AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿದ್ದ ಅಮೆರಿಕಾ ಮೂಲದ ದಂಪತಿ ಮನೆಯಲ್ಲಿ ಕಳ್ಳತನ: ರಾಯಭಾರ ಕಚೇರಿಯಿಂದಲೇ ಬಂತು ದೂರು!

ಬೆಂಗಳೂರಿನಲ್ಲಿ ನೆಲೆಸಿದ್ದ ಅಮೆರಿಕಾ ಮೂಲದ ದಂಪತಿ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ರಾಯಭಾರ ಕಚೇರಿಯಿಂದಲೇ ನೇರವಾಗಿ ಡಿಜಿ, ಐಜಿಪಿಗೆ ದೂರು ಹೋಗಿರುವ ಪ್ರಸಂಗ ನಡೆದಿದೆ. ದಂಪತಿ ಮನೆಯಲ್ಲಿ ಕೆಲಸಗಾರನೇ ವಜ್ರ, ಚಿನ್ನಾಭರಣ ಸೇರಿ 600 ಡಾಲರ್ ಕಳವು ಮಾಡಿದ್ದ. ಈ ಬಗ್ಗೆ ಎಂಬಸಿಗೆ ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ. ಇನ್ನು ದೂರಿನ ಬೆನ್ನಲ್ಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಲ್ಲಿದ್ದ ಅಮೆರಿಕಾ ಮೂಲದ ದಂಪತಿ ಮನೆಯಲ್ಲಿ ಕಳ್ಳತನ: ರಾಯಭಾರ ಕಚೇರಿಯಿಂದಲೇ ಬಂತು ದೂರು!
ಸಾಂದರ್ಭಿಕ ಚಿತ್ರ
Shivaprasad B
| Edited By: |

Updated on:Jan 28, 2026 | 12:59 PM

Share

ಬೆಂಗಳೂರು, ಜನವರಿ 28: ಅಪರೂಪದ ಪ್ರಸಂಗವೊಂದಕ್ಕೆ ಸಿಲಿಕಾನ್​​ ಸಿಟಿ ಬೆಂಗಳೂರು ಸಾಕ್ಷಿಯಾಗಿದೆ. ನಗರದಲ್ಲಿ ನಡೆದ ಕಳ್ಳತನ ಪ್ರಕರಣ ಸಮಬಂಧ ಅಮೆರಿಕಾ ರಾಯಭಾರ ಕಚೇರಿ ಮಧ್ಯಪ್ರವೇಶ ಮಾಡಿದ್ದು, ಎಂಬಸಿಯಿಂದಲೇ ನೇರವಾಗಿ ಡಿಜಿ, ಐಜಿಪಿಗೆ ದೂರು ಹೋಗಿದೆ. ಅಮೆರಿಕಾ ಮೂಲದ ದಂಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪಶ್ಚಿಮ ಬಂಗಾಳ ಮೂಲದ ಕೆಲಸಗಾರನೋರ್ವ ಮನೆಯಲ್ಲಿ ಕಳ್ಳತನ ನಡೆಸಿದ್ದು,ಈ ಬಗ್ಗೆ ರಾಯಭಾರ ಕಚೇರಿಗೆ ಅವರು ದೂರು ನೀಡಿದ್ದರು ಎನ್ನಲಾಗಿದೆ.

ಸಾಫ್ಟ್ ವೇರ್ ಉದ್ಯೋಗಿಗಳಾಗಿದ್ದ ಪತ್ನಿ ಮೆರಿಯಲ್ ಮೊರೆನೋ, ಪತಿ ಟೊಮ್ಮೋ ಕನ್ಕನಿಯನ್ ಅಮೆರಿಕಾದ ಟೆಕ್ಸಸ್ ಮೂಲದವರು. ಪತಿ ಅಮೆರಿಕಾಗೆ ಹೋದ್ರೆ, ಪತ್ನಿ ಕೆಲಸಕ್ಕೆ ತೆರಳಿದ್ದರು. ಕಳೆದ ಒಂದು ವರ್ಷದ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಚಂದನ್ ರೌಲ್ ಎಂಬಾತ ಮನೆಯಲ್ಲಿದ್ದ ವಜ್ರ, ಚಿನ್ನಾಭರಣ ಸೇರಿ 600 ಅಮೆರಿಕನ್ ಡಾಲರ್ ಕದ್ದಿದ್ದ. ಜ.21ರಂದು ಘಟನೆ ನಡೆದಿದ್ದು, ಮಹಿಳೆ ಮನೆಗೆ ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿತ್ತು. ವಿಷಯವನ್ನು ಪತ್ನಿ ಮೆರಿಯಲ್ ಮೊರೆನೋ ಪತಿಯ ಗಮನಕ್ಕೆ ತಂದಿದ್ದು, ಅಮೆರಿಕಾದಲ್ಲಿದ್ದ ಪತಿ ರಾಯಭಾರ ಕಚೇರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಸಂಬಂಧ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕಳವು ಮಾಡಿದ್ದ ವಸ್ತುಗಳನ್ನು ಆತನಿಂದ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ:  ಬೆಂಗಳೂರು ಐಟಿ ಕಂಪನಿಗೆ 87 ಕೋಟಿ ವಂಚನೆ! ಮಾಜಿ ಉದ್ಯೋಗಿಯಿಂದ ಸೋರ್ಸ್ ಕೋಡ್ ಕಳವು

ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಕಳ್ಳರು

ಕೆ.ಆರ್.ಪುರದ ದೇವಸಂದ್ರ ಬಳಿ ಜನರ ಗಮನ ಬೇರೆಡೆ ಸೆಳೆದು ಚಿನ್ನಭಾರಣ ಕಳ್ಳತನ ಮಾಡುತ್ತಿದ್ದ ದಂಪತಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗಾಯತ್ರಿಮತ್ತು ಶ್ರೀಕಾಂತ್ ಬಂಧಿತರಾಗಿದ್ದು, ಆರೋಪಿಗಳಿಂದ 60 ಲಕ್ಷ ಮೌಲ್ಯದ 398 ಗ್ರಾಂ ಚಿನ್ನಭಾರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಪತ್ಮಿ ಬೊಂಬೆ ವ್ಯಾಪಾರ ಮಾಡ್ತಿದ್ರೆ, ಪತಿ ಜಾತ್ರೆಗೆ ಬರುವ ಮಹಿಳೆಯರ ಚಿನ್ನಭಾರಣ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದ್ದು, ಆರೋಪಿಗಳ ವಿಚಾರಣೆ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:52 pm, Wed, 28 January 26