ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎನ್ನುವಂತೆ ತಂದೆ ಮಾಡಿದ ತಪ್ಪಿಗೆ ಮಗಳ ಮೇಲೆ ಲೈಂಗಿಕ ದೌರ್ಜನ್ಯ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಒಂದು ಹೇಯ ಕೃತ್ಯ ನಡೆದಿದೆ. ತಂದೆ ಸಾಲ ಮರುಪಾವತಿಸದಿದ್ದಕ್ಕೆ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವಂತಹ ಘಟನೆ ಬೆಳಕಿಗೆ ಬಂದಿದೆ. ಸದ್ಯ ಶಿರಸಿ ಗ್ರಾಮಾಂತರ ಠಾಣೆಗೆ ದೂರು ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕಾರವಾರ, ನವೆಂಬರ್ 20: ತಂದೆ ಪಡೆದ ಸಾಲ ಮರುಕಳಿಸದ್ದಕ್ಕೆ 10 ವರ್ಷದ ಮಗಳ ಮೇಲೆ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯವೆಸಗಿರುವಂತಹ (Sexual Harassment) ಘಟನೆ ಜಿಲ್ಲೆಯ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮತೀನ್ ಎಂಬಾತನಿಂದ ದೌರ್ಜನ್ಯವೆಸಗಲಾಗಿದೆ. ಸದ್ಯ ಶಿರಸಿ (Sirsi) ಗ್ರಾಮಾಂತರ ಠಾಣೆಗೆ ಬಾಲಕಿ ತಾಯಿ ದೂರು ನೀಡಿದ್ದು, ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ನಡೆದದ್ದೇನು?
ಬಾಲಕಿಯ ತಂದು ಸಂಘದಿಂದ ಪಡೆದ ಸಾಲ ಮರುಕಳಿಸದೆ ಸತಾಯಿಸುತ್ತಿದ್ದರಂತೆ. ಹೀಗಾಗಿ ಕೊಟ್ಟ ಸಾಲ ವಾಪಸ್ ಕೇಳಲು ಆರೋಪಿ ಮತೀನ್ ನಿನ್ನೆ ಸಂಜೆ ಅವರ ಮನೆಗೆ ಹೋಗಿದ್ದಾರೆ. ಈ ವೇಳೆ 10 ವರ್ಷದ ಬಾಲಕಿ ಮನೆಯಲ್ಲಿ ಆಟವಾಡುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲ ಅಂತಾ ಬಾಲಕಿ ಹೇಳಿದ್ದಾಳೆ. ಈ ವೇಳೆ ಬಲವಂತವಾಗಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮೈಸೂರು: ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ
ಇತ್ತ ತಾಯಿಗೆ ವಿಷಯ ತಿಳಿಯುತ್ತಿದ್ದಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸದ್ಯ ಆರೋಪಿ ಮತೀನ್ ಪರಾರಿ ಆಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣ ಸಂಖ್ಯೆ ಏರಿಕೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣ ಸಂಖ್ಯೆ ಏರಿಕೆ ಕಂಡಿದ್ದು, 17 ರಿಂದ 18 ವರ್ಷದ ಒಳಗಿನ ಬಾಲಕರು 40% ಹಾಗೂ 19 ರಿಂದ 25 ವರ್ಷದೊಳಗಿನ ಯುವಕರು 49% ಪೊಕ್ಸೋ ಕಾಯ್ದೆಯಡಿ ಜೈಲಿಗೆ ಸೇರುತ್ತಿದ್ದಾರೆ. ಪೋಕ್ಸೋ ಪ್ರಕರಣ ಹೆಚ್ಚಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರು: ವಾಕಿಂಗ್ಗೆ ಹೋಗೋ ಮಹಿಳೆಯರೆ ಎಚ್ಚರಿಕೆ; ನಾಯಿಯನ್ನಲ್ಲದೇ ಯುವತಿಯನ್ನೂ ಮುದ್ದಿಸಲು ಹೋದ ಕಾಮಾಂಧ
2023ರಲ್ಲಿ 68 ಪ್ರಕರಣ, 2024ರಲ್ಲಿ 21 ಪ್ರಕರಣ, 2025ರಲ್ಲಿ 63 ಪ್ರಕರಣಗಳು ದಾಖಲಾಗಿವೆ. ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯದಲ್ಲಿ 150ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಯುತಿದ್ದು, ಕಾರವಾರದ ಕಾರಾಗೃಹದಲ್ಲಿ 58 ಜನ ಪೋಕ್ಸೋ ಕಾಯ್ದೆಯಡಿ ಶಿಕ್ಷಿತರಾಗಿ ಜೀವಾವಧಿ ಶಿಕ್ಷೆ ಸಹ ಅನುಭವಿಸುತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಪೋಕ್ಸೋ ಪ್ರಕರಣದಲ್ಲಿ ಅಪ್ರಾಪ್ತ ಬಾಲಕರೇ ಅಪರಾಧಿಗಳಾಗುತಿದ್ದಾರೆ. ಪೋಷಕರ ಜವಬ್ದಾರಿ ಜೊತೆ ಈ ಬಗ್ಗೆ ಪ್ರಾಥಮಿಕ ಶಿಕ್ಷಣದಲ್ಲೇ ಜಾಗೃತಿ ಮೂಡಿಸುವ ಅವಷ್ಯಕತೆಯಿದ್ದು, ಇಂತಹ ಪ್ರಕರಣ ನಡೆಯದಂತೆ ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:13 pm, Thu, 20 November 25



