ಉತ್ತರ ಕನ್ನಡ: ಮೀನು ಹಿಡಿಯಲು ಹೋಗಿದ್ದ ತಂದೆ-ಮಗ ಬೇಡ್ತಿ ಹಳ್ಳದಲ್ಲಿ ಮುಳುಗಿ ಸಾವು
ಯಲ್ಲಾಪುರ(Yellapura) ತಾಲೂಕಿನ ಮಂಚಿಕೇರಿ ಸಮೀಪದ ಬೇಡ್ತಿ ಹಳ್ಳ(Bedti river)ದಲ್ಲಿ ಮೀನು ಹಿಡಿಯಲು ಹೋಗಿದ್ದ ತಂದೆ-ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಧಾರುಣ ಘಟನೆ ನಡೆದರೆ, ಇತ್ತ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ, ಹೇಮಾವತಿ ಹಿನ್ನೀರಿನಲ್ಲಿ ನಡೆದಿದೆ.
ಉತ್ತರ ಕನ್ನಡ, ಫೆ.09: ಮೀನು ಹಿಡಿಯಲು ಹೋಗಿದ್ದ ತಂದೆ-ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಧಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(Yellapura) ತಾಲೂಕಿನ ಮಂಚಿಕೇರಿ ಸಮೀಪದ ಬೇಡ್ತಿ ಹಳ್ಳ(Bedti River)ದಲ್ಲಿ ನಡೆದಿದೆ. ಹಳ್ಳಿಗದ್ದೆ ಗ್ರಾಮದ ಖಲಂದರ್ ಫಕ್ರುಸಾಬ್ ಹಾಗೂ ಪುತ್ರ ತನ್ವೀರ್, ಮೃತ ರ್ದುದೈವಿಗಳು. ನಿನ್ನೆ(ಫೆ.08) ಬೇಡ್ತಿ ಹಳ್ಳದಲ್ಲಿ ಮೀನು ಹಿಡಿಯಲು ಹೋಗಿದ್ದರು. ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆ ಕುಟುಂಬಸ್ಥರಿಗೆ ಅನುಮಾನ ಮೂಡಿದ್ದು, ಇಂದು ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಳ್ಳದಲ್ಲಿ ಮೃತದೇಹಗಳು ಪತ್ತೆಯಾಗಿವೆ. ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣೆಯ ಪೊಲೀಸರು ಭೇಟಿ ನೀಡಿ, ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು
ಹಾಸನ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ, ಹೇಮಾವತಿ ಹಿನ್ನೀರಿನಲ್ಲಿ ನಡೆದಿದೆ. ಬೇಲೂರು ಮೂಲದ ಗಿರೀಶ್ (20) ಮೃತಪಟ್ಟ ಯುವಕ. ಹಾಸನದ ರಾಜೀವ್ ಕಾಲೇಜ್‌ನಲ್ಲಿ ಪ್ರರ್ಥಮ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಗಿರೀಶ್, ಕಾಕಾಲೇಜಿಗೆ ರಜಾ ಇದ್ದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ. ಈ ವೇಳೆ ಸರಿಯಾಗಿ ಈಜು ಬಾರದದಿದ್ದರು ನೀರಿಗೆ ಇಳಿದು ಮೃತಪಟ್ಟಿದ್ದಾನೆ. ಮೃತದೇಹವನ್ನು ಅಗ್ನಿಶಾಮಕದಳ ಹಾಗೂ ಪೊಲೀಸ್ ಸಿಬ್ಬಂದಿ ಹೊರತೆಗೆದಿದ್ದು,ಗೊರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಮಂಗಳೂರು: ಚಲಿಸುತ್ತಿದ್ದ ಬಸ್ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ
ಮೋಜು ಮಸ್ತಿಗೆ ಬಂದು ನೀರಿನಲ್ಲಿ ಮುಳಗಿ ಬೆಂಗಳೂರು ಮೂಲದ ಯುವಕ ಸಾವು
ಚಿಕ್ಕಬಳ್ಳಾಫುರ: ಮೋಜು ಮಸ್ತಿಗೆ ಬಂದಿದ್ದ ಬೆಂಗಳೂರು ಮೂಲದ ಯುವಕನೊಬ್ಬ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ ಘಟನೆ ಚಿಕ್ಕಬಬಳ್ಳಾಫುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ. ಬಾಬುಸಾಪಾಳ್ಯಾ ನಿವಾಸಿ ಯುವಕ ಅಭಿ(23) ಮೃತ ಯುವಕ. ತಂದೆ-ತಾಯಿಗೆ ಒಬ್ಬನೆ ಮಗನಾಗಿದ್ದ ಅಭಿ, ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ. ಇಂದು ಜಲಾಶಯದ ನೀರಿನಲ್ಲಿ ಈಜಾಡಲು ಹೋಗಿ ನೀರುಪಾಲಾಗಿದ್ದಾನೆ. ಅಗ್ನಿಶಾಮಕ ದಳ ಹಾಗೂ ಪೊಲೀಸರಿಂದ ಶವ ಶೋಧಕಾರ್ಯ ನಡೆದಿದ್ದು, ಚಿಕ್ಕಬಳ್ಳಾಫುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ