ಭಟ್ಕಳದಲ್ಲಿ ಕೋಮು ಸಂಘರ್ಷ ತಡೆಯಲು ರಾಜ್ಯ ಗುಪ್ತದಳ ವಿಫಲ -ಬಿಜೆಪಿ ಶಾಸಕ ಸುನಿಲ್ ನಾಯ್ಕ
ಭಟ್ಕಳದಲ್ಲಿ ಕೋಮು ಸಂಘರ್ಷ ತಡೆಯಲು ರಾಜ್ಯ ಗುಪ್ತದಳ ವಿಫಲವಾಗಿದೆ ಎಂದು ಕಾರವಾರದಲ್ಲಿ ಭಟ್ಕಳದ ಬಿಜೆಪಿ ಶಾಸಕ ಸುನಿಲ್ ನಾಯ್ಕ ಹೇಳಿದ್ದಾರೆ.
ಉತ್ತರ ಕನ್ನಡ: ಭಟ್ಕಳದಲ್ಲಿ (Bhatkal) ಕೋಮು ಸಂಘರ್ಷ ತಡೆಯಲು ರಾಜ್ಯ ಗುಪ್ತದಳ ವಿಫಲವಾಗಿದೆ ಎಂದು ಕಾರವಾರದಲ್ಲಿ ಭಟ್ಕಳ ಬಿಜೆಪಿ ಶಾಸಕ ಸುನಿಲ್ ನಾಯ್ಕ (Sunil Naik) ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಕೇಂದ್ರ ಅಥವಾ ರಾಜ್ಯದ ಗುಪ್ತಚರ ಇಲಾಖೆಯ ಉಪ ಕಚೇರಿಯನ್ನು ಭಟ್ಕಳದಲ್ಲಿ ತೆರೆಯುವಂತೆ ಮನವಿ ಮಾಡಿದ್ದೇನೆ.
ಕೇಂದ್ರದಿಂದ NIA ಸಂಸ್ಥೆಯ ಶಾಖೆ ಭಟ್ಕಳದಲ್ಲಿ ತೆರಯಬೇಕು. ಮುಸ್ಲೀಮರು ತಮ್ಮ ಬಲ ಇದೆ ಎಂದು ಪುರಸಭೆ ಕಚೇರಿಗೆ ಉರ್ದು ನಾಮಫಲಕ ಹಾಕುವ ಕೆಲಸ ಮಾಡಿದ್ದರು. ಆಗ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬೋಡ್೯ ತೆರವುಗೊಳಿಸಿದ್ದೇವೆ ಎಂದರು.
ಭಟ್ಕಳದಲ್ಲಿ SDPI ಮತ್ತು PFI ಗೆ ಹೊರ ದೇಶದಿಂದ ಪೈನಾನ್ಸ್ ಆಗುತ್ತಿದೆ. ಭಟ್ಕಳದಲ್ಲಿ ಮೂರ್ನಾಲ್ಕು ವರ್ಷದಲ್ಲಿ ಹಲವು ಸಂಘಟನೆಗಳು ನೆಲೆಯೂರುತ್ತಿವೆ. ಹೀಗಾಗಿ ಇಂತ ಉಗ್ರ ಚಟುವಟಿಕೆಗಳು ನಡೆಯಲು ಕಾರಣವಾಗಿದೆ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು.