ಶರಾವತಿ ಹಿನ್ನೀರಿನಲ್ಲಿ ಅನಧಿಕೃತ ಬೋಟಿಂಗ್ ಬಿಜಿನೆಸ್: ಏಜೆಂಟ್ರ ಹಾವಳಿ, ಪ್ರವಾಸಿಗರಿಂದ ದುಪ್ಪಟ್ಟು ಹಣ ವಸೂಲಿ
ಶರಾವತಿ ಹಿನ್ನೀರಿನಲ್ಲಿ ಅನೇಕರು ಅನಧಿಕೃತ ಬೋಟಿಂಗ್ ವ್ಯವಹಾರ ನಡೆಸಿರುವ ಆರೋಪ ಕೇಳಿಬಂದಿದೆ. ಪರವಾನಗಿ ಇಲ್ಲದ ಬೋಟ್‌ಗಳು ಮತ್ತು ಏಜೆಂಟ್‌ಗಳ ಹಾವಳಿಯಿಂದ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದ್ದು, ಬಾಯಿಗೆ ಬಂದ ದರ ಹೇಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಜನರು ಆಗ್ರಹಿಸಿದ್ದಾರೆ.

ಕಾರವಾರ, ಮೇ 23: ಅತಿ ಸುಂದರವಾದ ಶರಾವತಿ ನದಿಯ ಹಿನ್ನೀರಿನ (Sharavati Backwaters) ಪ್ರಕೃತಿಯ ಸೊಬಗು ನೋಡಲು ಎರಡು ಕಣ್ಣು ಸಾಲದು. ಇಂತಹ ಪ್ರಕೃತಿಯ ಸೊಬಗಿನಲ್ಲಿ ನೂರಾರು ಜನರಿಂದ ಅನಧಿಕೃತವಾಗಿ ಬೋಟಿಂಗ್ (Boating) ಬಿಜಿನೆಸ್ ನಡೆಸಲಾಗುತ್ತಿದೆ. ಸದ್ಯ ಕೆಲವರ ಅನಧಿಕೃತ ಬೋಟಿಂಗ್ ಹಾಗೂ ಏಜೆಂಟ್ರ ಹಾವಳಿಯಿಂದ, ಗ್ರಾಹಕರು ಸೇರಿ ಅನೇಕರ ಮೇಲೆ ಪರಿಣಾಮ ಬಿರುತ್ತಿದೆ. ಆದರೆ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ.
ಉತ್ತರ ಕನ್ನಡ ಜಿಲ್ಲೆಯ ಪ್ರಕೃತಿಯ ಸೊಬಗು ದೇಶದ ಯಾವ ಪ್ರವಾಸಿ ತಾಣಕ್ಕೂ ಕಮ್ಮಿಯಿಲ್ಲ. ಇಂತಹ ನೈಸರ್ಗಿಕವಾಗಿ ಸಮೃದ್ಧವಾದ ಜಿಲ್ಲೆಯಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಆಗಿಲ್ಲ. ಪ್ರವಾಸೋದ್ಯವು ಬೆಳೆದಿಲ್ಲ. ಆದರೆ ಇದಕ್ಕೆ ರಾಜ್ಯದ ಪ್ರಸಿದ್ಧ ಹೊನ್ನಾವರದ ಶರಾವತಿ ಹಿನ್ನೀರು ಪುಷ್ಠಿ ನೀಡುತ್ತಿದೆ.
ಇದನ್ನೂ ಓದಿ: ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್: ಮೀನುಗಾರಿಕೆ, ಟ್ರೆಕ್ಕಿಂಗ್ ನಿಷೇಧ, ಡಿಸಿ ಖಡಕ್ ಸೂಚನೆ
ಹೌದು.. ಜೋಗದ ಗುಂಡಿಯಲ್ಲಿ ಧುಮಕಿ ಅತ್ಯದ್ಭುತ ಜಗತ್ಪ್ರಸಿದ್ಧ ಫಾಲ್ಸ್ಗೆ ಸಾಕ್ಷಿ ಆಗಿರುವ ಶರಾವತಿ ನದಿ, ಈ ನದಿ ಅರಬ್ಬಿ ಸಮುದ್ರ ಸೇರುವ ಪ್ರದೇಶವು ಕೂಡ ಅಷ್ಟೆ ಸುಂದರವಾಗಿದೆ. ಹಾಗಾಗಿ ಕಳೆದ ಹತ್ತಾರು ವರ್ಷಗಳಿಂದ ಶರಾವತಿ ಹಿನ್ನೀರಿನಲ್ಲಿ ವಿಪುಲವಾಗಿ ಬೋಟಿಂಗ್ ಬಿಜಿನೆಸ್ ಆರಂಭ ಮಾಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಬೋಟ್‌ಗಳು ಶರಾವತಿ ಹಿನ್ನೀರಿನಲ್ಲಿವೆ. ಆದರೆ ಅನೇಕ ಬೋಟ್‌ಗಳು ಜಿಲ್ಲಾಡಳಿತದಿಂದ ಪರವಾನಗಿಯನ್ನ ಪಡೆದಿಲ್ಲ.
ಇನ್ನೂ ಬರುವ ಗ್ರಾಹಕರಿಗೆ ಸೂಕ್ತ ವ್ಯವಸ್ಥೆ ಮಾಡದ ಹಿನ್ನೆಲೆ ಏಜೆಂಟ್‌ಗಳ ಹಾವಳಿ ಹೆಚ್ಚಾಗಿದ್ದು, ತಮಗೆ ಬಾಯಿಗೆ ಬಂದ ದರ ಹೇಳಿ ಗ್ರಾಹಕರಿಂದ ಹಣ ಪಿಕಿಸುವ ಕೆಲಸ ಮಾಡಲಾಗುತ್ತಿದೆ. ಆದಷ್ಟು ಬೇಗ ಅನಧಿಕೃತ ಬೋಟಿಂಗ್ ದಂಧೆ ಮತ್ತು ಏಜೆಂಟ್‌ಗಳ ಹಾವಳಿಗೆ ಬ್ರೇಕ್ ಹಾಕುವಂತೆ ಪರವಾನಗಿ ಪಡೆದ ಬೋಟಿಂಗ್ ಮಾಲಿಕರಾದ ಕಿರಣ್ ಎಂಬುವವರು ಮನವಿ ಮಾಡಿದ್ದಾರೆ.
ಇನ್ನು ವಿಷಯ ಏನೆಂದರೆ ಕಳೆದ ಎರಡು ತಿಂಗಳು ಹಿಂದೆ, ಬೋಟಿಂಗ್ ವಿಚಾರವಾಗಿ ಓರ್ವ ಕಾರು ಚಾಲಕನ ಮೇಲೆ ಹಲ್ಲೆ ಮಾಡಲಾಗಿತ್ತು. ಅದಾದ ಬಳಿಕ ಎಚ್ಚೆತ್ಕೊಂಡಿದ್ದ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯಿಂದ ಟಿಕೆಟ್ ಕೌಂಟರ್ ಓಪನ್ ಮಾಡಿ, ನಂಬರ್ ಪ್ರಕಾರ ಪರವಾನಗಿ ಪಡೆದ ಬೋಟ್ಗಳ ಮೂಲಕ ಬೋಟಿಂಗ್ಗೆ ಅವಕಾಶ ಕಲ್ಪಿಸಲು ಪ್ಲಾನ್ ಮಾಡಲಾಗಿತ್ತು. ಆದರೆ ಏನಾಯಿತು ಗೊತ್ತಿಲ್ಲ. ಬದಲಾವಣೆ ಆಗದೆ ಯಥಾಸ್ಥಿತಿಯಲ್ಲಿದ್ದು, ಏನೂ ಬದಲಾವಣೆ ಆಗಿಲ್ಲ.
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ; ಗುಡ್ಡ ಕುಸಿದು ಅಂಕೋಲ-ಶಿರಸಿ ರಸ್ತೆ ಬಂದ್
ಸದ್ಯ ಇಲ್ಲಿಗೆ ಬರುವ ಗ್ರಾಹಕರಿಗೆ ಏಜೆಂಟ್ಗಳಿಂದ ಭಾರಿ ಕಿರಿಕಿರಿ ಉಂಟಾಗಿದ್ದು, ಇನ್ನೊಂದೆಡೆ ಪರವಾನಗಿ ಪಡೆಯದೆ ಬೋಟಿಂಗ್ ಮಾಡುತ್ತಿದ್ದರು ಯಾವುದೇ ಕಡಿವಾಣ ಹಾಕಲಾಗುತ್ತಿಲ್ಲ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿ ಶರಾವತಿ ಹಿನ್ನಿರಿನಲ್ಲಿ ಪ್ರವಾಸೋದ್ಯಮ ಹೆಚ್ಚಿಸುವಂತೆ ಜನರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:12 am, Fri, 23 May 25