ಬೆಂಗಳೂರು: ಹಲವಾರು ವಿನೂತನ ಪ್ರತಿಭಟನೆಗಳ ರೂವಾರಿಯಾಗಿರುವ ಕನ್ನಡ ಪರ ಹೋರಾಟಗಾರ ಕರ್ನಾಟಕ ಬಂದ್ ವೇಳೆ ಡಿಫರೆಂಟ್ ಆಗಿ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ಹಾಗೂ APMC ತಿದ್ದುಪಡಿ ಕಾಯ್ದೆಗಳನ್ನ ವಿರೋಧಿಸಿ ಇಂದು ಇದೇ ಗೆಟಪ್ನಲ್ಲಿ ಪ್ರತಿಭಟನೆ ನಡೆಸಿದರು. ಎರಡು ಸರ್ಕಾರಗಳು ಜಾರಿಮಾಡಿರುವ ಕಾಯ್ದೆಗಳನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ವಾಟಾಳ್ ನಾಗರಾಜ್ರಿಗೆ ಕನ್ನಡ ಒಕ್ಕೂಟದ ಮುಖಂಡರಾದ ಸಾ.ರಾ ಗೋವಿಂದು, KR ಕುಮಾರ್ ಮತ್ತು ಗಿರೀಶ್ ಗೌಡ ಸಾಥ್ ನೀಡಿದರು. ನಾಯಕರು ಹಾಗೂ ಅವರ ಬೆಂಬಲಿಗರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.