ಗ್ರಹಣ ಕಾಲದಲ್ಲೂ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆತ್ಮಲಿಂಗ ಸ್ಪರ್ಶ ದರ್ಶನಕ್ಕೆ ಅವಕಾಶ; ಇಲ್ಲಿದೆ ಮಾಹಿತಿ
ಪ್ರತಿನಿತ್ಯ ಸಂಜೆ 7:30 ರ ವರೆಗೆ ದರ್ಶನಕ್ಕೆ ಅವಕಾಶವಿರುತ್ತಿತ್ತು. ಆದರೆ, ಗ್ರಹಣ ಕಾಲ ಹಿನ್ನೆಲೆ ಸಾಯಂಕಾಲ 5:30 ರ ವರಗೆ ಮಾತ್ರ ಅವಕಾಶಕ್ಕೆ ಅನುಮತಿ ನೀಡಲಾಗಿದೆ. ಜೊತೆಗೆ ರಾತ್ರಿ ಅನ್ನ ಪ್ರಸಾದದ ವ್ಯವಸ್ಥೆ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಉತ್ತರ ಕನ್ನಡ, ಅ.27: ಜಿಲ್ಲೆಯ ಕುಮಟಾ(Kumta) ತಾಲೂಕಿನ ಗೋಕರ್ಣದ ಐತಿಹಾಸಿಕ ಮಹಾಬಲೇಶ್ವರ ದೇವಸ್ಥಾನದ ಆತ್ಮಲಿಂಗ ಸ್ಪರ್ಶ ದರ್ಶನಕ್ಕೆ ಚಂದ್ರಗ್ರಹಣ ಕಾಲದಲ್ಲೂ ಅವಕಾಶ ನೀಡಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ ಮಧ್ಯಾಹ್ನ 2:30 ರ ವರೆಗೆ ಹಾಗೂ ಸಾಯಂಕಾಲ 4 ಗಂಟೆಯಿಂದ 5:30 ರ ವರೆಗೆ ದರ್ಶನಕ್ಕೆ ಮಾತ್ರ ಅವಕಾಶ ಕೊಡಲಾಗಿದೆ. ಇನ್ನು ಪ್ರತಿನಿತ್ಯ ಸಂಜೆ 7:30 ರ ವರೆಗೆ ದರ್ಶನಕ್ಕೆ ಅವಕಾಶವಿರುತ್ತಿತ್ತು. ಆದರೆ, ಗ್ರಹಣ ಕಾಲ ಹಿನ್ನೆಲೆ ಸಾಯಂಕಾಲ 5:30 ರ ವರಗೆ ಮಾತ್ರ ಅವಕಾಶಕ್ಕೆ ಅನುಮತಿ ನೀಡಲಾಗಿದೆ. ಜೊತೆಗೆ ರಾತ್ರಿ ಅನ್ನ ಪ್ರಸಾದದ ವ್ಯವಸ್ಥೆ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಚಂದ್ರಗ್ರಹಣ
ಹೌದು, 2023 ರ ಕೊನೆಯ ಚಂದ್ರಗ್ರಹಣವು ಶನಿವಾರ (ಅ.28) ಸಂಭವಿಸಲಿದೆ. ಪುರಾಣಗಳ ಪ್ರಕಾರ ನೋಡುವುದಾದರೆ, ಹುಣ್ಣಿಮೆಯ ರಾತ್ರಿಯಲ್ಲಿ ರಾಹು ಮತ್ತು ಕೇತು ಚಂದ್ರನನ್ನು ಆವರಿಸಲು ಪ್ರಯತ್ನಿಸಿದಾಗ ಚಂದ್ರನ ಮೇಲೆ ಗ್ರಹಣ ಸಂಭವಿಸುತ್ತದೆ. ಇದನ್ನು ಜ್ಯೋತಿಷ್ಯದ ದೃಷ್ಟಿಕೋನದಿಂದ ಸೂತಕದ ಅವಧಿ ಎಂದು ಕರೆಯಲಾಗುತ್ತದೆ. ಇದು ಗ್ರಹಣಕ್ಕೂ ಕೆಲವು ಗಂಟೆಗಳ ಮೊದಲೇ ಶುರುವಾಗುತ್ತದೆ.
ಇದನ್ನೂ ಓದಿ:Lunar Eclipse: ಚಂದ್ರಗ್ರಹಣ ಏಕೆ ಉಂಟಾಗುತ್ತೆ? ಈ ವರ್ಷದ ಗ್ರಹಣ ಯಾವಾಗ? ಪೂರ್ತಿ ಮಾಹಿತಿ ಇಲ್ಲಿದೆ
ಇನ್ನು ಭಾರತದಲ್ಲಿ ಗ್ರಹಣ ಪ್ರಾರಂಭವಾಗುವ ಅವಧಿ ಮಧ್ಯರಾತ್ರಿ 01:06ಕ್ಕೆ ಪ್ರಾರಂಭವಾಗುತ್ತದೆ ಮತ್ತು ಬೆಳಗಿನ ಜಾವ 02:22ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣದ ಒಟ್ಟು ಅವಧಿ 1 ಗಂಟೆ 16 ನಿಮಿಷಗಳು ಇದೆ. ಈ ಅವಧಿಯನ್ನು ಉತ್ತಮ ಸಮಯವೆಂದು ಪರಿಗಣಿಸಲಾಗುವುದಿಲ್ಲ. ಗ್ರಹಣದ ಸೂತಕ ಅವಧಿಯು ಪ್ರಾರಂಭವಾದ ತಕ್ಷಣ ಯಾವುದೇ ರೀತಿಯ ಧಾರ್ಮಿಕ ಆಚರಣೆಗಳು, ದೇವಾಲಯದ ಪ್ರವೇಶ, ದೇವರನ್ನು ಮುಟ್ಟುವುದು, ಆಹಾರ ಸೇವನೆಯನ್ನು ನಿಷೇಧಿಸಲಾಗುತ್ತದೆ. ಇದರ ಜೊತೆಗೆ ಗ್ರಹಣ ಸಮಯದಲ್ಲಿ ಮನೆಯಿಂದ ಹೊರ ಹೋಗಿ ಗ್ರಹಣವನ್ನು ವಿಕ್ಷೀಸುವುದು ಒಳ್ಳೆಯದಲ್ಲ. ಈ ಸಮಯದಲ್ಲಿ ಪ್ರಕೃತಿಯಲ್ಲಿ ವಿಚಿತ್ರವಾದ ಶಕ್ತಿಯು ಉತ್ಪತ್ತಿಯಾಗುತ್ತದೆ. ಇದು ಎಲ್ಲಾ ಜೀವಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Fri, 27 October 23