ಸೋಮಣ್ಣ ಮನವಿಗೆ ಸ್ಪಂದನೆ: ಕರ್ನಾಟಕ ಕೊಬ್ಬರಿ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ
ಕರ್ನಾಟಕ ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೆಚ್ಚುವರಿ ಕೊಬ್ಬರಿ ಖರೀದಿಸುವಂತೆ ಕೇಂದ್ರ ಸಚಿವ ಸೋಮಣ್ಣ ಮಾಡಿದ್ದ ಮನವಿಗೆ ಸರ್ಕಾರ ಸ್ಪಂದಿಸಿದ್ದು, ಹೆಚ್ಚುವರಿಯಾಗಿ 7500 ಮೆಟ್ರಕ್ ಟನ್ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಿಂದ ವಿವಿಧ ಜಿಲ್ಲೆಯ ಕೊಬ್ಬರಿ ಬೆಳೆಗಾರರಿಗೆ ಅನುಕೂಲವಾಗಲಿದೆ.
ನವದೆಹಲಿ/ಬೆಂಗಳೂರು, (ಜುಲೈ 18): ಕರ್ನಾಟಕ ಕೊಬ್ಬರಿ ಬೆಳೆಗಾರರಿಗೆ ಮೋದಿ ಸರ್ಕಾರ ಗುಡ್ನ್ಯೂಸ್ ನೀಡಿದೆ. ಹೆಚ್ಚುವರಿಯಾಗಿ 7500 ಮೆಟ್ರಕ್ ಟನ್ ಕೊಬ್ಬರಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ವರ್ಷದಲ್ಲಿ 2999 ಮೆಟ್ರಿಕ್ ಟನ್ ಖರೀಸಲಾಗುತ್ತಿತ್ತು. ಆದ್ರೆ, ಹೆಚ್ಚುವರಿ ಖರೀದಿಸುವಂತೆ ಕೇಂದ್ರ ಸಚಿವ ಸೋಮಣ್ಣ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ 2024ನೇ ಸಾಲಿಗೆ ಒಟ್ಟು 10,500 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ಒಪ್ಪಿಗೆ ಸೂಚಿಸಿದೆ. ಇದರಿಂದ ಮಂಡ್ಯ, ಹಾಸನ, ತುಮಕೂರು, ದಕ್ಷಿಣ ಕನ್ನಡ, ತುಮಕೂರು, ರಾಮನಗರ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ.
ಕೇಂದ್ರ ಸರ್ಕಾರದಿಂದ ಈ ವರ್ಷದಲ್ಲಿ 2999 ಮೆಟ್ರಿಕ್ ಟನ್ ಖರೀಸಲಾಗುತ್ತಿತ್ತು. ಆದ್ರೆ, ರೈತರಿಗೆ ಅನಾನುಕೂಲವಾಗಲಿದೆ ಎಂದು ಅರಿತ ಕೇಂದ್ರ ರೈಲ್ವೆ ರಾಜ್ಯ ಖಾತೆ ವಿ ಸೋಮಣ್ಣ ಅವರು 10 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದ್ದರು. ಇದರಿಂದ 2999 ಮೆಟ್ರಿಕ್ ಟನ್ ಜೊತೆಗೆ ಹೆಚ್ಚುವರಿಯಾಗಿ 7500 ಮೆಟ್ರಕ್ ಟನ್ ಕೊಬ್ಬರಿ ಖರೀದಿಸಲು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಇದೀಗ ಕೇಂದ್ರ ಸರ್ಕಾರ ಒಟ್ಟು 10,500 ಮೆಟ್ರಿಕ್ ಟನ್ ಕೊಬ್ಬರಿ ಖರೀದಸಲಿದೆ. ಇದರಿಂದ ಮಂಡ್ಯ,ಹಾಸನ, ತುಮಕೂರು, ದಕ್ಷಿಣಕನ್ನಡ,ತುಮಕೂರು,ರಾಮನಗರ ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: ತುಮಕೂರಿನಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 5 ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಸಚಿವಾಲಯ ಅನುಮೋದನೆ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರು ತಮ್ಮ ಮನವಿಗೆ ತತಕ್ಷಣವಾಗಿ ಸ್ಪಂದಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರತಿ ಕ್ವಿಂಟಲ್‌ಗೆ 12,000 ಬೆಂಬಲ ಬೆಲೆಯಂತೆ 62,500 ಮೆಟ್ರಿಕ್‌ಟನ್ ಉಂಡೆಕೊಬ್ಬರಿ ಖರೀದಿಸಲು ಕೇಂದ್ರ ಸರಕಾರ ಆದೇಶಿಸಿತ್ತು. ಇದಕ್ಕೆ ರಾಜ್ಯ ಸರಕಾರ 1,500 ರೂ. ಪ್ರೋತ್ಸಾಹಧನ ಪ್ರಕಟಿಸಿ ನಾಫೆಡ್ ಮೂಲಕ ಜ.20ರಂದು ಖರೀದಿ ಪ್ರಕ್ರಿಯೆ ಪ್ರಾರಂಭಿಸಿ, ಬಯೋಮೆಟ್ರಿಕ್ ಕಾರಣವೊಡ್ಡಿ ಫೆ. 1ಕ್ಕೆ ಮುಂದೂಡಲ್ಪಟ್ಟಿತ್ತು. ಆದರೆ, ಮತ್ತೆ ಐದು ದಿನ ತಡವಾಗಿ ಫೆ. 5ರಂದು ಪ್ರಾರಂಭವಾಗಿ ನಾಲ್ಕೂವರೆ ದಿನದಲ್ಲಿ 62,500 ಕ್ವಿಂಟಾಲ್‌ನ ನೋಂದಣಿ ಗುರಿ ತಲುಪಿದ್ದರಿಂದ ನೋಂದಣಿ ಸ್ಥಗಿತಗೊಂಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:59 pm, Thu, 18 July 24