ಹಾರ್ಡ್‌ವೇರ್, ಸಾಫ್ಟ್‌ವೇರ್ ಪರಿಚಯವಿದೆ, ಮೀಸಲಾತಿ ನೀಡದಿದ್ದರೆ ಏನು ಮಾಡಬೇಕು ಎಂದೂ ಗೊತ್ತಿದೆ: ವಚನಾನಂದಶ್ರೀ
ಮೀಸಲಾತಿ ನೀಡದಿದ್ದರೆ ಏನು ಮಾಡಬೇಕು ಎಂದು ಗೊತ್ತು. ನಮಗೆ ಹಾರ್ಡ್‌ವೇರ್, ಸಾಫ್ಟ್‌ವೇರ್ ಎರಡೂ ಗೊತ್ತು ಎಂದು ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.
ಬೆಂಗಳೂರು: 2A ಮೀಸಲಾತಿ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರಮಾಧಿಕಾರ ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿ OBC ಮೀಸಲಾತಿ ನೀಡುವ ಅಧಿಕಾರ ಇದೆ, ಯಡಿಯೂರಪ್ಪ ಕೈಯಲ್ಲಿ 2A ನೀಡುವ ಅಧಿಕಾರ ಇದೆ ಎಂದು ವಚನಾನಂದ ಸ್ವಾಮೀಜಿ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಪಂಚಮಸಾಲಿ 2A ಮೀಸಲಾತಿ ಬೃಹತ್ ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ ಮಾತನಾಡಿದರು.
ಸರ್ಕಾರ ಮೀಸಲಾತಿ ನಿರ್ಣಯ ಕೈಗೊಳ್ಳದೇ ಹೋದರೆ ಪಂಚಮಸಾಲಿ ಸಚಿವರು ಸಂಪುಟಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆ. ಆದರೆ ಅವರು ಈಗ ರಾಜೀನಾಮೆ ಕೊಡುವುದು ಬೇಡ. ಅವರು ರಾಜ್ಯದ ಜನರ ಬೆಂಬಲದಿಂದ ಶಾಸಕರು, ಮಂತ್ರಿಗಳಾಗಿದ್ದಾರೆ ಎಂದು ವಚನಾನಂದಶ್ರೀ ಹೇಳಿದ್ದಾರೆ.
ನಮಗೆ ಮೀಸಲಾತಿ ನೀಡಿ ಎಂದು ನಾವು ಭಿಕ್ಷೆ ಕೇಳುತ್ತಿಲ್ಲ. ಮೀಸಲಾತಿ ನಮ್ಮ ಹಕ್ಕು. ರಾಜ್ಯದ ಮುಖ್ಯಮಂತ್ರಿ ಮೇಲೆ ನಮಗೆ ನಂಬಿಕೆ ಇದೆ. ಯಡಿಯೂರಪ್ಪ ನುಡಿದಂತೆ ನಡೆಯುತ್ತಾರೆ. ಮೀಸಲಾತಿ ನೀಡದಿದ್ದರೆ ಏನು ಮಾಡಬೇಕು ಎಂದೂ ಗೊತ್ತು. ನಮಗೆ ಹಾರ್ಡ್‌ವೇರ್, ಸಾಫ್ಟ್‌ವೇರ್ ಎರಡೂ ಗೊತ್ತು ಎಂದು ಸಮಾವೇಶದಲ್ಲಿ ವಚನಾನಂದ ಸ್ವಾಮೀಜಿ ಕುಟುಕಿದ್ದಾರೆ.
ಪಂಚಮಸಾಲಿಯಲ್ಲಿ ವಿಚಾರ ಕ್ರಾಂತಿ ಆಗಬೇಕಾಗಿದೆ. ಲಿಂಗಾಯತರಲ್ಲಿ ನೂರಾರು ನಾಯಕರಿದ್ದಾರೆ. ಎಲ್ಲಾ ಪಕ್ಷದಲ್ಲಿ ನಮ್ಮ ನಾಯಕರಿದ್ದಾರೆ. ಮೀಸಲಾತಿ ಕೊಡದಿದ್ದರೆ ನಮಗೆ ತೆಗದುಕೊಳ್ಳುವ ಶಕ್ತಿ ಇದೆ. ಪಂಚಮಸಾಲಿಯಲ್ಲಿ ಮಹಿಳೆಯರೇ ಪ್ರಭಾವಶಾಲಿಗಳು. ದಿಟ್ಟ ಹೋರಾಟಗಾರ್ತಿ ರಾಣಿ ಚನ್ನಮ್ಮ ಪಂಚಮಸಾಲಿ ಸಮುದಾಯದವರು ಎಂದು ಸ್ವಾಮೀಜಿ ಹೇಳಿದ್ದಾರೆ.
ಪತಿ ನೆನೆದು ಕಣ್ಣೀರಾದ ವಿನಯ್ ಕುಲಕರ್ಣಿ ಪತ್ನಿ ನನ್ನ ಪತಿ ಪಂಚಮಸಾಲಿ ಸಮುದಾಯದ ಪರವಾಗಿ ಇರುತ್ತಾರೆ. ಪಾದಯಾತ್ರೆ ಮಾಡುವುದು ವಿನಯ್ ಕುಲಕರ್ಣಿ ಕನಸಾಗಿತ್ತು ಎಂದು ಪಂಚಮಸಾಲಿ ಮೀಸಲಾತಿ ಸಮಾವೇಶದಲ್ಲಿ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಭಾವುಕರಾಗಿದ್ದಾರೆ. ವಿನಯ್ ಕುಲಕರ್ಣಿ ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದಾರೆ. ಹೀಗಾಗಿ, ಅವರಿಗೆ ಸಮಾವೇಶದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿಲ್ಲ. ಸಮಾವೇಶದಲ್ಲಿ ಪತಿಯನ್ನು ನೆನೆದು ವಿನಯ್ ಕುಲಕರ್ಣಿ ಪತ್ನಿ ಕಣ್ಣೀರು ಹಾಕಿದ್ದಾರೆ.
ಮಾರ್ಚ್ 4ರವರಗೆ ಸರ್ಕಾರಕ್ಕೆ ಗಡುವು ಕೊಡಲಾಗಿದೆ. ಮಾರ್ಚ್ 4ರ ಬಳಿಕ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಪಂಚಮಸಾಲಿ ಮುಖಂಡ ರವಿಕಾಂತ್ ಪಾಟೀಲ್ ತಿಳಿಸಿದ್ದಾರೆ.
ಪಂಚಮಸಾಲಿ ಸಮುದಾಯದ 2A ಮೀಸಲಾತಿ ಬೇಡಿಕೆ ಹೋರಾಟ ತಾರಕಕ್ಕೇರಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನಲ್ಲಿ ಸಂಜೆ 7ಕ್ಕೆ ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಪಂಚಮಸಾಲಿಗರ ಹೋರಾಟ ಸಂಬಂಧ ಮಾತನಾಡಬಹುದು ಎಂಬ ಬಗ್ಗೆ ಕುತೂಹಲ ಉಂಟಾಗಿದೆ. ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್ ಹಾಗೂ ಉಳಿದ ಶಾಸಕರು ಮುಖ್ಯಮಂತ್ರಿಗೆ ಸಂಪೂರ್ಣ ಮಾಹಿತಿ ನೀಡಿ ಹೊರಬಂದಿದ್ದಾರೆ. ಬಳಿಕ, ಕಾವೇರಿ ನಿವಾಸದ ಆವರಣದಲ್ಲಿ ಸಚಿವ ನಿರಾಣಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
ಮೀಸಲಾತಿ ಸಿಗೋವರೆಗೂ ಧರಣಿ ಮಾಡುತ್ತೇವೆ ಎಂದು ವಿಜಯಾನಂದ ಕಾಶಪ್ಪನವರ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರ ಮೀಸಲಾತಿ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಹಾಗೆಯೇ ನಾವೂ ಕೂಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಮೀಸಲಾತಿ ಸಿಗುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಕಾಶಪ್ಪನವರ್ ಗುಡುಗಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪಾದಯಾತ್ರೆ ಸದ್ದು; ಸಂಜೆ 7ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿ
ಮಾ.4ರೊಳಗೆ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ರೆ ಅಮರಣಾಂತ ಸತ್ಯಾಗ್ರಹ -ಜಯಮೃತ್ಯುಂಜಯಶ್ರೀ ವಾರ್ನಿಂಗ್
Published On - 6:36 pm, Sun, 21 February 21