ಚೈತ್ರಾ ಕುಂದಾಪುರ ಖ್ಯಾತಿಗೆ ಕಾರಣವಾಗಿತ್ತು ಆ ಒಂದು ಟ್ವೀಟ್! ಇದನ್ನು ನಂಬಿ ವಂಚನೆ ಜಾಲಕ್ಕೆ ಬಿದ್ದ ಉದ್ಯಮಿ

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ ಮತ್ತು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಹಲವಾರು ವಿಚಾರಗಳು ಬಹಿರಂಗವಾಗುತ್ತಿವೆ. ಚೈತ್ರಾ ಕುಂದಾಪುರ ಖ್ಯಾತಿಗೆ ಕೇಂದ್ರ ವಿತ್ತ ಸಚಿವೆಯ ಆ ಒಂದು ಟ್ವೀಟ್ ಕಾರಣವಾಗಿತ್ತು.

ಚೈತ್ರಾ ಕುಂದಾಪುರ ಖ್ಯಾತಿಗೆ ಕಾರಣವಾಗಿತ್ತು ಆ ಒಂದು ಟ್ವೀಟ್! ಇದನ್ನು ನಂಬಿ ವಂಚನೆ ಜಾಲಕ್ಕೆ ಬಿದ್ದ ಉದ್ಯಮಿ
ಚೈತ್ರಾ ಕುಂದಾಪುರ
Edited By: Rakesh Nayak Manchi

Updated on: Sep 15, 2023 | 7:12 AM

ಉಡುಪಿ, ಸೆ.15: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda Babu Poojary) ಅವರಿಂದ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ (Chaitra Kundapur) ಅವರ ಒಂದೊಂದೇ ವಿಚಾರ ಬೆಳಕಿಗೆ ಬರುತ್ತಿದೆ. ಇದೀಗ, 2018 ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಾಡಿದ ಡೇರಿಂಗ್ ಗರ್ಲ್ ಎಂಬ ಟ್ವೀಟ್ ಚೈತ್ರಾಳ ಖ್ಯಾತಿಗೆ ಕಾರಣವಾಗಿತ್ತು ಎಂಬ ಅಂಶ ತಿಳಿದುಬಂದಿದೆ.

ಕೇಂದ್ರ ಸರ್ಕಾರದ ವಿರುದ್ಧ 2018 ರಲ್ಲಿ ಕಾಂಗ್ರೆಸ್ ಮತ್ತು ಇತರೆ ಎಡಪಕ್ಷಗಳು ಭಾರತ್ ಬಂದ್​ ನಡೆಸಿದ್ದರು. ಈ ವೇಳೆ ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ, ಮುಂಗಟ್ಟು ಬಂದ್ ಮಾಡುವ ವೇಳೆ ಒಬ್ಬಂಟಿಯಾಗಿ ರಸ್ತೆಗಿಳಿದು ತರಾಟೆಗೆ ತೆಗೆದುಕೊಂಡಿದ್ದ ಚೈತ್ರಾ, ಮೋದಿ ಪರ ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದರು.

ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಕೆಲಸ ಕೇವಲ ಮಂಗಳೂರು-ಉಡುಪಿಗೆ ಸೀಮಿತವಾಗಿರದೆ ರಾಜ್ಯಾದ್ಯಂತ ವ್ಯಾಪಿಸಿದಂತಿದೆ!

ಇದರ ವಿಡಿಯೋ ಸಾಮಾಜಿಕ ಜಾಲಗಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಬಿಜೆಪಿ ವರಿಷ್ಠರ ಕಣ್ಣಿಗೂ ಬಿದ್ದಿತ್ತು. ಅದರಂತೆ, ವೀಡಿಯೋ‌ ರೀಟ್ವೀಟ್ ಮಾಡಿದ ನಿರ್ಮಲಾ ಸೀತಾರಾಮನ್, ಚೈತ್ರಾ ಕುಂದಾಪುರ ಅವರನ್ನು ಡೇರಿಂಗ್ ಗರ್ಲ್ ಎಂದು ಬಣ್ಣಿಸಿದ್ದರು.

ಇದನ್ನೇ ಬಂಡವಾಳವನ್ನಾಗಿಸಿಕೊಂಡ ಚೈತ್ರಾ, ತನಗೆ ನಿರ್ಮಲಾ ಸೀತರಾಮನ್ ಅವರ ಜೊತೆ ಲಿಂಕ್ ಇರುವುದಾಗಿಯೂ ಬಿಂಬಿಸಿಕೊಂಡಿದ್ದಳು. ಉಡುಪಿ ಮಾತ್ರವಲ್ಲದೆ ರಾಜ್ಯಾದ್ಯಂತ ತನ್ನ ಹವಾ ಕ್ರಿಯೇಟ್ ಮಾಡಿಕೊಂಡಿದ್ದರು. ಇದನ್ನು ನಂಬಿದ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ ಚೈತ್ರಾ ಕುಂದಾಪುರ ಹಣ ಪಡೆದು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Prajwal Amin

ಪ್ರಜ್ವಲ್ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ. ಉಡುಪಿ ಜಿಲ್ಲೆಯ ಸ್ಥಳೀಯ ಖಾಸಗಿ ಸುದ್ದಿವಾಹಿನಿಯ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ ಇವರು ಬಳಿಕ ಪ್ರಜಾವಾಣಿಯ ವರದಿಗಾರನಾಗಿ ಕೆಲಸ ಮಾಡಿರುತ್ತಾರೆ. ನಂತರ 6 ವರ್ಷ ಟಿ.ವಿ 5ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ನಂತರ ದಿಗ್ವಿಜಯ ನ್ಯೂಸ್ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವರದಿಗಾರನಾಗಿ ಕಾರ್ಯನಿರ್ವಾಹಸಿದ್ದಾರೆ. ಕಳೆದ ಹನ್ನೊಂದು ತಿಂಗಳಿನಿಂದ ಟಿ.ವಿ 9 ಸಂಸ್ಥೆಯಲ್ಲಿ ಉಡುಪಿ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

Read More
Follow Us