ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ; ಕಾರವಾರ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ. ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕಾರವಾರ: ಇಂದು (ಜೂನ್ 18) ಪ್ರಕಟವಾದ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ (PUC Result) ಅನುತ್ತೀರ್ಣರಾದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಗ್ರಾಮದಲ್ಲಿ ಸಂಭವಿಸಿದೆ. ಪ್ರಣಮ್ ಈಶ್ವರ್ ನಾಯ್ಕ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಎ.ವಿ ಬಾಳಿಗ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ. ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಫಲಿತಾಂಶ? ದಕ್ಷಿಣ ಕನ್ನಡ ಶೇ.88.02, ಉಡುಪಿ ಶೇ.86.38, ವಿಜಯಪುರ ಶೇ.77.14, ಬೆಂಗಳೂರು ದಕ್ಷಿಣ ಶೇ.76.24, ಉತ್ತರ ಕನ್ನಡ ಶೇ.74.33, ಕೊಡಗು ಶೇ.73.22, ಬೆಂಗಳೂರು ಉತ್ತರ ಶೇ.72.01, ಶಿವಮೊಗ್ಗ ಶೇ.70.14, ಚಿಕ್ಕಮಗಳೂರು ಶೇ.69.42, ಬಾಗಲಕೋಟೆ ಶೇ.68.69, ಚಿಕ್ಕೋಡಿ ಶೇ.68, ಬೆಂಗಳೂರು ಗ್ರಾಮಾಂತರ ಶೇ.67.86, ಹಾಸನ ಶೇ.67.28, ಹಾವೇರಿ ಶೇ.66.64, ಧಾರವಾಡ ಶೇ.65.66, ಚಿಕ್ಕಬಳ್ಳಾಪುರ ಶೇ.64.49, ಮೈಸೂರು ಶೇ.64.45, ಚಾಮರಾಜನಗರ ಶೇ.63.02, ದಾವಣಗೆರೆ ಶೇ.62.72, ಕೊಪ್ಪಳ ಶೇ.62.04, ಬೀದರ್ ಶೇ.60.78, ಗದಗ ಶೇ.60.63, ಯಾದಗಿರಿ ಶೇ.60.59, ಕೋಲಾರ ಶೇ.60.41, ರಾಮನಗರ ಶೇ.60.22, ಬೆಳಗಾವಿ ಶೇ.59.88, ಕಲಬುರಗಿ ಶೇ.59.17, ತುಮಕೂರು ಶೇ.58.90, ಮಂಡ್ಯ ಶೇ.58.77, ರಾಯಚೂರು ಶೇ.57.93, ಬಳ್ಳಾರಿ ಶೇ.55.48, ಚಿತ್ರದುರ್ಗ ಶೇ.49.31 ಫಲಿತಾಂಶ ಪಡೆದುಕೊಂಡಿದೆ.
ಕಳೆದ ಎಪ್ರಿಲ್ 23 ರಿಂದ ಮೇ 18ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ ಒಟ್ಟು 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ದಾಖಲಾಗಿದ್ದರು. ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಕಲಾ ವಿಭಾಗಕ್ಕೆ 2,28,167 ಮಂದಿ, ವಾಣಿಜ್ಯ ವಿಭಾಗಕ್ಕೆ 2,45,519 ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ 2,10,569 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Sat, 18 June 22