AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ವಾಕಿಂಗ್​ಗೆ ಹೋಗೋ ಮಹಿಳೆಯರೆ ಎಚ್ಚರಿಕೆ; ನಾಯಿಯನ್ನಲ್ಲದೇ ಯುವತಿಯನ್ನೂ ಮುದ್ದಿಸಲು ಹೋದ ಕಾಮಾಂಧ

ನಾಯಿಯ ಜೊತೆ ವಾಕಿಂಗ್​ಗೆ ಬಂದಿದ್ದ ಯುವತಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಸ್ಪರ್ಷಿಸಿ ಪರಾರಿಯಾದ ಘಟನೆ ಬೆಂಗಳೂರಿನ ಜ್ಞಾನಭಾರತಿ ಬಳಿಯ ಉಪಕಾರ್ ಲೇಔಟ್ನಲ್ಲಿ ನಡೆದಿದೆ. ನಾಯಿಯನ್ನು ಮುದ್ದಿಸುವ ನೆಪದಲ್ಲಿ ವ್ಯಕ್ತಿಯು ಮಹಿಳೆಯನ್ನು ಸ್ಪರ್ಶಿಸಿ, ಕೆಳಗೆ ಬಿದ್ದ ಫೋನ್ ಎತ್ತಿಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಹಿನ್ನೆಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು: ವಾಕಿಂಗ್​ಗೆ ಹೋಗೋ ಮಹಿಳೆಯರೆ ಎಚ್ಚರಿಕೆ; ನಾಯಿಯನ್ನಲ್ಲದೇ ಯುವತಿಯನ್ನೂ ಮುದ್ದಿಸಲು ಹೋದ ಕಾಮಾಂಧ
ನಾಯಿಯನ್ನಲ್ಲದೆ ಯುವತಿಯನ್ನೂ ಮುದ್ದು ಮಾಡಲು ಹೋದವನ ಮೇಲೆ ಎಫ್ ಐ ಆರ್
ರಾಚಪ್ಪಾಜಿ ನಾಯ್ಕ್
| Edited By: |

Updated on: Nov 16, 2025 | 11:08 AM

Share

ಬೆಂಗಳೂರು, ನವೆಂಬರ್ 16: ಸಾಮಾನ್ಯವಾಗಿ ನಾಯಿಗಳನ್ನು ವಾಕಿಂಗ್​ಗೆಂದು ಕರೆದುಕೊಂಡು ಹೋದಾಗ ಕೆಲ ಶ್ವಾನ ಪ್ರಿಯರು (Dog lovers) ಬಂದು ನಾಯಿಗಳನ್ನು ಮುದ್ದಿಸುತ್ತಾರೆ. ಆದರೆ ಹೀಗೆ ವಾಕಿಂಗ್​ಗೆ ಹೋದಾಗ ನಾಯಿಯನ್ನು ಮುದ್ದಿಸುವ ನೆಪದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (Physical Harassment) ನೀಡಿರುವ ಸಂಗತಿಯನ್ನು ನೀವೆಂದಾದರೂ ಕೇಳಿದ್ದೀರಾ? ಅಚ್ಚರಿಯೆನಿಸಿದರೂ  ಇದೇ ರೀತಿಯ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಬೆಂಗಳೂರಿನ ಜ್ಞಾನಭಾರತಿ ಬಳಿಯ ಉಪಕಾರ್ ಲೇಔಟ್ನಲ್ಲಿ  ನಾಯಿಯ ಜೊತೆ ವಾಕಿಂಗ್ಗೆ ಬಂದಿದ್ದ ಯುವತಿಯನ್ನು ವ್ಯಕ್ತಿಯೊಬ್ಬ ಸ್ಪರ್ಷಿಸಿ ಪರಾರಿಯಾದ ಘಟನೆ ನಡೆದಿದೆ. ಮಹಿಳೆಯ ಜೊತೆಗಿದ್ದ ನಾಯಿಯನ್ನು ಮುದ್ದು ಮಾಡುತ್ತಿದ್ದ ವ್ಯಕ್ತಿ ಏಕಾಏಕಿ ಆಕೆಯನ್ನು ಸ್ಪರ್ಷಿಸಲು ಮುಂದಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ಏಕಾಏಕಿ ಸಂತ್ರಸ್ತೆಯನ್ನು ಸ್ಪರ್ಷಿಸಲು ಮುಂದಾದ ವ್ಯಕ್ತಿ

ಸಂತ್ರಸ್ತೆ ನವೆಂಬರ್ 7 ರ ರಾತ್ರಿ ತಮ್ಮ ಸಾಕು ನಾಯಿಯನ್ನು ವಾಕಿಂಗ್​ಗೆಂದು ಉಪಕಾರ ಲೇಔಟ್​ನ ಬಳಿ ಕರೆದುಕೊಂಡು ಬಂದಿದ್ದರು. ಈ ವೇಳೆ ಅವರ ಮುಂದೆ ಅಪರಿಚಿತ ವ್ಯಕ್ತಿಯೊಬ್ಬ ಬಂದು ನಿಂತು, ನಿಮ್ಮ ನಾಯಿಯನ್ನು ಮುಟ್ಟಬಹುದೇ ಎಂದು ಕೇಳಿದ್ದ.  ಸಾಮಾನ್ಯವಾಗಿ ಹಲವು ಶ್ವಾನ ಪ್ರಿಯರು ನಾಯಿಯನ್ನು ಮುದ್ದಿಸುವುದರಿಂದ ಮಹಿಳೆಯೂ ಆತನಿಗೆ ಒಪ್ಪಿಗೆ ನೀಡಿದ್ದಾರೆ. ಆದರೆ ನಾಯಿಯನ್ನು ಮುದ್ದಿಸುತ್ತಿದ್ದ ವ್ಯಕ್ತಿ ಏಕಾಏಕಿ ಸಂತ್ರಸ್ತೆಯನ್ನು ಮುಟ್ಟಲು ಮುಂದಾದಾಗ ಹೆದರಿದ ಮಹಿಳೆ ಆತನನ್ನು ಬಲವಾಗಿ ತಳ್ಳಿದ್ದಾರೆ. ಆಕೆಯ ವಿರೋಧದ ನಡುವೆಯೂ ವ್ಯಕ್ತಿ ಮತ್ತೊಮ್ಮೆ ಕಿರುಕುಳ ನೀಡಿದಾಗ ಆತನ ಕಪಾಳಕ್ಕೆ ಬಾರಿಸಿದ್ದಾರೆ.

ಇದನ್ನೂ ಓದಿ ಸ್ಯಾಂಡಲ್‌ವುಡ್ ನಟಿಗೆ ನಿರ್ಮಾಪಕ ಟಾರ್ಚರ್ ನೀಡಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ; ಪೊಲೀಸರು ಹೇಳಿದ್ದೇನು?

ಈ ಎಲ್ಲಾ ಗಲಾಟೆಯ ನಡುವೆ ಮಹಿಳೆಯ ಫೋನ್ ರಸ್ತೆಗೆ ಬಿದ್ದಿದ್ದು, ಮಹಿಳೆ ಜೋರಾಗಿ ಕಿರುಚಿದ್ದಾರೆ. ಈ ಸಂದರ್ಭದಲ್ಲಿ ಕೆಳಗೆ ಬಿದ್ದ, ಸುಮಾರು 25,000 ರೂ. ಬೆಲೆಯ ಮೊಬೈಲ್ ತೆಗೆದುಕೊಂಡ ವ್ಯಕ್ತಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸಾರ್ವಜನಿಕರು ಸೇರುವಷ್ಟರಲ್ಲಿ ಕಾಮುಕ ಪರಾರಿಯಾಗಿದ್ದು, ಲೈಂಗಿಕ ಕಿರುಕುಳ ನೀಡಿದ ಹಿನ್ನಲೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ಪ್ರತಿಕ್ರಿಯೆ
ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!