ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್: ಕೊನೆಗೂ JDS ನಾಯಕಿಯ ಪುತ್ರ ಅರೆಸ್ಟ್
ರಿಶೇಲ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕಿರುಕುಳ ನೀಡಿದ್ದ ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರ ಚಿರಾಗ್ ಕೋಠಾರಕರ್ಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. 20 ದಿನಗಳ ಕಾರ್ಯಾಚರಣೆ ನಂತರ ಆರೋಪಿಯನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಚಿರಾಗ್ ಬಂಧನಕ್ಕೆ ಕದ್ರಾ ಗ್ರಾಮಸ್ಥರು ಹಾಗೂ ಕ್ರಿಶ್ಚಿಯನ್ ಸಮುದಾಯ ಒತ್ತಾಯಿಸಿತ್ತು.

ಕಾರವಾರ, ಜನವರಿ 29: ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ (Rishala D’Souza) ಆತ್ಮಹತ್ಯೆ ಪ್ರಕರಣ ಎರಡು ಗ್ರಾಮಗಳ ವೈಮನಸ್ಸಿಗೆ ಕಾರಣವಾಗಿದಲ್ಲದೇ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕ್ರಿಶ್ಚಿಯನ್ ಸಮುದಾಯ ಸಿಡಿದೆದ್ದಿತ್ತು. ಯುವಕನ ಬಂಧನಕ್ಕೆ ಆಗ್ರಹಿಸಿ ಕಾರವಾರದಲ್ಲಿ ಪ್ರತಿಭಟನೆ ನಡೆದಿತ್ತು. ಇದೀಗ ಕೊನೆಗೂ JDS ಸ್ಥಳೀಯ ನಾಯಕಿ ಚೈತ್ರಾ ಕೋಠಾರಕರ್ ಪುತ್ರ ಆರೋಪಿ ಚಿರಾಗ್ನನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ (Arrest).
ಘಟನೆ ಹಿನ್ನೆಲೆ
ಉತ್ತರ ಕನ್ನಡದ ಕಾರವಾರದಲ್ಲಿ ಜೆಡಿಎಸ್ ಸ್ಥಳೀಯ ನಾಯಕಿ ಪುತ್ರ ಚಿರಾಗ್ ಕಿರುಕುಳದಿಂದ ನೊಂದಿದ್ದ ರಿಶೇಲ್ ಡಿಸೋಜಾ ಜನವರಿ 9ರಂದು ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳನ್ನ ಪ್ರಿತಿಸುವಂತೆ ಚಿರಾಗ್ ಪಿಡಿಸುತ್ತಿದ್ದ ಎಂದು ಮೃತಳ ತಂದೆ ಕ್ರಿಸ್ತೋದ ಡಿಸೋಜಾ ಅವರು ಜನವರಿ 10 ರಂದು ಕದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್: ಶವ ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ; ಕಾರಣ ಇಲ್ಲಿದೆ
ಮಗಳ ದೇಹದ ಮೇಲೆ ಕಚ್ಚಿದ ಮಾರ್ಕ್ ಇರುವುದನ್ನು ಕಂಡು ತಂದೆ ಅತ್ಯಾಚಾರದ ಅನುಮಾನ ವ್ಯಕ್ತಪಡಿಸಿದ್ದರು. ಅತ್ತ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ, ಇತ್ತ ಆರೋಪಿ ಚಿರಾಗ್ ತನ್ನ ತಂದೆ-ತಾಯಿ ಜೊತೆ ನಾಪತ್ತೆ ಆಗಿದ್ದ. 20 ದಿನಗಳಿಂದ ಆರೋಪಿಗಾಗಿ ಪೊಲೀಸರು ಕಾರ್ಯಾಚರಣೆ ಮಾಡಿದ್ದು, ತನ್ನ ಅಂಕಲ್ ಜತೆ ಚೆನ್ನೈನಲ್ಲಿದ್ದ ಚಿರಾಗ್ನನ್ನು ಇದೀಗ ಬಂಧಿಸಿದ್ದಾರೆ.
ಇದನ್ನೂ ಓದಿ: JDS ಮುಖಂಡೆ ಪುತ್ರನ ಕಿರುಕುಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ: ಸಿಡಿದೆದ್ದ ಕ್ರಿಶ್ಚಿಯನ್ ಸಮುದಾಯ
ಇನ್ನು ಇಂದು ಕಾರವಾರ ಜಿಲ್ಲಾ ನ್ಯಾಯಲಯದಲ್ಲಿ ಪ್ರಕರಣದ ಅರ್ಜಿ ವಿಚಾರಣೆ ನಡೆದಿತ್ತು. ಆರೋಪಿ ಪರ ವಕೀಲ ನಾಗರಾಜ್ ನಾಯ್ಕ್ ಸುಮಾರು 2500 ಪುಟಗಳ ಚಾಟಿಂಗ್ ಲಿಸ್ಟ್ ಸೇರಿದಂತೆ ಹತ್ತಾರು ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸಿದ್ದರು. ಆರೋಪಿ ಚಿರಾಗ್ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಆದರೆ ಅಷ್ಟರಲ್ಲಿ ತಿರ್ಪು ಕಾಯ್ದಿರಿಸಿ ಜನವರಿ 31ಕ್ಕೆ ಮುಂದೂಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.