AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಸಿದು ಬಿದ್ದ ಅಂಗನವಾಡಿ ಕೇಂದ್ರದ  ಗೋಡೆ ಸಿಮೆಂಟ್; ಕೂದಲೆಳೆ ಅಂತರದಲ್ಲಿ ಪಾರಾದ ಅಂಗನವಾಡಿ ಕಾರ್ಯಕರ್ತೆ

ಜಿಲ್ಲೆಯ ಹೊನ್ನಾವರ ತಾಲೂಕಿನ ಕಡ್ನೀರು ಅಂಗನವಾಡಿ ಕೇಂದ್ರದ  ಗೋಡೆ ಸಿಮೆಂಟ್ ಪ್ಲಾಸ್ಟರ್ ಕುಸಿತಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಪಾರಾದ ಅಂಗನವಾಡಿ ಕಾರ್ಯಕರ್ತೆ ಸಹಾಯಕಿ, ಆಶಾ ಕಾರ್ಯಕರ್ತೆ ಪಾರಾಗಿದ್ದಾರೆ.

ಕುಸಿದು ಬಿದ್ದ ಅಂಗನವಾಡಿ ಕೇಂದ್ರದ  ಗೋಡೆ ಸಿಮೆಂಟ್; ಕೂದಲೆಳೆ ಅಂತರದಲ್ಲಿ ಪಾರಾದ ಅಂಗನವಾಡಿ ಕಾರ್ಯಕರ್ತೆ
ಅಂಗನವಾಡಿ ಕೇಂದ್ರ
TV9 Web
| Edited By: |

Updated on: Jun 14, 2022 | 8:12 PM

Share

ಉತ್ತರ ಕನ್ನಡ: ಜಿಲ್ಲೆಯ ಹೊನ್ನಾವರ ತಾಲೂಕಿನ ಕಡ್ನೀರು ಅಂಗನವಾಡಿ ಕೇಂದ್ರದ  ಗೋಡೆ ಸಿಮೆಂಟ್ ಪ್ಲಾಸ್ಟರ್ ಕುಸಿತಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಪಾರಾದ ಅಂಗನವಾಡಿ ಕಾರ್ಯಕರ್ತೆ ಸಹಾಯಕಿ, ಆಶಾ ಕಾರ್ಯಕರ್ತೆ ಪಾರಾಗಿದ್ದಾರೆ. ಅದೃಷ್ಟವಶಾತ್ ಶಿತಲಾವಸ್ಥೆಗೊಂಡ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಇರಲಿಲ್ಲ. ಅಗನವಾಡಿ ಕೇಂದ್ರ ನಾಲ್ಕು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಈ ಅಂಗನವಾಡಿಯಲ್ಲಿ 10-12 ಮಕಳು ಓದುತ್ತಿದ್ದು, ಸದ್ಯ ಅವರನ್ನು ಅಂಗನವಾಡಿ ಸನಿಹದಲ್ಲಿದ್ದ ಶಾಲಾ ರಂಗಮಂದಿರದಲ್ಲಿ ಪುಟಾಣಿಗಳಿಗೆ ಪಾಠ ಮಾಡಲಾಗುತ್ತಿದೆ.

ಇದನ್ನು ಓದಿ: ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸದಿದ್ದಕ್ಕೆ ಪಿಡಿಓ ಮತ್ತು ಗ್ರಾಮ ಪಂಚಾಯತಿ ‌ಸದಸ್ಯರನ್ನು ದೇವಸ್ಥಾನದಲ್ಲಿ ಕೂಡಿಹಾಕಿದ ಗ್ರಾಮಸ್ಥರು

ಅಂಗನವಾಡಿ ಕೇಂದ್ರ 4 ವರ್ಷಗಳಿಂದ ಗೋಡೆ ಬಿರುಕು ಬಿಟ್ಟಿತ್ತು. ಈ ಬಗ್ಗೆ ಅಂಗನವಾಡಿ ಕಾರ್ಯಕರ್ತರು 4 ವರ್ಷದ ಹಿಂದೆಯೇ ಅಧಿಕಾರಿಗಳಿಗೆ ಮತ್ತು ಮನವಿ ಸಲ್ಲಿಸಿದ್ದರು, ಏನು ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸದ್ಯ ದುರಸ್ತಿಯನ್ನು ಸರಿಪಡಿಸಲು ಹಣ ಇಲ್ಲ ಎನ್ನುತ್ತಿದ್ದು, ಜನಪ್ರತಿನಿಧಿಗಳು ಈ ಕಡೆ ಗಮನ ಹರಸಿಲ್ಲ. ಹೀಗಾಗಿ ಅಂಗನವಾಡಿಗೆ ಮಕ್ಕಳನ್ನು ಕಳಿಸಲು ಪಾಲಕರು ನಿರಾಕರಿಸುತ್ತಿದ್ದಾರೆ. ಘಟನೆ ನೋಡಿ ಪಾಲಕರು

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Web contact
Web contact

TV9 Kannada

Read More