ಧ್ವಜಾರೋಹಣ ಮುಗಿಸುತ್ತಿದ್ದಂತೆ ಕಾಣಿಸಿಕೊಂಡ ಎದೆನೋವು: ಎಎಸ್ಐ ಹೃದಯಾಘಾತಕ್ಕೆ ಬಲಿ

ಧ್ವಜಾರೋಹಣ ಮುಗಿಸುತ್ತಿದ್ದಂತೆ ಕಾಣಿಸಿಕೊಂಡ ಎದೆನೋವು: ಎಎಸ್ಐ ಹೃದಯಾಘಾತಕ್ಕೆ ಬಲಿ
ಮಹಮ್ಮದ್ ಶೇಖ್

ಸಂಚಾರಿ ಠಾಣೆಯಲ್ಲಿ ಇಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಎಸ್ಐ ಮಹಮ್ಮದ್ ಶೇಖ್, ಧ್ವಜಾರೋಹಣ ಮುಗಿಸಿದ ನಂತರ ದಿಢೀರನೆ ಎದೆನೋವು ಕಾಣಿಸಿಕೊಂಡು ಧರೆಗೆ ಕುಸಿದ್ರು.

TV9kannada Web Team

| Edited By: Ayesha Banu

Jan 26, 2022 | 1:28 PM

ಕಾರವಾರ: ಇಂದು ರಾಜ್ಯದಲ್ಲಿ 73ನೇ ಗಣರಾಜ್ಯೋತ್ಸವ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಈ ನಡುವೆ ಸಂಚಾರಿ ಪೋಲಿಸ್ ಠಾಣೆ ಎಎಸ್ಐ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಕಾರವಾರ ನಗರದ ಸಂಚಾರಿ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಹಮ್ಮದ್ ಶೇಖ್(57) ಮೃತಪಟ್ಟಿದ್ದಾರೆ.

ಸಂಚಾರಿ ಠಾಣೆಯಲ್ಲಿ ಇಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಎಸ್ಐ ಮಹಮ್ಮದ್ ಶೇಖ್, ಧ್ವಜಾರೋಹಣ ಮುಗಿಸಿದ ನಂತರ ದಿಢೀರನೆ ಎದೆನೋವು ಕಾಣಿಸಿಕೊಂಡು ಧರೆಗೆ ಕುಸಿದ್ರು. ಈ ವೇಳೆ ಕೂಡಲೇ ಅವರನ್ನ ಸಿಬ್ಬಂದಿಗಳು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಎಎಸ್ಐ ಮಹಮ್ಮದ್ ಶೇಖ್ ಮೃತಪಟ್ಟಿದ್ದಾರೆ.

ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ ಶಿಕ್ಷೆ ಸಾಕು ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ, 77,500 ರೂ. ದಂಡ ವಿಧಿಸಿ ಶಿಕ್ಷೆ ನೀಡಲಾಗಿದೆ. ಗುಲಾಬ್ ಚಂದ್ ಚಿಮಾಲಾಲ್ ಷಾ (38)ಎಂಬಾತನೇ ಶಿಕ್ಷೆಗೆ ಒಳಗಾದ ಆರೋಪಿ. ಕಾರವಾರದ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶಿವಾಜಿ ಅನಂತ ನಲ್ವಾಡ ಆದೇಶ ಹೊರಡಿಸಿದ್ದಾರೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಎಂಟು ತಿಂಗಳ ಹಿಂದೆ ಪೋಕ್ಸೊ ಅಡಿ ಪ್ರಕರಣ ದಾಖಲಾಗಿತ್ತು. ಸಿ.ಪಿ.ಐ. ರಾಮಚಂದ್ರ ನಾಯಕ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೇವಲ ಎಂಟೆ ತಿಂಗಳಲ್ಲಿ ನ್ಯಾಯಾಲಯ ಆರೋಪಿಗೆ ಶಿಕ್ಷೆ ನೀಡಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಸುಭಾಶ್ ಕೈರನ್ ವಾದ ಮಂಡಿಸಿದ್ರು.

ಇದನ್ನೂ ಓದಿ: Republic Day 2022 Parade: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಎನ್​ಸಿಸಿ ನೇತೃತ್ವ ವಹಿಸಿದ ಮೈಸೂರು ವಿದ್ಯಾರ್ಥಿನಿ

Follow us on

Related Stories

Most Read Stories

Click on your DTH Provider to Add TV9 Kannada