಇಲ್ಲಿದೆ ವಿವರ
ಹಿಂದೂ ಜಾಗರಣಾ ವೇಧಿಕೆ ಫೇಸ್​ ಬುಕ್​ ಖಾತೆ ಹ್ಯಾಕ್​
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 22, 2023 | 2:22 PM

ಉಡುಪಿ, ಸೆ.22: ಹಿಂದೂ ಜಾಗರಣ ವೇದಿಕೆ ರಾಜ್ಯ ಮುಖಂಡರ ಫೇಸ್ಬುಕ್ ಪೇಜ್ ಜೊತೆ ಉಡುಪಿ(Udupi)ಯ ಹಿಂದೂ ಜಾಗರಣ ವೇದಿಕೆ(Hindu Jagarana Vedike) ಯ ಎಲ್ಲಾ ಜಿಲ್ಲಾ ನಾಯಕರ ಅಕೌಂಟ್​ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಉಡುಪಿಯಲ್ಲಿ ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದಾರೆ. ‘ಹಿಂದೂ ಜಾಗರಣ ವೇದಿಕೆ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆ. ಹಿಂಜಾವೆಯ ರಾಜ್ಯದ 20 ಕ್ಕೂ ಅಧಿಕ ಪ್ರಮುಖರ ಫೇಸ್ ಬುಕ್ ಪ್ರೊಫೈಲ್​ಗಳನ್ನು ಏಕಕಾಲದಲ್ಲಿ ತೆಗೆದು ಹಾಕಲಾಗಿದೆ. ಹಿಂಜಾವೇ ಸಾಮಾಜಿಕ ಜಾಲತಾಣವನ್ನು ನಂಬಿಕೊಂಡಿರುವ ಫೇಸ್ ಬುಕ್ ಹುಲಿಗಳಲ್ಲ. ಹಿಂಜಾವೇ ಜನರ ಮಧ್ಯೆ ಕೆಲಸ ಮಾಡುವ ಸಂಘಟನೆ ಎಂದಿದ್ದಾರೆ.

ಸರ್ಕಾರದ ಸೂಚನೆ ಹೋಗಿ ಮಾಡಿದ್ದರೂ? ಹ್ಯಾಕರ್ಸ್​ಗಳನ್ನು ಬಳಸಿ ಮಾಡಿದ್ದರೋ ಎಂಬುವುದರ ತನಿಖೆಯಾಗಬೇಕು. ಹಿಂದೂ ವಿಚಾರಗಳನ್ನು, ಹೋರಾಟ ಮಾಡುತ್ತಿದ್ದವರನ್ನು ಹತ್ತಿಕ್ಕುವ ಕೆಲಸವಾಗಿದೆ. ಈ ರೀತಿಯಾಗಿ ನಡೆದಿರುವ ಸೈಬರ್ ದಾಳಿ, ಇದು ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿರುವ ಕುತಂತ್ರವಾಗಿದೆ. 2014 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಪರ ದೊಡ್ಡ ಮಟ್ಟದ ಅಭಿಯಾನ ನಡೆದಿತ್ತು. ಆ ರೀತಿಯ ಅಭಿಯಾನ ಈ ಬಾರಿ ಅಗಬಾರದು ಎನ್ನುವ ನಿಟ್ಟಿನಲ್ಲಿ ಹಿಂದೂ ಮುಖಂಡರ ಪೇಜ್​ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಫೇಸ್‌ಬುಕ್‌ ಅಕೌಂಟ್‌ ಹ್ಯಾಕ್‌: ಅಶ್ಲೀಲ ಫೋಟೋ ಪೋಸ್ಟ್‌

ಕೋಲಾರ ಜಿಲ್ಲಾಧಿಕಾರಿ ಹೆಸರಿನಲ್ಲಿಯೇ ಫೇಸ್ ಬುಕ್​ ನಕಲಿ ಖಾತೆ

ಕೋಲಾರ: ಜಿಲ್ಲಾಧಿಕಾರಿಗಳನ್ನು‌ ಬಿಡದ ಆನ್​ಲೈನ್ ವಂಚಕರು, ಸಾಮಾಜಿಕ ಜಾಲತಾಣದಲ್ಲಿ ನಕಲಿ‌ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಹೆಸರಿನಲ್ಲಿ‌ ನಕಲಿ ಖಾತೆ ತೆರೆದಿದ್ದು,ಹಾಸನ‌ ಜಿಲ್ಲಾಧಿಕಾರಿ ಎಂದು ಖಾತೆ ಸೃಷ್ಟಿಸಿ ಪೀಠೋಪಕರಣ ಮಾರಾಟ ಮಾಡಲು ಯತ್ನಿಸಿದ್ದಾರೆ. ಹಾಸನ‌ ಜಿಲ್ಲಾಧಿಕಾರಿ ಕಚೇರಿ ಮತ್ತು ಅಕ್ರಂ ಪಾಷ ಪೋಟೋವನ್ನು ದುರ್ಬಳಕೆ ಮಾಡಿಕೊಂಡಿರುವ ವಂಚಕರು, ನನ್ನ ಸ್ನೇಹಿತ ಉತ್ತಮ ಪೀಠೋಪಕರಣಗಳನ್ನು ಮಾರಾಟ ಮಾಡುತಿದ್ದಾರೆ ಎನ್ನುವ ಮೂಲಕ ವಂಚನೆಗೆ ಪ್ರಯತ್ನಿಸಿದ್ದಾರೆ. ಈಗಾಗಲೇ ಕೋಲಾರ ಜಿಲ್ಲಾಧಿಕಾರಿ ಪೋಲೀಸರಿಗೆ ದೂರು‌ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ