JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್: 2 ಗ್ರಾಮಗಳ ಮಧ್ಯೆ ಮೂಡಿದ ವೈಮನಸ್ಸು
ಜೆಡಿಎಸ್ ಮುಖಂಡೆಯ ಪುತ್ರ ಕಿರುಕುಳದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸದ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಕುಟುಂಬಗಳ ಮಧ್ಯೆ ನಡೆಯುತ್ತಿದ್ದ ತಿಕ್ಕಾಟ ಇದೀಗ ಎರಡು ಗ್ರಾಮಗಳ ಮಧ್ಯೆ ವೈಮನಸ್ಸಿಗೆ ಕಾರಣವಾಗಿದೆ. ಆರೋಪ, ಪ್ರತ್ಯಾರೋಪಗಳು ಜೋರಾಗಿದ್ದು, ಎಚ್ಚರಿಕೆ ಕೂಡ ನೀಡಲಾಗುತ್ತಿದೆ.

ಕಾರವಾರ, ಜನವರಿ 16: ಜೆಡಿಎಸ್ (JDS) ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ (suicide) ಪ್ರಕರಣ ಇದೀಗ ಎರಡು ಗ್ರಾಮಗಳ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಚಿರಾಗ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬರುತ್ತಿದ್ದು, ಗ್ರಾಮಸ್ಥರು ಪರಸ್ಪರ ಸುದ್ದಿಗೋಷ್ಠಿ ನಡೆಸಿ ಸುಳ್ಳು ಆರೋಪ ಮಾಡದಂತೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.
ದಿನಕ್ಕೊಂದು ತಿರುವು
ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜ್ ಆತ್ಮಹತ್ಯೆ ಪ್ರಕರಣ ಸದ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಎರಡು ಕುಟುಂಬಗಳ ನಡೆವೆ ಹೋರಾಟ ನಡೆದಿತ್ತು. ಆದರೆ ಇದೀಗ ಎರಡು ಗ್ರಾಮಗಳ ಮಧ್ಯೆ ವೈಮನಸ್ಸು ಮೂಡುವ ಹಂತಕ್ಕೆ ತಲುಪಿದೆ.
ಇದನ್ನೂ ಓದಿ: ಪ್ರೀತಿಸುವಂತೆ ಕಾಟ: ಜೆಡಿಎಸ್ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ
ಜೆಡಿಎಸ್ ಮುಖಂಡೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಚೈತ್ರಾ ಕೋಠಾರಕರ ಪುತ್ರ ಚಿರಾಗ್ ಕೋಠಾರಕರ ಕಿರುಕುಳದಿಂದ ರಿಶೇಲ್ ಡಿಸೋಜ್ ಸಾವನಪ್ಪಿದ್ದಾಳೆ ಎಂದು ಸಾಕ್ಷಿ ಸಮೇತ ಸುದ್ದಿಗೊಷ್ಠಿ ಮಾಡಿದ್ದ ಕದ್ರಾ ಗ್ರಾಮಸ್ಥರು ಹಾಗೂ ಕ್ರಿಶ್ಚಿಯನ್ ಮುಖಂಡರು, ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಚಿರಾಗ್ ಕೊಠಾರಕರ ಅತ್ಯಾಚಾರ ಮಾಡಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಆತನನ್ನು ಕೂಡಲೆ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸುಳ್ಳು ಆರೋಪ ಮಾಡುವವರೇ ನೇರ ಹೊಣೆ
ಇನ್ನು ಕದ್ರಾ ಗ್ರಾಮಸ್ಥರ ಎಚ್ಚರಿಕೆಗೆ ಕಿನ್ನರ ಗ್ರಾಮಸ್ಥರು ತಿರುಗೇಟು ನೀಡಿದ್ದಾರೆ. ಚಿರಾಗ್ ಮತ್ತು ರಿಶೇಲ್ ನಡುವೆ ಪವಿತ್ರ ಪ್ರೀತಿ ಇತ್ತು. ರಿಶೇಲ್ ಆಗಾಗ ಚಿರಾಗ ಮನೆಗೆ ಬಂದು ಹೋಗುತ್ತಿದ್ದಳು ಎಂಬುವುದಕ್ಕೆ ಫೋಟೋ, ವಿಡಿಯೋ ಸಾಕ್ಷಿ ಇದೆ ಆದರೆ, ಇದೀಗ ರಾಜಕೀಯ ದುರಿದ್ದೇಶದಿಂದ ಚಿರಾಗ ಮೇಲೆ ಇಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮಾನಸಿಕ ಒತ್ತಡದಲ್ಲಿರುವ ಚಿರಾಗ್ ಏನಾದರೂ ಮಾಡಿಕೊಂಡರೆ ಸುಳ್ಳು ಆರೋಪ ಮಾಡುತ್ತಿರುವವರೇ ನೇರ ಹೊಣೆ ಆಗುತ್ತಾರೆ. ಅಲ್ಲದೆ ಅವರ ಮೇಲೆ ಕಾನೂನು ಹೋರಾಟ ಮಾಡಲಾಗುವುದು ಎಂದು ಕಿನ್ನರ ಗ್ರಾಮಸ್ಥೆ ಸಿಮಾ ಕೋಠಾರಕರ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಾರವಾರ: JDS ಮುಖಂಡೆ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಕೇಸ್ಗೆ ಸ್ಫೋಟಕ ಟ್ವಿಸ್ಟ್
ಒಟ್ಟಾರೆಯಾಗಿ ಇಬ್ಬರ ನಡುವಿನ ಪ್ರೀತಿಯಲ್ಲಿನ ಚಿಕ್ಕ ವೈಮನಸ್ಸು, ಒಂದು ಜೀವ ಕಸಿದುಕೊಂಡರೆ, ಎರಡು ಗ್ರಾಮಗಳ ಜನರಲ್ಲಿ ವೈಮನಸ್ಸು ಮೂಡಲು ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.