
ಉತ್ತರ ಕನ್ನಡ, ಮೇ 10: ಭಾರತ ಮತ್ತು ಪಾಕಿಸ್ತಾನ (India-Pakistan) ಯುದ್ಧದ ಉದ್ವಿಗ್ನತೆ ನಿರ್ಮಾಣವಾಗಿದೆ. ಉತ್ತರ ಕನ್ನಡ (Uttar Kannada) ಜಿಲ್ಲೆಯ ಯೋಧರೊಬ್ಬರು ಸೇನೆಯ ಕರೆಗೆ ಹನಿಮೂನ್ (Honeymoon) ಮೊಟಕುಗೊಳಿಸಿ ಸೇವೆಗೆ ತೆರಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೋಸುರು ಗ್ರಾಮದ ಯೋಧ ಜಯವಂತ್ ಅವರು ಮದುವೆಯಾಗಿ 9 ದಿನಕ್ಕೆ ಪತ್ನಿಯನ್ನು ಬಿಟ್ಟು ಯುದ್ದಕ್ಕಾಗಿ ಛತ್ತೀಸಗಡದ ತನ್ನ ಬೆಟಾಲಿಯಬ್ಗೆ ತೆರಳಿದ್ದಾರೆ. ಮೇ 1 ರಂದು ಮದುವೆಯಾಗಿ ಜಯವಂತ್ ದಂಪತಿ ಊಟಿಗೆ ಹನಿಮೂನ್ಗೆ ತೆರಳಿದ್ದರು. ಮೈಸೂರಿನಿಂದ ಊಟಿ ಕಡೆ ಹೊಗುತ್ತಿದ್ದ ಸಂದರ್ಭದಲ್ಲಿ ಸೈನ್ಯದಿಂದ ಕರೆ ಬಂದಿದೆ.
ಒಂದು ಕರೆಗೆ ಹನಿಮೂನ್ ಮೊಟಕುಗೊಳಿಸಿ ದೇಶಸೇವೆಗೆ ಹಾಜರಾದ ಯೋಧ ಜಯವಂತ್ ಹಾಜರಾಗಿದ್ದಾರೆ.
ಯೋಧ ಜಯವಂತ್ ಸಿಆರ್ಪಿಎಫ್ನಲ್ಲಿ ಛತ್ತೀಸಗಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯೋಧ ಜಯವಂತ್ ಅವರಿಗೆ ಸನ್ಮಾನ ಮಾಡಿ, ಗೆದ್ದು ಬಾ ಎಂದು ಸಿದ್ದಾಪುರ ಜನತೆ ಹಾರೈಸಿ ಕಳುಹಿಸಿದ್ದಾರೆ.
ರಜೆ ಮೇಲೆ ಬಂದಿದ್ದ ಹಾಸನ ಜಿಲ್ಲೆಯ ಐವರು ಯೋಧರು ಕರ್ತವ್ಯಕ್ಕೆ ವಾಪಾಸ್ ಆಗಿದ್ದಾರೆ. ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನಲೆ ಕೂಡಲೇ ವಾಪಾಸ್ ಬರುವಂತೆ ಕರೆ ಬಂದ ಹಿನ್ನೆಲೆಯಲ್ಲಿ ಹೊಳೆನರಸೀಪುರ, ಅರಸೀಕೆರೆ ತಾಲ್ಲೂಕುಗಳ ಐವರು ಯೋಧರು ಕರ್ತವ್ಯಕ್ಕೆ ತೆರಳಿದ್ದಾರೆ.
ಇದನ್ನೂ ಓದಿ: ಕದನ ವಿರಾಮ ಎಂದರೇನು? ಭಾರತ- ಪಾಕಿಸ್ತಾನದ ನಡುವೆ ಮುಂದೆ ಏನಾಗುತ್ತೆ?
ರಜೆಯ ಮೇಲೆ ಗ್ರಾಮಕ್ಕೆ ಹೊಳೆನರಸೀಪುರ ತಾಲೂಕಿನ ಉಣ್ಣೆನಹಳ್ಳಿ ಗ್ರಾಮದ ಯೋಧರಾದ ಸುದರ್ಶನ್ ಹಾಗೂ ಮಧುಕುಮಾರ್ ಸಹೋದರರು ರಜೆ ಮೊಟಕುಗೊಳಿಸಿ, ಕರ್ತವ್ಯಕ್ಕೆ ತೆರಳಿದ್ದಾರೆ. ಅರಸೀಕೆರೆ ತಾಲ್ಲೂಕಿನ, ಹರಪನಹಳ್ಳಿ, ಬಸವನಪುರ ಮತ್ತು ಹರಿಹರಪುರ ಗ್ರಾಮಗಳ ಯೋಧರಾದ ಸಂಜೀವ್‌ನಾಯ್ಕ, ದಿನೇಶ್‌ನಾಯ್ಕ, ಹರೀಶ್‌ನಾಯ್ಕ ರಜೆ ಮೊಟಕುಗೊಳಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ರೈಲ್ವೆ ನಿಲ್ದಾಣದಲ್ಲಿ ಮೂವರು ಯೋಧರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:30 pm, Sat, 10 May 25