AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶ ಸೇವೆ ಕರೆ ಮೇರೆಗೆ ಹನಿಮೂನ್​ ಮೊಟಕುಗೊಳಿಸಿ ಸೇವೆಗೆ ತೆರಳಿದ ಯೋಧ

ಸೇನೆಯ ಕರೆಗೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೋಸುರು ಗ್ರಾಮದ ಯೋಧ ಜಯವಂತ್ ಅವರು ಹನಿಮೂನ್‌ ಮೊಟಕುಗೊಳಿಸಿ ದೇಶಸೇವೆಗೆ ತೆರಳಿದ್ದಾರೆ. ಭಾರತ-ಪಾಕಿಸ್ತಾನದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಹಾಸನ ಜಿಲ್ಲೆಯ ಐವರು ಯೋಧರು ಕೂಡ ರಜೆಯಿಂದ ಕರ್ತವ್ಯಕ್ಕೆ ಹಿಂತಿರುಗಿದ್ದಾರೆ. ಈ ಯೋಧರ ತ್ಯಾಗ ಮತ್ತು ದೇಶಪ್ರೇಮಕ್ಕೆ ಜನರು ಸನ್ಮಾನಿಸುತ್ತಿದ್ದಾರೆ.

ದೇಶ ಸೇವೆ ಕರೆ ಮೇರೆಗೆ ಹನಿಮೂನ್​ ಮೊಟಕುಗೊಳಿಸಿ ಸೇವೆಗೆ ತೆರಳಿದ ಯೋಧ
ಯೋಧ ಜಯವಂತ್​
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:May 10, 2025 | 9:43 PM

Share

ಉತ್ತರ ಕನ್ನಡ, ಮೇ 10: ಭಾರತ ಮತ್ತು ಪಾಕಿಸ್ತಾನ (India-Pakistan) ಯುದ್ಧದ ಉದ್ವಿಗ್ನತೆ ನಿರ್ಮಾಣವಾಗಿದೆ. ಉತ್ತರ ಕನ್ನಡ (Uttar Kannada) ಜಿಲ್ಲೆಯ ಯೋಧರೊಬ್ಬರು ಸೇನೆಯ ಕರೆಗೆ ಹನಿಮೂನ್ (Honeymoon) ಮೊಟಕುಗೊಳಿಸಿ ಸೇವೆಗೆ ತೆರಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೋಸುರು ಗ್ರಾಮದ ಯೋಧ ಜಯವಂತ್ ಅವರು ಮದುವೆಯಾಗಿ 9 ದಿನಕ್ಕೆ ಪತ್ನಿಯನ್ನು ಬಿಟ್ಟು ಯುದ್ದಕ್ಕಾಗಿ ಛತ್ತೀಸಗಡದ ತನ್ನ ಬೆಟಾಲಿಯಬ್​ಗೆ ತೆರಳಿದ್ದಾರೆ. ಮೇ 1 ರಂದು ಮದುವೆಯಾಗಿ ಜಯವಂತ್​ ದಂಪತಿ ಊಟಿಗೆ ಹನಿಮೂನ್​ಗೆ ತೆರಳಿದ್ದರು. ಮೈಸೂರಿನಿಂದ ಊಟಿ ಕಡೆ ಹೊಗುತ್ತಿದ್ದ ಸಂದರ್ಭದಲ್ಲಿ ಸೈನ್ಯದಿಂದ ಕರೆ ಬಂದಿದೆ.

ಒಂದು ಕರೆಗೆ ಹನಿಮೂನ್ ಮೊಟಕುಗೊಳಿಸಿ ದೇಶಸೇವೆಗೆ ಹಾಜರಾದ ಯೋಧ ಜಯವಂತ್ ಹಾಜರಾಗಿದ್ದಾರೆ. ಯೋಧ ಜಯವಂತ್ ಸಿಆರ್​ಪಿಎಫ್​ನಲ್ಲಿ ಛತ್ತೀಸಗಡ್​ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಧ ಜಯವಂತ್ ಅವರಿಗೆ ಸನ್ಮಾನ ಮಾಡಿ, ಗೆದ್ದು ಬಾ ಎಂದು ಸಿದ್ದಾಪುರ ಜನತೆ ಹಾರೈಸಿ ಕಳುಹಿಸಿದ್ದಾರೆ.

ಹಾಸನದ ಯೋಧರಿಗೂ ಸೈನ್ಯದಿಂದ ಕರೆ

ರಜೆ ಮೇಲೆ ಬಂದಿದ್ದ ಹಾಸನ ಜಿಲ್ಲೆಯ ಐವರು ಯೋಧರು ಕರ್ತವ್ಯಕ್ಕೆ ವಾಪಾಸ್ ಆಗಿದ್ದಾರೆ. ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನಲೆ ಕೂಡಲೇ ವಾಪಾಸ್ ಬರುವಂತೆ ಕರೆ ಬಂದ ಹಿನ್ನೆಲೆಯಲ್ಲಿ ಹೊಳೆನರಸೀಪುರ, ಅರಸೀಕೆರೆ ತಾಲ್ಲೂಕುಗಳ ಐವರು ಯೋಧರು ಕರ್ತವ್ಯಕ್ಕೆ ತೆರಳಿದ್ದಾರೆ.

ಇದನ್ನೂ ಓದಿ
Image
ಪಾಕಿಸ್ತಾನ ಶಾಂತಿಯ ಪರ; ಕದನ ವಿರಾಮದ ಬಗ್ಗೆ ಪಾಕ್ ವಿದೇಶಾಂಗ ಸಚಿವ
Image
ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಸಿಂಧೂ ನೀರು ಬಿಡುವುದಿಲ್ಲ
Image
ಭಾರತ ಭಯೋತ್ಪಾದನೆ ವಿರುದ್ಧ ಯಾವುದೇ ರಾಜಿ ಇಲ್ಲ: ಜೈಶಂಕರ್
Image
ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ, ಮೇ 12ಕ್ಕೆ ಮತ್ತೆ ಮಾತುಕತೆ

ಇದನ್ನೂ ಓದಿ: ಕದನ ವಿರಾಮ ಎಂದರೇನು? ಭಾರತ- ಪಾಕಿಸ್ತಾನದ ನಡುವೆ ಮುಂದೆ ಏನಾಗುತ್ತೆ?

ರಜೆಯ ಮೇಲೆ ಗ್ರಾಮಕ್ಕೆ ಹೊಳೆನರಸೀಪುರ ತಾಲೂಕಿನ ಉಣ್ಣೆನಹಳ್ಳಿ ಗ್ರಾಮದ ಯೋಧರಾದ ಸುದರ್ಶನ್ ಹಾಗೂ ಮಧುಕುಮಾ‌ರ್ ಸಹೋದರರು ರಜೆ ಮೊಟಕುಗೊಳಿಸಿ, ಕರ್ತವ್ಯಕ್ಕೆ ತೆರಳಿದ್ದಾರೆ. ಅರಸೀಕೆರೆ ತಾಲ್ಲೂಕಿನ, ಹರಪನಹಳ್ಳಿ, ಬಸವನಪುರ ಮತ್ತು ಹರಿಹರಪುರ ಗ್ರಾಮಗಳ ಯೋಧರಾದ ಸಂಜೀವ್‌ನಾಯ್ಕ, ದಿನೇಶ್‌ನಾಯ್ಕ, ಹರೀಶ್‌ನಾಯ್ಕ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ರೈಲ್ವೆ ನಿಲ್ದಾಣದಲ್ಲಿ ಮೂವರು ಯೋಧರನ್ನು ಸನ್ಮಾನಿಸಿ ಬೀಳ್ಕೊಟ್ಟರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:30 pm, Sat, 10 May 25

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್